ಧಾರವಾಡ : ನಮ್ಮ ಇಲಾಖೆಯಲ್ಲಿ ಬಹಳಷ್ಟು ಸಮಸ್ಯೆ ಇದೆ , ಹೈದ್ರಾಬಾದ್ ಕರ್ನಾಟಕದ ಶಿಕ್ಷಕರ ನೇಮಕಾತಿ ಹೈಕೋರ್ಟ್‌ನಲ್ಲಿದೆ. ಕೋರ್ಟ್ ತೀರ್ಮಾನ ಬಂದ ಮೇಲೆ ಶಿಕ್ಷಕರಿಗೆ ಅನ್ಯಾಯವಾಗದಂತೆ, ತಕ್ಷಣವೇ ನೇಮಕಾತಿ ಪ್ರಕ್ರಿಯೆ ಶುರು ಮಾಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಧಾರವಾಡಲ್ಲಿ ಮಾತನಾಡಿ, ರಾಜ್ಯದಲ್ಲಿ 40 ಸಾವಿರಕ್ಕಿಂತಲೂ ಹೆಚ್ಚು ಅತಿಥಿ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು, ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಅವ್ಯವಹಾರ ಆಗಿದೆ ಎಂದು ಬಿಜೆಪಿ ನಾಯಕರು ಆರೋಪ ಮಾಡ್ತಾರೆ ಅವರಿಗೆ ಕಾಮನ್ಸೆನ್ಸ್ ಇಲ್ಲ, ನುಡಿದಂತೆ ನಡೆಯುವ ಸರ್ಕಾರ ನಮ್ಮದು.
ಪ್ರಧಾನಿ ಮೋದಿ ರಾಜ್ಯದ ನಾಯಕರಿಗೆ ಒಳ್ಳೆಯ ಸ್ಥಾನ ಕೊಟ್ಟು , ಬ್ಯಾರಿಕೇಡ್ ಬಳಿ ನಿಲ್ಲಿಸಿದ್ದಾರೆ ಎಂದರು.
ಇದನ್ನೂ ಓದಿ: ಕೋವಿಡ್ ಅಕ್ರಮದ ತನಿಖೆ ರಾಜಕೀಯ ಪ್ರೇರಿತ: ಕೆ.ಸುಧಾಕರ್
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಬಿಜೆಪಿಯವರೇ ಅರ್ಜಿ ಹಾಕಿದ್ದಾರೆ, ಸರ್ಕಾರ ಗ್ಯಾರಂಟಿ ಯೋಜನೆ ಮೊದಲು ಘೋಷಣೆ ಮಾಡಿತ್ತು. ಆಗ ಬಿಜೆಪಿಯವರು ಟೀಕೆ ಟಿಪ್ಪಣಿ ಮಾಡಿದ್ದರು, ಆದರೆ ಬಿಜೆಪಿ ಮುಖಂಡರ ಮನೆಯವರೇ ಅರ್ಜಿ ಹಾಕಿದ್ದಾರೆ ಎಂದು ಲೇವಡಿ ಮಾಡಿದ್ರು.
ಬಸ್‌ನಲ್ಲಿ ಹೆಚ್ಚು ಉಚಿತ ಓಡಾಡುತ್ತಿರೋದೆ ಬಿಜೆಪಿಯವರು. ಅವರು ಓಡಾಡಲಿ ನಮ್ಮ ವಿರೋಧ ಇಲ್ಲ, ಅವರು ನಮ್ಮ ಪ್ರಜೆಗಳು ಎಂಬ ಭಾವನೆ ನಮ್ಮಲ್ಲಿದೆ, ಹೀಗಾಗಿ ಟೀಕೆ ಟಿಪ್ಪಣಿ ನಿಲ್ಲಿಸಲಿ, ನಾವು ಮಾಡುವ ಕೆಲಸ ಭೇಷ್ ಅಂತಾ ಹೇಳಲಿ. ನಾವು ನುಡಿದಂತೆ ನಡೆದಿದ್ದೇವೆ , ಅನೇಕರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಬೇರೆ ಬೇರೆಯವರು ಪಕ್ಷಕ್ಕೆ ಬರಬೇಕು, ಪಕ್ಷದ ಸಿದ್ಧಾಂತ ಒಪ್ಪಿ ಬರುವವರೆಲ್ಲ ಬರಲಿ ಎಂದು ತಿಳಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.