ಮೈಸೂರು: ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಕೇಂದ್ರ, ರಾಜ್ಯದ ನಾಯಕರು ನಿರ್ಧಾರ ಮಾಡಲಿದ್ದಾರೆ, ಈ ವಿಚಾರ ಯಡಿಯೂರಪ್ಪ ಬಾಯಿಯಿಂದ ಬಂದಿದೆ ಎಂದರೆ ಸತ್ಯವಿದೆ ಎಂದು ಅರ್ಥ ಎಂದು ಕೆ ಆರ್ ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಹೇಳಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಬಗ್ಗೆ ಬಿಜೆಪಿಯಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ, ಇದನ್ನು ಸ್ವಾಗತ ಮಾಡುತ್ತೇವೆ, ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ, ವಿರೋಧಿಗಳೆಲ್ಲರೂ ಒಂದಾಗಿದ್ದಾರೆ ಎಂದರು.
ಹಾಗಾಗಿ ಪಕ್ಷ, ದೇಶದ ಹಿತದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಮೈತ್ರಿಯಾದರೆ ಒಳಿತು, ಯಾಕೆಂದರೆ ಒಂದೊಂದು ಕ್ಷೇತ್ರದ ಗೆಲುವು ಮುಖ್ಯವಾಗಿದೆ. ಎರಡು ಪಕ್ಷಗಳ ಮೈತ್ರಿಯಾದರೆ ಸಹಜವಾಗಿಯೇ ಬಲ ಹೆಚ್ಚಲಿದೆ, ಹೆಚ್ ಡಿ ದೇವೇಗೌಡ- ಬಿ ಎಸ್ ಯಡಿಯೂರಪ್ಪ ಅವರಿಗೆ ಹೆಚ್ಚಿನ ಪ್ರಭಾವವಿದೆ, ಇಬ್ಬರೂ ಒಂದಾದರೆ ಬಲ ಹೆಚ್ಚಲಿದೆ ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ : ಜೆಡಿಎಸ್-ಬಿಜೆಪಿ ಮೈತ್ರಿ; ಕಾಂಗ್ರೆಸ್ ನಿರ್ನಾಮಕ್ಕಾಗಿ ನಾವು ಒಂದಾಗಿದ್ದೇವೆ : ಈಶ್ವರಪ್ಪ
ಮೈತ್ರಿ ಕೇವಲ ಲೋಕಸಭೆ ಚುನಾವಣೆಗೆ ಸೀಮಿತವಾಗಬಾರದು, ಮುಂಬರುವ ಪಾಲಿಕೆ ಸೇರಿ ಎಲ್ಲಾ ಹಂತದ ಚುನಾವಣೆಗೂ ಮೈತ್ರಿ ಮುಂದುವರಿಯಬೇಕು, ಎರಡು ಪಕ್ಷಗಳ ಮೈತ್ರಿಯ ಜೊತೆಗೆ ತಳಮಟ್ಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಗ್ಗೂಡಿಸಬೇಕು, ಎರಡು ಪಕ್ಷಗಳ ಕಾರ್ಯಕರ್ತರು ಒಂದಾಗಬೇಕು. ಆಗ ಮಾತ್ರ ಬಿಜೆಪಿ-ಜೆಡಿಎಸ್ ಮೈತ್ರಿ ಯಶಸ್ವಿಯಾಗಲಿದೆ ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.