ಬೆಂಗಳೂರು: ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಒಲವು ತೋರಿಸಿದ್ದ ಸಚಿವ ವಿ. ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ಲೋಕಸಭೆಯ ಟಿಕೆಟ್ ನೀಡುವುದಾಗಿ ಬಿಜೆಪಿ ಹೈಕಮಾಂಡ್ ಭರವಸೆ ನೀಡಿದೆ.
ಸೋಮಣ್ಣ ಪುತ್ರನ ವಿಚಾರದಲ್ಲಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದ್ದು, ನೀವು ಗೋವಿಂದ ರಾಜನಗರ ದಿಂದಲೇ ಸ್ಪರ್ಧಿಸಿ. ನಿಮ್ಮ ಮಗನಿಗೆ ಲೋಕಸಭೆಗೆ ಟಿಕೆಟ್ ನೀಡುತ್ತೇವೆ ಎಂದು ಹೈಕಮಾಂಡ್ ಸೂಚನೆ ನೀಡಿದೆ. ತುಮಕೂರು ಅಥವಾ ಬೇರೆ ಕಡೆ ಲೋಕಸಭೆ ಟಿಕೆಟ್ ನೀಡುವುದಾಗಿ ಭರವಸೆ ನೀಡಿದೆ. ಹೀಗಾಗಿ ಸದ್ಯ ಕಾಂಗ್ರೆಸ್ ಸೇರುವ ನಿರ್ಧಾರದಿಂದ ಸಚಿವ ಸೋಮಣ್ಣ ಹಿಂದೆ ಸರಿದಿದ್ದಾರೆ.
ಇದ್ರ ಜೊತೆಗೆ ಸೋಮಣ್ಣ- ಡಿಕೆಶಿ ಮಾತಾಡ್ತಿರೋ ಫೋಟೋ ವೈರಲ್ ಆಗಿದ್ದು, ಸಚಿವ ಸೋಮಣ್ಣ ನಾನು ಕಾಂಗ್ರೆಸ್ ಸೇರ್ಪಡೆಯ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ. ಸುಖಾಸುಮ್ಮನೆ ಆರೋಪ ಮಾಡಲು ಈ ಫೋಟೋವನ್ನು ಹರಿಬಿಡಲಾಗಿದೆ ಎಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ ಬಿಜೆಪಿ ಹೈಕಮಾಂಡ್‌ನಿಂದ ತುಮಕೂರು ಲೋಕಸಭೆಯ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದರಿಂದ ಬಿಜೆಪಿಯಲ್ಲಿ ಸೋಮಣ್ಣ ಮುಂದುವರೆಯಲು ತೀರ್ಮಾನಿಸಿದ್ದಾರೆ. ಸೋಮಣ್ಣ ಕಾಂಗ್ರೆಸ್ ಸೇರ್ತಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಅಷ್ಟೇ ಅಲ್ಲದೇ ಬಿಜೆಪಿಯ ಕಾರ್ಯಕ್ರಮಗಳಿಂದ ದೂರ ಸರಿದಿದ್ದರು ಅನ್ನೋ ಮಾತು ಕೇಳಿ ಬರುತ್ತಿದ್ವು.
ಮಗನಿಗೆ ನಾನು ಯಾವತ್ತಾದ್ರೂ ನನ್ನ ಮಗನಿಗೆ ಟಿಕೆಟ್ ಕೇಳಿದ್ದೀನಾ ? ಬಿಜೆಪಿಯಲ್ಲಿ ಟಿಕೆಟ್ ಕೊಟ್ಟರೆ ನಿಂತ್ಕೊತೀನಿ, ಇಲ್ಲ ಅಂದ್ರೆ ಇಲ್ಲ ಎಂದು ಸಚಿವ ವಿ. ಸೋಮಣ್ಣ ಹೇಳಿದ್ದರು. ಸೋಮಣ್ಣ ಅಸಾಮಾಧಾನ ಹೊರ ಹಾಕಿದ ಹಿನ್ನೆಲೆ ಬಿಜೆಪಿ ಅರುಣ್ ಸೋಮಣ್ಣಗೆ ಟಿಕೆಟ್ ಕೊಡಲು ತೀರ್ಮಾನಿಸಿದೆ.
ಸೋಮಣ್ಣ ಕಾಂಗ್ರೆಸ್ ಸೇರಿದ್ರೆ ಆನೆ ಬಲ ಬಂದಂತೆ ಎಂದುಕೊಂಡಿದ್ದ ಕೈ ನಾಯಕರು ಸೋಮಣ್ಣ ಬೇಡಿಕೆಗಳನ್ನು ಈಡೇರಿಸಲು ತಯಾರಿಯಲ್ಲಿದ್ದರು. ಅದರೆ ಈಗ ಮಗನ ವಿಚಾರದಿಂದಾಗಿ ಸೋಮಣ್ಣ ಬಿಜೆಪಿಯಲ್ಲಿಯಲ್ಲಿಯೇ ಉಳಿಯಲಿದ್ದಾರೆ.