ಬೆಂಗಳೂರು : ಬಿಜೆಪಿ ರಾಜ್ಯ ಚುನಾವಣಾ ಪ್ರಚಾರ ಸಮಿತಿ, ರಾಜ್ಯ ಕೋರ್ ಕಮಿಟಿ ಸಭೆ ನಡೆಯಿತು. ಅಮಿತ್ ಷಾ ರವರ ನೇತ್ಋತ್ವದಲ್ಲಿ ನಡೆದ ಸಭೆಯಲ್ಲಿಟಿಕೆಟ್ ಹಂಚಿಕೆ ಬಗ್ಗೆ ಚರ್ಚಿಸಲಾಗಿದೆ.
ಜಿಲ್ಲಾ ಸಮಿತಿಗಳಿಂದ ರಾಜ್ಯ ಘಟಕಕ್ಕೆ ಸಂಭಾವ್ಯರ ಪಟ್ಟಿ ರವಾನೆ ಬಗ್ಗೆ ಮಾಹಿತಿ, ಕ್ಷೇತ್ರವಾರು ಆಕಾಂಕ್ಷಿಗಳ ಪಟ್ಟಿಯ ಬಗ್ಗೆಯೂ ವಿವರ ಪಡೆದುಕೊಂಡರು. ಮನೆ, ಮನೆ ಪ್ರಚಾರ ಚುರುಕುಗೊಳಿಸಲು ಸೂಚನೆ, ಡಬಲ್ ಇಂಜಿನ್ ಸರ್ಕಾರಗಳ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವುದು, ದುರ್ಬಲ ಕ್ಷೇತ್ರಗಳನ್ನು ಬಲಪಡಿಸಲು ನೀಡಿದ್ದ ಗುರಿ ಪ್ರಗತಿ ಬಗ್ಗೆಯೂ ಅಮಿತ್ ಶಾ ಮಾಹಿತಿ ಪಡೆದರು.
ಈ ವೇಳೆ ಸಿಟಿ ರವಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಪರ ವಾತಾವರಣ ಇದೆ. ಕಳೆದ ಕೆಲ ತಿಂಗಳ ಸಂಘಟನೆ ಪರಿಣಾಮ ನಮ್ಮ ಪರ ಅಲೆ ಇದೆ. ಕಾರ್ಯಕರ್ತರಲ್ಲಿ ಉತ್ಸಾಹ ಇದೆ. ನಾವು ಗೆಲ್ಲೋದು ನಿಶ್ಚಿತ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಹೀಗಾಗಿ ಎಲ್ಲರೂ ಬಿಜೆಪಿ ಗೆಲ್ಲಿಸಲು ಪಣ ತೊಡಬೇಕು ಎಂದರು.
ಈ ವೇಳೆ ಮಾಜಿ ಸಿಎಂ ಬಿಎಸ್ ವೈ, ಸಿಎಂ ಬೊಮ್ಮಾಯಿ, ಪ್ರಹ್ಲಾದ್ ಜೋಷಿ ಹಾಜರಿದ್ದರು.