ಭೋಪಾಲ್ : ‘ಬಿಜೆಪಿಯಿಂದಾಗಿ ಮಧ್ಯಪ್ರದೇಶ ದಲಿತ ದೌರ್ಜನ್ಯಗಳ ಪ್ರಯೋಗಾಲ’ಯವಾಗಿ ಮಾರ್ಪಟ್ಟಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಗರ ಜಿಲ್ಲೆ ಬರೋಡಿಯ ನೈನಾಗಿರ್ ಗ್ರಾಮದಲ್ಲಿ ನಡೆದ ದಲಿತ ಯುವಕನ ಹತ್ಯೆ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಿಡಿಕಾರಿದ್ದಾರೆ. ಮಧ್ಯಪ್ರದೇಶದಿಂದ ಬಿಜೆಪಿ ತೊಲಗಬೇಕು ಎಂದು ಹೇಳಿದ್ದಾರೆ.
‘ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ದಲಿತ ಯುವಕನನ್ನು ಹೊಡೆದು ಕೊಲ್ಲಲಾಗಿದೆ. ಗೂಂಡಾಗಳು ಆತನ ತಾಯಿ ಮೇಲೂ ದಾಳಿ ಮಾಡಿದ್ದಾರೆ. ಸಾಗರ್ ಜಿಲ್ಲೆಯಲ್ಲಿ ಸಂತ ರವಿದಾಸ್ ಮಂದಿರವನ್ನು ನಿರ್ಮಿಸುವುದಾಗಿ ಹೇಳುತ್ತಿರುವ ಪ್ರಧಾನಿ, ದಲಿತರು ಮತ್ತು ಆದಿವಾಸಿಗಳ ಮೇಲಿನ ನಿರಂತರ ದಬ್ಬಾಳಿಕೆ ಮತ್ತು ಅನ್ಯಾಯದ ವಿರುದ್ಧ ಒಂದು ಮಾತನ್ನೂ ಆಡುತ್ತಿಲ್ಲ’ ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ : ಚಂದ್ರಯಾನ ನವ ಭಾರತಕ್ಕೆ ಸ್ಫೂರ್ತಿ, ಜಿ 20ಗೆ ಭಾರತ ಸನ್ನದ್ಧ : ‘ಮೋದಿ ಮನ್ ಕಿ ಬಾತ್’
ಸಿಎಂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ವಾಗ್ದಾಳಿ ನಡೆಸಿರುವ ಖರ್ಗೆ, ‘ಮಧ್ಯಪ್ರದೇಶದ ಮುಖ್ಯಮಂತ್ರಿಗಳು ಕ್ಯಾಮರಾ ಮುಂದೆ ಹಿಂದುಳಿದವರ ಪಾದಗಳನ್ನು ತೊಳೆಯುವ ಮೂಲಕ ತಮ್ಮ ಅಪರಾಧವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಬಿಜೆಪಿ ಮಧ್ಯಪ್ರದೇಶವನ್ನು ದಲಿತ ದೌರ್ಜನ್ಯಗಳ ಪ್ರಯೋಗಾಲಯವನ್ನಾಗಿ ಮಾಡಿದೆ’ ಎಂದು ಕಿಡಿಕಾರಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.