Wednesday, November 29, 2023
spot_img
- Advertisement -spot_img

ಹೆಸರು ಹೇಳಲ್ಲ, ಬಿಜೆಪಿಯವರು ಬಹಳಷ್ಟು ಜನ ʼಕೈʼಸಂಪರ್ಕದಲ್ಲಿದ್ದಾರೆ : ಜಗದೀಶ್ ಶೆಟ್ಟರ್

ಗದಗ : ಬಿಜೆಪಿಯಲ್ಲಿ ನಾಯಕತ್ವ ಕೊರತೆಯಿದ್ದು, ಬಿಜೆಪಿ ಲೀಡರ್ ಲೆಸ್ ಪಾರ್ಟಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮದುರ್ಗದಲ್ಲಿ ಹಣ ಇದ್ದ ವ್ಯಕ್ತಿಗೆ ಟಿಕೆಟ್ ಕೊಟ್ರು, ಬಿಜೆಪಿಯಲ್ಲಿ ಮಿಸ್ ಮ್ಯಾನೇಜ್ಮೆಂಟ್ ಇದೆ, ಬೈಂದೂರು ಸುಕುಮಾರ್ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿಸಿದ್ರು, ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೆ ಟಿಕೆಟ್ ಕೊಟ್ಟರು, ಶೆಟ್ಟಿ ಆಕ್ರೋಶದಲ್ಲಿದ್ದಾರೆ ಎಂದರು.

ಮಾಜಿ‌ ಶಾಸಕರು, ಕಾರ್ಯಕರ್ತರಲ್ಲಿ ಕ್ಷೋಭೆ ಉಂಟಾಗಿದೆ, ಕಾಂಗ್ರೆಸ್ ಬರಬೇಕು ಅಂತಾ ಬಹಳಷ್ಟು ಜನ ಅಪೇಕ್ಷೆ ವ್ಯಕ್ತ ಪಡಿಸಿದ್ದಾರೆ.. ಹೆಸರು ಹೇಳಲ್ಲ.. ಬಹಳಷ್ಟು ಜನ ಸಂಪರ್ಕದಲ್ಲಿದ್ದಾರೆ..ನಿರ್ಧಾರ ಆದ್ಮೇಲೆ ಹೆಸರು ಹೇಳುತ್ತೇನೆ ಎಂದು ಬಾಂಬ್‌ ಸಿಡಿಸಿದ್ದಾರೆ.

ಬಿಸಿ ಪಾಟೀಲ್ ಸಂಪರ್ಕದಲ್ಲಿಲ್ಲ, ಸೇಡು ತೀರಿಸಿಕೊಳ್ಳುವುದಲ್ಲ.. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಪ್ರೊಟೆಸ್ಟ್ ಮಾಡಿದ್ದೆ ಎಂದರು. ಅವರಾಗೇ ಬರುತ್ತಿದ್ದಾರೆ.. ಸೆಳೆಯುವ ಪ್ರಶ್ನೆ ಇಲ್ಲ.. ಎಲ್ಲವನ್ನೂ ಕಾದು ನೋಡಿ, ಪ್ರಹ್ಲಾದ್ ಜೋಶಿ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಂಪಿಗೆ ಯಾರು ನಿಲ್ಲಬೇಕು ಅನ್ನೋದನ್ನ ಕಾಂಗ್ರೆಸ್ ಹೈ ಕಮಾಂಡ್ ನಿರ್ಧಾರ ಮಾಡಲಿದೆ ಎಂದು ಹೇಳಿದರು.

ಇದನ್ನೂ ಓದಿ: ಗಡಿ ರಾಜ್ಯಗಳಲ್ಲಿ ಜಿ20 ಸಭೆಗೆ ಪಾಕ್-ಚೀನಾ ವಿರೋಧ ; ಪ್ರಧಾನಿ ಹೇಳಿದ್ದೇನು?

ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಸೌಲಭ್ಯಕ್ಕಾಗಿ, ಕೇಂದ್ರದ ಒಬಿಸಿಯಲ್ಲಿ ಲಿಂಗಾಯತರನ್ನ ಸೇರಿಸ್ಬೇಕು ಅಂತಾ ಆಗ್ರಹಿಸ್ತಿದ್ದಾರೆ..ಲಿಂಗಾಯತರಿಗೆ ಅನ್ಯಾಯವಾಗಿದೆ ಅನ್ನೋ ಕೂಗಿದೆ ಹೋರಾಟದ ರೂಪ ಸಿಗ್ತಿದೆ..
ನಾನು ನೇತೃತ್ವ ವಹಿಸೋದಲ್ಲ.. ಜಗದ್ಗುರುಗಳು ನೇತೃತ್ವ ವಹಿಸಿದ್ದಾರೆ ಎಂದು ತಿಳಿಸಿದರು. ಬಿಎಲ್ ಸಂತೋಷ್ ಆ ರೀತಿ ಹೇಳಿಕೆ ಕೊಟ್ಟಿಲ್ಲ ರಾಮುಲು ಹೇಳಿದ್ದಾರೆ. ಈಗ ಸಂತೋಷ್ ಅವರೇ ಸ್ಪಷ್ಟೀಕರಣ ಕೊಡಬೇಕು..
ಮೊದ್ಲು ನಾಲ್ಕು ಜನರನ್ನ ಬಿಜೆಪಿಗೆ ಸೇರಿಸಿಕೊಳ್ಳಿ ಅಂತಾ ಪ್ರಿಯಾಂಕ್ ಖರ್ಗೆ ಯವರು ಹೇಳಿದ್ದಾರಲ್ಲ, ಚೀಟಿ ಎತ್ತುವ ಮೂಲಕವಾದ್ರೂ ತಾತ್ಕಾಲಿಕ ವಿರೋಧ ಪಕ್ಷದ ನಾಯಕನನ್ನ ಆಯ್ಕೆ ಮಾಡಿ ಎಂದು ಆಗ್ರಹಿಸಿದರು.

ಸರ್ಕಾರ ರಚಿಸಿ ನೂರು ದಿನವಾಯ್ತು ಈಗ್ಲೂ ವಿರೋಧ ಪಕ್ಷದ ನಾಯಕ ಆಯ್ಕೆಯಾಗಿಲ್ಲ.. ಬಿಜೆಪಿ ಶೋಚನೀಯ ಪರಿಸ್ಥಿತಿಯಲ್ಲಿದೆ ಅನ್ನೋದನ್ನ ಅರ್ಥಮಾಡಿಕೊಳ್ಳಬೇಕಾ? ರಾಜ್ಯ ಬಿಜೆಪಿ ಕೆಲವರ ಮುಷ್ಟಿಯಲ್ಲಿದೆ.. ಹೀಗಾಗಿ ಸುಧಾರಣೆಯಾಗಿಲ್ಲ ಎಂದು ವ್ಯಂಗ್ಯವಾಡಿದರು.

ಒನ್ ನೇಷನ್ ಒನ್ ಎಲೆಕ್ಷನ್ ಬಗ್ಗೆ ಐದಾರು ವರ್ಷದಿಂದ ಚರ್ಚೆಯಲ್ಲಿದೆ, ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ಇದೆ.. ಈಗ ಕಮಿಟಿ ಮಾಡಿದ್ದಾರೆ, ಯಾವ ಹಿನ್ನೆಯಲ್ಲಿ ಕಮಿಟಿ ರಚಿಸಿದ್ದಾರೆ ಅನ್ನೋದು ಗೊತ್ತಿಲ್ಲ, ರಾಜಕೀಯ ಅನುಭದಲ್ಲಿ ಹೇಳೋದಾದ್ರೆ ಏಕಕಾಲಕ್ಕೆ ಚುನಾವಣೆ ಸಾಧ್ಯವಿಲ್ಲ ಎಂದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles