Wednesday, November 29, 2023
spot_img
- Advertisement -spot_img

ಮತದಾರರಿಗೆ ಬಿಜೆಪಿ ಹಣ, ಮದ್ಯ ಹಂಚುತ್ತಿದೆ: ಕಮಲ್‌ನಾಥ್ ಆರೋಪ

ಭೋಪಾಲ್/ ಮಧ್ಯಪ್ರದೇಶ: ರಾಜ್ಯ ವಿಧಾನಸಭಾ ಚುನಾವಣೆಯ ಹಿಂದಿನ ದಿನ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತದಾರರಿಗೆ ಹಣ ಮತ್ತು ಮದ್ಯ ಹಂಚುತ್ತಿದೆ ಎಂದು ಮಾಜಿ ಸಿಎಂ ಕಮಲ್ ನಾಥ್ ಆರೋಪಿಸಿದ್ದಾರೆ

ಇಲ್ಲಿನ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿಯಲ್ಲಿ ಪೊಲೀಸ್, ಹಣ ಮತ್ತು ಆಡಳಿತ ಮಾತ್ರ ಉಳಿದಿದೆ. ಅವರು ನಿನ್ನೆ ಇಡೀ ದಿನ ಹಣ ಮತ್ತು ಮದ್ಯವನ್ನು ಹಂಚಿದ್ದಾರೆ, ನನಗೆ ಹಲವಾರು ವಿಡಿಯೋಗಳು ಬಂದಿವೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧದಲ್ಲಿ ನಾಗರಿಕರ ಸಾವಿಗೆ ಭಾರತ ಖಂಡನೆ!

ಕಾಂಗ್ರೆಸ್ ಗೆದ್ದರೆ ಪಾಕಿಸ್ತಾನದಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂಬ ನರೋತ್ತಮ್ ಮಿಶ್ರಾ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನದ ಬಗ್ಗೆ ಮಾತನಾಡುವ ಮೊದಲು ಅವರು ಚುನಾವಣೆಯಲ್ಲಿ ಗೆಲ್ಲುತ್ತಾರೆಯೇ ಎಂದು ಮೊದಲು ನೋಡಿಕೊಳ್ಳಲಿ. ಅವರ ಗೆಲುವು ಕಷ್ಟ ಎನಿಸಿದಾಗಲೆಲ್ಲ ಪಾಕಿಸ್ತಾನ ನೆನೆಯುತ್ತಾರೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: Telangana Election 2023: ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್!

ಮಧ್ಯ ಪ್ರದೇಶದ ಮತದಾರರು ಸತ್ಯದ ಪರವಾಗಿ ನಿಲ್ಲುತ್ತಾರೆ. ಡಿಸೆಂಬರ್ 3ರಂದು ಸತ್ಯದ ಪರವಾದ ಫಲಿತಾಂಶ ಬರಲಿದೆ. ಬಿಜೆಪಿ ಮೊದಲು ಸಿಎಂ ಅಭ್ಯರ್ಥಿ ಯಾರೆಂಬುದನ್ನು ಜನತೆ ಮುಂದೆ ಘೋಷಿಸಲಿ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ತಿರುಗೇಟು ನೀಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles