Sunday, October 1, 2023
spot_img
- Advertisement -spot_img

‘ಭಾರತವನ್ನು ಬದಲಿಸುತ್ತೇನೆ ಎಂದ ಬಿಜೆಪಿ ಬದಲಿಸಿದ್ದು ಹೆಸರು ಮಾತ್ರ’

ಬೆಂಗಳೂರು: ‘ಭಾರತವನ್ನು ಬದಲಾಯಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಕಳೆದ 9 ವರ್ಷಗಳ ನಂತರ ನಮಗೆ ಸಿಕ್ಕಿದ್ದು ಹೆಸರು ಬದಲಾವಣೆ’ ಮಾತ್ರ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಇಂಡಿಯಾ’ವನ್ನು ‘ಭಾರತ್’ ಎಂದು ಬದಲಿಸಲು ಕೇಂದ್ರ ಸರ್ಕಾರ ನಿರ್ಧರಿಸುವ ಬಗ್ಗೆ ಟ್ವೀಟ್ ಮಾಡಿ, ‘ಬಿಜೆಪಿಯೇತರ ಶಕ್ತಿಗಳು ಕೋಮುವಾದಿ ಆಡಳಿತವನ್ನು ಕಿತ್ತೊಗೆಯಲು ಒಂದಾದ ನಂತರ, ವಿಪಕ್ಷಗಳ ಮೈತ್ರಿಗೆ ಇಂಡಿಯಾ (I.N.D.I.A) ಎಂದು ಸೂಕ್ತವಾಗಿ ಹೆಸರಿಸಿದ ನಂತರ, ಈಗ ಬಿಜೆಪಿ ‘ಭಾರತ’ವನ್ನು ‘ಭಾರತ್’ ಎಂದು ಬದಲಾಯಿಸಲು ಬಯಸಿದೆ. ಭಾರತವನ್ನು ರೂಪಾಂತರಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಕಳೆದ 9 ವರ್ಷಗಳ ನಂತರ ನಮಗೆ ಸಿಕ್ಕಿದ್ದು ದೇಶದ ಹೆಸರು ಬದಲಾವಣೆ ಮಾತ್ರ’ ಎಂದು ಹೇಳಿದ್ದಾರೆ.

ಇದನ್ನೂ ಓದಿ; ವಿಶೇಷ ಸಂಸತ್ ಅಧಿವೇಶನದಲ್ಲಿ ‘ಇಂಡಿಯಾ’ವನ್ನು ‘ಭಾರತ್’ ಎಂದು ಮರುನಾಮಕರಣ ಸಾಧ್ಯತೆ!

‘ಬಿಜೆಪಿಯು ಇಂಡಿಯಾ ಎಂಬ ಒಂದೇ ಪದದಿಂದ ಗಲಿಬಿಲಿಗೊಂಡಂತೆ ತೋರುತ್ತಿದೆ. ಏಕೆಂದರೆ, ಅವರು ವಿಪಕ್ಷಗಳ ಏಕತೆಯ ಬಲವನ್ನು ಅರಿತಿದ್ದಾರೆ. ಮುಂದಿನ ಚುನಾವಣೆಯಲ್ಲಿ ‘ಭಾರತ’ ಬಿಜೆಪಿಯನ್ನು ಅಧಿಕಾರದಿಂದ ಓಡಿಸಲಿದೆ’ ಎಂದು ಹೇಳಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles