ಕೊಪ್ಪಳ : ರಾಜ್ಯದ ಬಿಜೆಪಿ ನಾಯಕರಿಗೆ ಹೀನಾಯ ಪರಿಸ್ಥಿತಿ ಬಂದಿದೆ ಎಂದು ಮೊನ್ನೆ ಮೋದಿ ಬಂದಾಗಲೇ ಗೊತ್ತಾಯ್ತು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ವ್ಯಂಗ್ಯವಾಡಿದರು.
ಮೋದಿ ರೋಡ್ ಶೋ ವೇಳೆ ಬಿಜೆಪಿ ನಾಯಕರು ಬ್ಯಾರಿಕೇಡ್ ನಲ್ಲಿ ನಿಂತ ವಿಚಾರವಾಗಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದರು. ಮೋದಿ ಆಗಮನದ ವೇಳೆ ಬಿಜೆಪಿ ನಾಯಕರು ಫುಟ್‌ಪಾತ್ ನಲ್ಲಿ ನಿಂತಿದ್ದನ್ನು ಮಾಧ್ಯಮದಲ್ಲಿ ನೋಡಿದೆ, ರಾಜ್ಯ ನಾಯಕರ ಪರಿಸ್ಥಿತಿ ಏನಾಗಿದೆ.. ಯಾವ ಕಾರಣಕ್ಕೆ ಅವರನ್ನ ಅಲ್ಲಿ ನಿಲ್ಲಿಸಿದರು, ಯಾವ ಕಾರಣಕ್ಕೆ ಭೇಟಿಗೆ ಅವಕಾಶ ನೀಡಲಿಲ್ಲ, ಜನರಿಗೆ ಅನೇಕ ಸುಳ್ಳು ಭರವಸೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ‘ಸಿಡಬ್ಲ್ಯೂಆರ್‌ಸಿ’ ಮುಂದೆ ರಾಜ್ಯಕ್ಕೆ ಹಿನ್ನಡೆ: ತಮಿಳುನಾಡಿಗೆ 5 ಕ್ಯೂಸೆಕ್ ನೀರು ಬಿಡುವಂತೆ ಸೂಚನೆ!
ಬ್ಯಾರಿಕೇಡ್ ಹತ್ತಿ ಕೈ ಮಾಡುವುದನ್ನು ನೋಡಿದರೆ ಬಿಜೆಪಿ ದುಸ್ಥಿಗೆ ಹೋಗಿದೆ ಎಂದು ಅನ್ನಿಸುತ್ತದೆ,ಮುಂದೆನೂ ಮೋದಿಗೂ ಇದೇ ಸ್ಥಿತಿ ಬರಲಿದೆ,ಮೋದಿ ಆಗಮನದ ವೇಳೆ ಪ್ರೊಟೋಕಾಲ್ ಮೆಂಟೆನ್ ಮಾಡಿಲ್ಲ ಎಂದು ಬಿಜೆಪಿ ನಾಯಕರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಪ್ರೊಟೋಕಾಲ್ ಮೆಂಟೆನ್ ಮಾಡುವುದು ಎಸ್ ಪಿ ಜಿ ಅವರು, ಬಿಜೆಪಿ ನಾಯಕರ ಭೇಟಿಗೆ ಅವಕಾಶ ನೀಡದ್ದಕ್ಕೆ ಅಸಮಧಾನದಿಂದ ಹೇಳಿರಬಹುದು, ಬಿಜೆಪಿ ನಾಯಕರು ಫುಟಪಾತ್ ಮೇಲೆ ನಿಂತಿರುವುದನ್ನು ನೋಡಿದರೆ, ರಾಜ್ಯದ ಬಿಜೆಪಿ ನಾಯಕರಿಗೆ ಎಷ್ಟು ಬೆಲೆ ಕೊಡ್ತಾರೆ, ಯಾವ ಮಟ್ಟಿಗೆ ನೋಡ್ತಾರೆ, ಆ ಪಾರ್ಟಿಯಲ್ಲಿ ಡಿಕ್ಟೆಟರ್ ಶಿಪ್ ಇದೆ ಎನ್ನುವುದು ಗೊತ್ತಾಗುತ್ತದೆ ಎಂದು ವ್ಯಂಗ್ಯವಾಡಿದರು.
ಪ್ರಧಾನಿಯವರ ಆಡಳಿತ ಯಂತ್ರ ಕುಸಿಯುತ್ತಿದೆ,ರಾಜ್ಯದ ನಾಯಕರನ್ನು ನಿರ್ಲಕ್ಷ್ಯಿಸುತ್ತಿದ್ದಾರೆ, ಅವರೂ ಸಹ ಮುಂದೆ ಇದೇ ಸ್ಥಿತಿಗೆ ಬರುತ್ತಾರೆ, ಸಿಎಂ, ಡಿಸಿಎಂ ಹಾಗೂ ಪಕ್ಷದ ವರಿಷ್ಠರು ತಂದಿರುವ ಗ್ಯಾರಂಟಿ ಕಾರ್ಯಕ್ರಮಗಳು ಜನರಿಗೆ ನೇರವಾಗಿ ಮುಟ್ಟುತ್ತವೆ ಎಂದು ವಿವರಿಸಿದರು.
ಗೃಹಲಕ್ಷ್ಮೀ 30 ರಂದು ಉದ್ಘಾಟನೆ ಆಗುತ್ತದೆ, ಅನ್ನಭಾಗ್ಯ, ಶಕ್ತಿ, ಗೃಹ ಜ್ಯೋತಿ ಯೋಜನೆ ಆರಂಭವಾಗಿದೆ, ಇವೆಲ್ಲ ಗ್ಯಾರಂಟಿ ಗಳು ಸಂಪೂರ್ಣವಾಗಿ ಆಗುತ್ತವೆ, ಮೋದಿ ಅವರೂ ಸಹ ಮುಂದೆ ಒಂದು ದಿನ ಸ್ಥಿತಿಗೆ ಬರುತ್ತಾರೆ ಎಂದರು. 2024 ರಲ್ಲಿ ಮೋದಿಯವರನ್ನೇ ಪ್ರಧಾನಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ನೋಡೋಣ ಜನರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ, ರಾಜ್ಯದಲ್ಲಿ ಇದೇ ರೀತಿ ಹೇಳುತ್ತಿದ್ದರು, ಮಾಧ್ಯಮದಲ್ಲಿ ನೋಡುತ್ತಿದ್ದೇವು, ರಾಜ್ಯದ ನಿರೀಕ್ಷೆ ಮೀರಿ ಫಲಿತಾಂಶ ಬಂದಿದೆ, ಅದೇ ರೀತಿ ಮುಂದೆನೂ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಬರುತ್ತದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.