Friday, September 29, 2023
spot_img
- Advertisement -spot_img

ʼಬಿಜೆಪಿಯವರ ಕರ್ಮಕಾಂಡ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆʼ

ಹುಬ್ಬಳ್ಳಿ : ಬಿಜೆಪಿ ಅವರು 10 ವರ್ಷ ಆಯ್ತು ಲೋಕ್ ಪಾಲ್ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡುತ್ತಿಲ್ಲ, ನಮ್ಮ ವಿರುದ್ಧ ಬಹಳ ಮಾತನಾಡುತ್ತಿದ್ದಾರೆ, ಕ್ಯಾಗ್ ರಿಪೋರ್ಟ್ ಬಂದಾಗಿದೆ ಎಂದು ಹುಬ್ಬಳ್ಳಿಯಲ್ಲಿ ಸಚಿವ ಸಂತೋಷ್ ಲಾಡ್ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿ, ರೆಫೈಲ್ ಡೀಲ್ ಮುಚ್ಚಿ ಹೋಗಿದೆ ನಾನು ಮಾತನಾಡಲ್ಲ, ಈಗಿರುವ ಕ್ಯಾಗ್ಸ್ ರಿಪೋರ್ಟ್ ನಲ್ಲಿ 6 ಜಾಗದಲ್ಲಿ ಸ್ಕ್ಯಾಮ್ ಆಗಿದೆ, ಇಂದಿರಾ ಗಾಂಧಿ, ಮನಮೋಹನ ಸಿಂಗ್ ಸೇರಿದಂತೆ ಹಲವರ ಕಾಲದಲ್ಲಿ ಆಗಿರುವ ಕೇಂದ್ರ ಸರ್ಕಾರದ ಸೆಂಟರ್ ಗಳು, ಹೆಚ್ಚು ಮಾರಾಟ ಆಗಿರೋದು ಇವರ ಕಾಲದಲ್ಲಿ, ಪ್ರಚಾರ ಗಿಟ್ಟಿಸಿಕೊಳ್ಳೋದನ್ನ ಬಿಟ್ರೆ, ಕಳೆದ 10 ವರ್ಷದಲ್ಲಿ ಯಾವುದೇ ಲಾಭ ಆಗಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ : ಚಂದ್ರಯಾನ ನವ ಭಾರತಕ್ಕೆ ಸ್ಫೂರ್ತಿ, ಜಿ 20ಗೆ ಭಾರತ ಸನ್ನದ್ಧ : ‘ಮೋದಿ ಮನ್ ಕಿ ಬಾತ್’

ಚುನಾವಣೆ ಇದೆ ಗಿಮಿಕ್ ಸಹಿತ ನಡಿಯುತ್ತೆ, ಸಾವಿರಾರು ಕೋಟಿ ಸರ್ಕಾರದ ದುಡ್ಡು ಖರ್ಚು ಮಾಡಿ ಪ್ರಚಾರ ಗಿಟ್ಟಿಸಿಕೊಳ್ಳೋದ್ರಲ್ಲಿ ಬಿಜೆಪಿ ಮುಂದೆ ಇದೆ, ಮುಂದಿನ ದಿನಗಳಲ್ಲಿ ಯಾರು ಸರಿ, ತಪ್ಪು ಅಂತ ಜನ ಪಾಠ ಕಲಿಸ್ತಾರೆ, ಪ್ರಲ್ಹಾದ್ ಜೋಶಿ ಅವರು ನಮಗೆ ಭ್ರಷ್ಟಾಚಾರ ಅಂತಾರೆ, ಅನಿಲ್ ಅಂಬಾನಿ ಕಂಪನಿ ಅವರು ಒಂದು ಸೈಕಲ್ ನೂ ಮಾಡಿಲ್ಲ, ಅವರಿಗೆ ಹೆಲಿಕಾಪ್ಟರ್ ಮಾಡಲು ಕೊಡ್ತಿರಲ್ಲ ಇದು ಯಾವ ಧರ್ಮ?ಅನುಭವ ಇಲ್ಲದ ಕಂಪನಿ ಅವರಿಗೆ ಫ್ರಾನ್ಸ್ ಕಂಪನಿ ಅವರಿಗೆ ನೇರವಾಗಿ ಕಾಂಟ್ರಾಕ್ಟ್ ಕೊಡ್ತೀರಿ ಅಂದ್ರೆ ಇದು ನೇರ ಭ್ರಷ್ಟಾಚಾರ ತಾನೇ? ಎಂದು ಪ್ರಶ್ನಿಸಿದರು.

ಕೋವಿಡ್ ಸಂಧರ್ಭದಲ್ಲಿ 30 ಸಾವಿರ ಕೋಟಿ ಸಪ್ರೇಟ್ ಟ್ರಸ್ಟ್ ನಲ್ಲಿ ದುಡ್ಡು ತಗೊಂಡಿದ್ದಾರಲ್ಲ, ಇದಕ್ಕಿಂತ ಬೇರೆ ದೊಡ್ಡ ಉದಾಹರಣೆ ಏನು ಬೇಕು, ಪ್ರಧಾನ ಮಂತ್ರಿ ರಿಲೀಫ್ ಫಂಡ್ ಅಂತ ತಗೋ ಬಹುದಿತ್ತಲ್ಲ
ಬಿಜೆಪಿ ಅವರ ಕರ್ಮಕಾಂಡ ಮುಂದಿನ ದಿನಗಳಲ್ಲಿ ಕಾಣುತ್ತೆ, ಚುನಾವಣೆ ಬಂದಿದೆ ನಮ್ಮ ಸರ್ಕಾರದ ಹೆಸರು ಕೆಡಿಸಬೇಕು ಅಂತ ಎವಿಡೆನ್ಸ್ ಇಲ್ಲದೇ ಮಾತನಾಡುತ್ತಾರೆ, ಅವರ ಅಭಿವೃದ್ಧಿ ಬಗ್ಗೆ ಕೇಳಿ ಉತ್ತರ ಕೊಡೋದಿಲ್ಲ
ಪ್ರಧಾನ ಮಂತ್ರಿ ಯಾಕೆ ನೇರವಾಗಿ ಬಂದು ಪ್ರೆಸ್ ಮೀಟ್ ಮಾಡಲ್ಲ ಅನ್ನೋದೇ ನಮ್ಮ ಪ್ರಶ್ನೆ ಎಂದರು.

ನಿಮ್ಮ ರಿಟೈಡ್ ಆದ ಚೀಫ್ ಜೆಸ್ಟಿಸ್ ಗಳು ಈಗ ಎಲ್ಲಿದ್ದಾರೆ ?ಅವರು ಬೇರೆ ಬೇರೆ ಹುದ್ದೆಗಳಲ್ಲಿದ್ದಾರೆ. ನಾವು ಅದನ್ನು ಹೇಳ ಬಹುದಾ?ಅವರ ಇತಿಹಾಸ ತೆಗೆದು ನೋಡಿ, ಅವರಿಗೆ ಆರೋಪ ಮಾಡೋದನ್ನ ಬಿಟ್ಟು ಏನೂ ಇಲ್ಲಾ, ಅವರ ರೈಟ್ ಟು ಎಜುಕೇಷನ್ ಎಲ್ಲಿದೆ? ಯಾಕೆ ಮುಗಿತು? ಬಡವರ ಪರವಾಗಿ ಯಾವ ಕಾರ್ಯಕ್ರಮವನ್ನೂ ಮಾಡಿಲ್ಲ ಎಂದು ಆಕ್ರೋಶಿಸಿದರು. ನಾವು ಮಾಡಿದ ಕಾರ್ಯಕ್ರಮದ ಹೆಸರನ್ನು ಬದಲಾಯಿಸಿದ್ದಾರೆ, ಅವರ ಎಲ್ಲಾ ಕಾರ್ಯಕ್ರಮಗಳು ಎಲ್ಲಿವೆ? ಚುನಾವಣೆ ಬಂದಿದೆ ಪ್ರಚಾರ ಗಿಟ್ಟಿಸಿಕೊಳ್ತಾ ಇದ್ದಾರೆ, 5 ಸಾವಿರ ಕೋಟಿ ಮೋದಿ ಪ್ರಚಾರ, ಅಷ್ಟು ಪ್ರಚಾರ ಮಾಡಿಕೊಂಡ್ರೆ ಮಹಾನ್ ವ್ಯಕ್ತಿಯಂತೆ ಕಂಡೆ ಕಾಣ್ತಾರೆ,
40% ಭ್ರಷ್ಟಾಚಾರದ ಬಗ್ಗೆ ತನಿಖೆ ಆಗೇ ಆಗುತ್ತೆ, 10 ವರ್ಷ ಅಧಿಕಾರ ಇತ್ತಲ್ಲ ನಮ್ಮನ್ನ ಯಾಕೆ ಜೈಲಿಗೆ ಕಲಿಸಿಲ್ಲ, ಸಿಬಿಐ ಸೇರಿ ಎಲ್ಲವನ್ನು ಜೇಬಿನಲ್ಲಿಟ್ಟುಕೊಂಡು ತಿರುಗಾಡುವವರು, ಯಾರ್ಯಾರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೋ ಅವರೆಲ್ಲ ಎಲ್ಲಿದ್ದಾರೆ? ಬಿಜೆಪಿ ಅವರು ಅವಕಾಶ ವಾದಿಗಳು, ರಾಹುಲ್ ಗಾಂಧಿ ಸದಸ್ಯತ್ವ ತೆಗೆದ್ರು ಏನಾಯ್ತು ಎಲ್ಲದಕ್ಕೂ ಒಂದು ಕಾಲ ಇರುತ್ತೆ, ನಾವು ಪ್ರಶ್ನೆ ಕೇಳ್ತಿದ್ದೀವಿ ಉತ್ತರ ಕೊಡ್ತಾರಾ ಕೇಳಿ? ನರೇಂದ್ರ ಮೋದಿಯವರ ಅಜೆಂಡಾ ಜನಪ್ರಿಯತೆ, ರಾಹುಲ್ ಗಾಂಧಿ ಬಗ್ಗೆ ಒಬ್ಬ ಪ್ರಧಾನ ಮಂತ್ರಿ ಪಾರ್ಲಿಮೆಂಟ್ ನಲ್ಲಿ ಹೇಳ್ತಾರೆ

ಕವಿದ ಮೋಡ, ಹಮ್ನೆ ಸೊಚ್ಚಾ, ಬಾದಲ್ ಕೆ ನಿಚೆ ಹೆಲಿಕಾಪ್ಟರ್ ಲೇಕ್ ಜಾಯೇಂಗೆ ಇದ್ಯಾವ ಪ್ರಭುತ್ವ ಇದುಅದೇ ನಾವು ಮಾಡಿದ್ರೆ ಪಪ್ಪು ಅಂತ ಹೇಳ್ತಿರಿ, ಪ್ರಧಾನ ಮಂತ್ರಿ ಅವರು ಬುದ್ದಿವಂತರಿದ್ರೆ ಒಂದೇ ಗಂಟೆ ಮಾಧ್ಯಮದ ಮುಂದೆ ಬನ್ನಿ, ಕಟೀಲ್ ಹೇಳ್ತಾ ಇದ್ರೂ ಮೋದಿ ಅಧಿಕಾರಕ್ಕೆ ತನ್ನಿ 20-30 ರೂಪಾಯಿಗೆ ಡಾಲರ್ ತರ್ತೀವಿ ಅಂತ ಜೋಶಿ ಅವರಿಗೆ ಕೇಳಬೇಕಲ್ಲ, ಮೋದಿಯವರಿಗೆ ಬೈಯುತ್ತಿಲ್ಲ ಬೇಜಾರ್ ಆಗ್ತಿದೆ, ಗ್ರಾ. ಪಂ ನೀರು ಚನ್ನಾಗಿ ಬಂದ್ರೆ ಮೋದಿ ಕಾರಣ ಇಲ್ಲಾಂದ್ರೆ ರಾಜ್ಯ ಸರ್ಕಾರ ಕಾರಣ, ಹಿಂದೂ ಮುಸ್ಲಿಂ ಪಾಕಿಸ್ತಾನ್ ಅಂತಾರೆ, ಅವರು ಇನ್ನೊಬ್ರನ್ನ ಕೆಟ್ಟದಾಗಿ ತೋರಿಸಿ ಇವರು ದೊಡ್ಡದಾಗಿ ಬೆಳೆಯೋದು, ನೆಹರುರನ್ನು ಬೈಯೋದಕ್ಕೆ ನಿಮಗೆ ಅರ್ಹತೆ ಇದೆಯಾ? ಎಂದು ಪ್ರಧಾನಿ ಮೋದಿ ಇಮಿಟೇಟ್ ಮಾಡುವ ಮೂಲಕ ಮೋದಿ ವಿರುದ್ಧ ವ್ಯಂಗ್ಯವಾಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles