ಕಲಬುರಗಿ : ನಮ್ಮ ಗ್ಯಾರಂಟಿಗಳು ಆರ್ಥಿಕ, ಸಾಮಾಜಿಕ ನ್ಯಾಯದ ಪರವಿದ್ದು, ಬೇರೆ ಕೆಲಸ ಇಲ್ಲದೇ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಟೀಕೆ ಮಾಡುತ್ತಿದೆ ಎಂದು ಐಟಿಬಿಟಿ ಗ್ರಾಮೀಣ ಅಭಿವೃದ್ಧಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಬಿಜೆಪಿ ಒಂದೊಂದು ರಾಜ್ಯ ಕಳೆದುಕೊಳ್ಳುತ್ತಿದೆ, ಚುನಾವಣೆ ಸೋಲಿನ ಭಯದಿಂದ ಯೋಜನೆಗಳು ಪ್ರಾರಂಭ ಮಾಡುತ್ತಿದೆ, ಇದು ಚುನಾವಣೆ ಗಿಮಿಕ್ ಅಷ್ಟೇ, ಚುನಾವಣೆ ಹತ್ತಿರ ಬಂದಿದೆ ಅಂತಾ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯನವರ ಬಗ್ಗೆ ಮಾತನಾಡುವುದಷ್ಟು ದೊಡ್ಡವರು ಸಂಸದ ಉಮೇಶ ಜಾಧವ್ ಅಲ್ಲ, ಬಣ್ಣ ಬದಲಾಯಿಸುವ ಬಗ್ಗೆ ಅವರು ಮಾತನಾಡಬಾರದು, ಉಮೇಶ ಜಾಧವ್ ಅವರೇ ತಾವು ಯಾವುದು ರೀತಿಯಲ್ಲಿ ಬಣ್ಣ ಬದಲಾಯಿಸಿದ್ರಿ ಕಾಂಗ್ರೆಸ್ ನವರಿಗೆ ಗೊತ್ತು, ಈಗ ಬಿಜೆಪಿ ಅವರಿಗೆ ಗೊತ್ತಾಗುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ‘ಎಲ್‌ಪಿಜಿ ದರ ಇಳಿಕೆ ‘ರೇವಡಿ ಸಂಸ್ಕೃತಿ’ಯಲ್ಲವೇ?’; ಕಪಿಲ್ ಸಿಬಲ್
ನಾನು ಕಳೆದ ಬಾರಿ ಸಚಿವನಾಗಿದ್ದಾಗ ಜಿಲ್ಲೆಗೆ ಸಾಕಷ್ಟು ಅನುದಾನ ತಂದಿದ್ದೇನೆ, ಈಗ ಸಹ ಸಚಿವನಾಗಿ ಬದಲಾವಣೆ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಅದಕ್ಕೆ ಮಾತನಾಡುತ್ತೇನೆ, ನಮ್ಮ ಜಿಲ್ಲೆಗೆ ಸಂಸದರ ಕೊಡುಗೆ ಏನು ಎಂದು ಹೇಳಲಿ, ನಾವು ತಂದ ಯೋಜನೆಗಳು ಉಳಿಸಿಕೊಳ್ಳಲು ಯೋಗ್ಯತೆ ಇಲ್ಲ, ಕೇಂದ್ರ ಸರ್ಕಾರದಿಂದ ಯಾವ ಯೋಜನೆಯಲ್ಲಿ ಎಷ್ಟು ಅನುದಾನ ಬಂದಿದೆ ಜನರಿಗೆ ತೋರಿಸಲಿ ಎಂದು ಆಕ್ರೋಶಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.