Monday, December 4, 2023
spot_img
- Advertisement -spot_img

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲೋದು ಖಚಿತ : ಕೋಟಾ ಶ್ರೀನಿವಾಸ ಪೂಜಾರಿ

ಬೀದರ್ : ಬಿಜೆಪಿ ಯಾರು ಬಿಡುತ್ತಿಲ್ಲ , ಮುಂಬರುವ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಗೆಲ್ಲುತ್ತೇವೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಾಂಗ್ರೆಸ್ ಆಪರೇಷನ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಸರ್ಕಾರ ಬಂದು ಮೂರು ತಿಂಗಳು ಕಳೆದಿವೆ, ಅಭಿವೃದ್ಧಿ ವಿಚಾರದಲ್ಲಿ ಯಾವೊಬ್ಬ ಶಾಸಕರಿಗೆ ಅನುದಾನ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
ಮಮತಾ ಬ್ಯಾನರ್ಜಿಯವರು ಇಂಡಿಯಾ ಘಟಬಂಧನ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಇಂಡಿಯಾ ಘಟಬಂಧನದ ಹೆದರಿಕೆ ಶುರುವಾಗಿದೆ, ಹೀಗಾಗಿ ಕಾಂಗ್ರೆಸ್ ಬಹುತೇಕ ಶಾಸಕರು ರೋಸಿ ಹೋಗಿದ್ದಾರೆ, ಹಲವಾರು ಶಾಸಕರು ಸಿಎಂ ಗೆ ಪತ್ರ ಬರೆದಿದ್ದಾರೆ ಅಭಿವೃದ್ಧಿ ವಿಚಾರದಲ್ಲಿ ಎಂದರು.

ಬಿ.ಎಲ್ ಸಂತೋಷ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಸವಾಲ್ ವಿಚಾರವಾಗಿ ಮಾತನಾಡಿದ ಅವರು,
ಪ್ರಿಯಾಂಕ್ ಖರ್ಗೆ ಬೇರೆಲ್ಲ ಉಸ್ತುವಾರಿ ಮಾಡುವುದೂ ಬಿಟ್ಟು ಅವರ ಇಲಾಖೆ ಕುರಿತು ಗಮನಹರಿಸಲಿ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಟಾಂಗ್ ನೀಡಿದ್ದಾರೆ.

60 ಜನ ಪಿಡಿಒ ಗಳು ವೈಟಿಂಗ್‌ ಲಿಸ್ಟ್‌ನಲ್ಲಿದ್ದಾರೆ, ಅವರಿಗೆ ಸ್ಥಾನ ಗುರುತಿಸುವ ಕೆಲಸ ಮಾಡ್ತಾ ಇದ್ದಾರೆ , 6% ವರ್ಗಾವಣೆ ಹೋಗಿ 15% ವರ್ಗಾವಣೆ ಆಗಿದೆ, ಸಿಎಂ ಬಳಿ ವರ್ಗಾವಣೆ ಹೋಗಿರುವ ಕಡತಗಳು ಸೋರಿಕೆಯಾಗಿದೆ, ವರ್ಗಾವಣೆ ದಂಧೆ ಬಿಟ್ಟು ಇಲಾಖೆ ಕಡೆ ಗಮನ ಹರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೀಡರ್‌ಲೆಸ್ ಪಾರ್ಟಿ ಬಿಜೆಪಿ ಎನ್ನುವ ಜಗದೀಶ್ ಶೆಟ್ಟರ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಸಣ್ಣ ಮನಸ್ತಾಪದಿಂದ ಪಕ್ಷ ತೊರೆದಿದ್ದಾರೆ, ಆದ್ರೆ ಇನ್ನೂ ಶೆಟ್ಟರ್‌ ಅವರಿಗೆ ಬಿಜೆಪಿ ಬಗ್ಗೆ ಹೆಚ್ಚಿನ ಕಾಳಜಿ ಇದೆ, ಬಿಜೆಪಿ ಬಲಿಷ್ಠವಾಗುವ ವಿಚಾರದಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದು ಶೆಟ್ಟರ್ ಅವರ ಆಶಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಗಡಿ ರಾಜ್ಯಗಳಲ್ಲಿ ಜಿ20 ಸಭೆಗೆ ಪಾಕ್-ಚೀನಾ ವಿರೋಧ ; ಪ್ರಧಾನಿ ಹೇಳಿದ್ದೇನು?

ಕಾವೇರಿ ವಿಚಾರವಾಗಿ ಪ್ರತಿಕ್ರಿಯಿಸಿ, ತಮಿಳುನಾಡಿನ ಒತ್ತಡಕ್ಕೆ ಮಣಿದು ನೀರು ಬಿಟ್ಟಿದ್ದಾರೆ, ಬರಗಾಲ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ, ಜನ್ರು ಹಲವಾರು ಸಮಸ್ಯೆ ಅನುಭವಿಸುತ್ತಿದ್ದಾರೆ ವರ್ಗಾವಣೆ ದಂಧೆಯಲ್ಲಿ ಸರ್ಕಾರ ಮುಳುಗಿದೆ, ಬರಗಾಲ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ ಎಂದು ಹೇಳಿ ಕಾಲಹರಣ ಮಾಡುತ್ತಿದೆ, ಸಿದ್ದರಾಮಯ್ಯನವರ ಸರ್ಕಾರ ಪತ್ರ ಬರೆಯುವ ಸರ್ಕಾರ ಎಂದು ವ್ಯಂಗ್ಯವಾಡಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles