ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಬಿಜೆಪಿ ಮತ್ತೆ ಪಕ್ಷ ಸಂಘಟಿಸಲು ಮುಂದಾಗಿದೆ. ಇದೀಗ ಯುವ ನಾಯಕನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಿ ಮತ್ತೆ ಯುವ ಪಡೆ ಕಟ್ಟುವ ಮುನ್ಸೂಚನೆ ನೀಡಿದೆ. ಅದರಲ್ಲೂ ಪಕ್ಷಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅನಿವಾರ್ಯ ಎಂಬುದನ್ನು ಪರೋಕ್ಷವಾಗಿ ಹೈಕಮಾಂಡ್ ಅರಿತಂತಿದೆ.
2021ರಲ್ಲಿ ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ್ದ ಬಿಜೆಪಿಗೆ ಭಾರೀ ಹಿನ್ನೆಡೆ ಅನುಭವವಾಗಿತ್ತು. ಇದೇ ಕಾರಣಕ್ಕೆ ಬಿಎಸ್‌ವೈ ಪುತ್ರ ವಿಜಯೇಂದ್ರ ಅವರನ್ನು ಅಧ್ಯಕ್ಷ ಪಟ್ಟಕ್ಕೇರಿಸಿ ಮತ್ತೆ ಅಖಾಡಕ್ಕೆ ಧುಮುಕಿದೆ.
ರಾಜ್ಯದಲ್ಲಿ ಕಮಲ ಅರಳಿಸಲು ಇದು ಹೈಕಮಾಂಡ್‌ನ 2ನೇ ತಂತ್ರ ಎನ್ನಲಾಗಿದೆ. ಜೆಡಿಎಸ್ ಜೊತೆಗಿನ ಮೈತ್ರಿ ಮಾತು ಮೊದಲ ತಂತ್ರ ಎನ್ನಲಾಗಿದೆ. ಪ್ರಾದೇಶಿಕ ಪಕ್ಷ ಹಾಗೂ ವರಿಷ್ಠ ದೇವೇಗೌಡರ ವರ್ಚಸ್ಸನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದಲೇ ಮೈತ್ರಿಗೆ ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಗೌರಿಶಂಕರ್ ಕಾಂಗ್ರೆಸ್ ಸೇರ್ಪಡೆಯಿಂದ ನನಗೆ ಅನುಕೂಲವಾಗಲಿದೆ: ಹೆಚ್.ನಿಂಗಪ್ಪ
2008 ರಲ್ಲಿ ಮೊದಲ ಬಾರಿಗೆ ಅಧಿಕಾರ ಪಡೆದ ಬಿಜೆಪಿ ನಂತರ ಬಿಜೆಪಿಯ ಅತ್ಯಂತ ಕಳಪೆ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. 2013ರ ಚುನಾವಣೆಯಲ್ಲಿ ಅದು ಕ್ರಮವಾಗಿ ಕೇವಲ 17.9% ಮತ್ತು 19.9% ರಷ್ಟು ಸೀಟು ಹಂಚಿಕೆ ಮತ್ತು ಮತ ಹಂಚಿಕೆಯಾಗುವ ಮೂಲಕ ಹೀನಾಯ ಪರಿಸ್ಥಿತಿಗೆ ತಲುಪಿತು.
ಯಡಿಯೂರಪ್ಪ ಪಕ್ಷದಿಂದ ಹೊರನಡೆದು ಕರ್ನಾಟಕ ಜನತಾ ಪಕ್ಷ (ಕೆಜೆಪಿ) ಎಂಬ ಹೊಸ ಪಕ್ಷವನ್ನು ಸ್ಥಾಪಿಸಿದ ನಂತರ ಬಿಜೆಪಿ 2013 ರ ಚುನಾವಣೆಯಲ್ಲಿ ಸ್ಪರ್ಧಿಸಿತು. 2008 ಮತ್ತು 2013 ರ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕೆಜೆಪಿ ಸಹ ಪ್ರಮುಖ ಪಾತ್ರ ವಹಿಸಿತ್ತು. ಇದನ್ನು ಮನಗಂಡ ಹೈಕಮಾಂಡ್ ಮತ್ತೆ ಬಿಎಸ್‌ವೈ ಬಳಿ ರಾಜಿ ಸಂದಾನಕ್ಕಿಳಿದಿದ್ದು ತಿಳಿದಿರುವ ಸಂಗತಿ.
ಬಳಿಕ 2014ರ ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ನಾಯಕತ್ವದಲ್ಲೇ ಪಕ್ಷ ಮುನ್ನಡೆಸಲು ಹೈಕಮಾಂಡ್ ಯಶಸ್ವಿಯಾಗಿತ್ತು. ಹೀಗಾಗಿಯೇ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಬಹುಮತ ಪಡೆಯುವಲ್ಲಿ ಸೋತಿತು. ಇದಾದ ಬಳಿಕ ಮೈತ್ರಿ ಸರ್ಕಾರ ರಚನೆಯಾದರೂ ಬಿಜೆಪಿ ಯಶಸ್ವಿ ಆಪರೇಷನ್‌ನಿಂದ ಅಧಿಕಾರಕ್ಕೆ ಬಂದಿದ್ದರು.
2019ರ ಲೋಕಸಭಾ ಚುನಾವಣೆಯ ನಂತರ ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ, ಅವರ ಮತ್ತು ಪಕ್ಷದ ಹೈಕಮಾಂಡ್ ನಡುವೆ ನಿರಂತರ ಘರ್ಷಣೆ ನಡೆದೇ ಇತ್ತು, ಇದು ಬಿ.ಎಸ್ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿತು.
ಇದನ್ನೂ ಓದಿ: ಸರ್ಕಾರಿ ನೇಮಕಾತಿ ಪರೀಕ್ಷೆಗಳಿಗೆ ಮೊಬೈಲ್, ಬ್ಲೂಟೂತ್ ನಿಷೇಧ; ಕೆಇಎ ಆದೇಶ
ಮತ್ತೆ ಬಿಎಸ್‌ವೈ ಯನ್ನು ಮೂಲೆಗುಂಪು ಮಾಡಲಾಗಿತು ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ಕಳೆದ ಚುನಾವಣೆಯಲ್ಲಿ ಬಿಎಸ್‌ವೈ ಅವರಿಗೆ ಟಿಕೆಟ್ ಸಹ ನೀಡದೆ ಅವರಿಂದಲೇ ಚುನಾವಣಾ ನಿವೃತ್ತಿಯೂ ಘೋಷಿಸಿದ್ರು. ಆದ್ರೆ ಪಕ್ಷ ಹಿಂದೆಂದೂ ಕಂಡಿರದ ಕಳಪೆ ಪ್ರದರ್ಶನ ಕಂಡಿತು.
ಕರ್ನಾಟಕದಲ್ಲಿ 2023 ರ ವಿಧಾನಸಭಾ ಚುನಾವಣೆಯಲ್ಲಿ JD(S) ನ ಮತ ಹಂಚಿಕೆ ಕೇವಲ13.3%. ಇದು 1999ರ ಬಳಿಕ ಅತ್ಯಂತ ಕಳಪೆ ಪ್ರದರ್ಶನ ಎಂಬ ಅಪಖ್ಯಾತಿ ಜೆಡಿಎಸ್ ಹೆಗಲೇರಿತು. ಇದರ ಜೊತೆ ಕಿಂಗ್ ಮೇಕರ್ ಎಂಬ ಹಣೆಪಟ್ಟಿಯೂ ಜೆಡಿಎಸ್ ಜೊತೆ ಸೇರಿಕೊಂಡಿತು.
ಬಿಜೆಪಿಯ ಹೊಸದಾಗಿ ನೇಮಕಗೊಂಡ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಎಚ್‌ಡಿ ದೇವೇಗೌಡರನ್ನು ಭೇಟಿ ಮಾಡುವುದರ ಮೂಲಕ ಮತ್ತೊಂದು ರಾಜಕೀಯ ಧ್ರುವೀಕರಣಕ್ಕೆ ಕಾರಣರಾಗಿದ್ದಾರೆ. ರಾಜ್ಯದ ಎರಡು ಅತ್ಯಂತ ಪ್ರಭಾವಿ ಸಾಮಾಜಿಕ ಗುಂಪುಗಳಾದ ಲಿಂಗಾಯತರು ಮತ್ತು ಒಕ್ಕಲಿಗರು ಒಟ್ಟಾಗಿ ಈ ಬಾರಿ ಚುನಾವಣೆ ಎದುರಿಸುತ್ತಿದ್ದೇವೆ ಎಂಬ ಸಂದೇಶ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.