Wednesday, November 29, 2023
spot_img
- Advertisement -spot_img

ಸಚಿವರಿಂದ ದೌರ್ಜನ್ಯ ಆರೋಪ : ದಲಿತ ಮಹಿಳೆಯ ಮನೆಗೆ ಬಿಜೆಪಿ ನಿಯೋಗ ಭೇಟಿ

ಬೆಂಗಳೂರು : ಸಚಿವ ಡಿ.ಸುಧಾಕರ್‌ ಅವರಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾದ ಕುಟುಂಬವನ್ನು ಇಂದು ಬಿಜೆಪಿ ನಿಯೋಗ ಭೇಟಿ ಮಾಡಿ ಮಾಹಿತಿ ಪಡೆಯಿತು.

ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಎನ್.ರವಿಕುಮಾರ್ ಸೇರಿದಂತೆ ಪ್ರಮುಖರನ್ನು ಒಳಗೊಂಡ ಬಿಜೆಪಿ ದಲಿತ ನಿಯೋಗ ದೌರ್ಜನ್ಯಕ್ಕೊಳಗಾದ ಮುನಿಯಮ್ಮ ಅವರ ಯಲಹಂಕದ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ, ಯಲಹಂಕದಲ್ಲಿ ಸರ್ಕಾರವೇ ಗೂಂಡಾಗಿರಿ ನಡೆಸ್ತಿದೆ. ದಲಿತರ ಆಸ್ತಿ ಕಬಳಿಸುವ ಕೆಲಸ ಮಾಡ್ತಿದೆ. ದಲಿತರ ಮೇಲೆ ದೌರ್ಜನ್ಯದ ಆರೋಪ ಹೊತ್ತಿರುವ ಸಚಿವ ಸುಧಾಕರ್‌ರನ್ನು ಸಂಪುಟದಿಂದ ವಜಾ ಮಾಡಬೇಕು. ಗೂಂಡಾಗಳು ಅಕ್ರಮವಾಗಿ ಶೆಡ್‌ ಕಟ್ಟಿ ಕುಳಿತಿದ್ದಾರೆ. ರಾಜ್ಯದ ರಾಜಧಾನಿಯಲ್ಲಿ ಇಂತಹ ಘಟನೆ ನಡೆದಿರುವ ಸ್ವಾತಂತ್ರ್ಯ ನಂತರ ಇದೇ ಮೊದಲು. ದಲಿತರ ವೋಟು ಪಡೆದು ಅಧಿಕಾರಕ್ಕೆ ಬಂದವರು ದಲಿತರ ರಕ್ಷಣೆ ಮಾಡ್ತಿದ್ದಾರಾ? ಇಲ್ಲ ದಲಿತರಿಗೆ ಸಮಸ್ಯೆ ಕೊಡ್ತಿದ್ದಾರಾ? ಎಂದು ಪ್ರಶ್ನಿಸಿದರು.

ವಿವಾದಿತ ಸ್ಥಳದಲ್ಲಿ ಹೈಡ್ರಾಮಾ : ಬಿಜೆಪಿ ನಾಯಕರು ಸಚಿವ ಸುಧಾಕರ್ ಅವರಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ ಎನ್ನಲಾದ ಮುನಿಯಮ್ಮ ಮನೆಗೆ ಭೇಟಿ ನೀಡಿದ್ದ ವೇಳೆ, ಅವರ ಕುಟುಂಬಸ್ಥರು ಅತಿಕ್ರಮಣ ಸ್ಥಳಕ್ಕೆ ತೆರಳಿ ಶೆಡ್ ಒಳಗೆ ಕುಳಿತಿದ್ದ ಸಚಿವ ಸುಧಾಕರ್ ಬೆಂಬಲಿಗರ ಜೊತೆ ವಾಗ್ವಾದ ನಡೆಸಿದರು. ಸಚಿವರು ಗೂಂಡಾಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದರು. ಶೆಡ್ ಒಳಗಿದ್ದ ಸಾಮಾನುಗಳನ್ನು ರಸ್ತೆಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಶೆಡ್ ಕಟ್ಟಿ ಕುಳಿತ ಸಚಿವ ಸುಧಾಕರ್ ಬೆಂಬಲಿಗರು

ಇದನ್ನೂ ಓದಿ : ಸುಧಾಕರ್ ನಿಮ್ಮ ಸ್ಥಾನಕ್ಕೆ ತಕ್ಕಂತೆ ಜವಾಬ್ದಾರಿಯಿಂದ ವರ್ತಿಸಿ : ಬಿ.ವೈ ವಿಜಯೇಂದ್ರ

ಸೆವೆನ್‌ ಹಿಲ್ಸ್‌ ಡೆವಲಪರ್ಸ್‌ ಮತ್ತು ಟ್ರೇಡರ್ಸ್‌ ಕಂಪನಿಯ ಪಾಲುದಾರರಾದ ಸಚಿವ ಸುಧಾಕರ್‌ ಅವರು ಮೋಸದಿಂದ ಯಲಹಂಕ ಗ್ರಾಮದ ಸರ್ವೆ ನಂಬರ್‌ 108/1ರ ಜಮೀನು ಕಬಳಿಸಿದ್ದಾರೆ. ಈ ಜಮೀನಿನ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಸಚಿವರು ಗುಂಪು ಕಟ್ಟಿಕೊಂಡು ಬಂದು ದೌರ್ಜನ್ಯ ಎಸಗಿದ್ದಾರೆ. ಮನೆಯಲ್ಲಿದ್ದ ತಮ್ಮ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕುಟುಂಬದ ಮಹಿಳೆಯರನ್ನು ಹೊರಗೆ ಎಳೆದೊಯ್ದು ಜೆಸಿಬಿ ಮೂಲಕ ಮನೆ ಕೆಡವಿಸಿದ್ದಾರೆ ಎಂದು ಮುನಿಯಮ್ಮ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles