ಬೆಂಗಳೂರು: ಚಂದ್ರಯಾನ-3 ಯೋಜನೆ ಯಶಸ್ವಿಯಾಗಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ವಿದೇಶದಿಂದ ನೇರವಾಗಿ ಬೆಂಗಳೂರಿಗೆ ಬಂದಿಳಿದಿದ್ದಾರೆ.
ಈ ಹಿನ್ನೆಲೆ ಪ್ರಧಾನಿ ಮೋದಿ ಸ್ವಾಗತಕ್ಕಾಗಿ ಬಿಜೆಪಿ ನಾಯಕರು ಬೆಳ್ಳಂಬೆಳಗ್ಗೆ ಹೆಚ್‌ಎಎಲ್ ವಿಮಾನ ನಿಲ್ದಾಣದ ಬಳಿ ನೆರೆದಿದ್ದರು. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದ ತೇಜಸ್ವಿ ಸೂರ್ಯ ಹಾಗೂ ಭಾಸ್ಕರ್ ರಾವ್ ಸಾಮಾನ್ಯ ಜನರಂತೆ ಕಾಣಿಸಿಕೊಂಡರು. ಭಾಸ್ಕರ್ ರಾವ್ ಚಂದ್ರಯಾನ್ ಪೋಸ್ಟರ್ ಹಿಡಿದು ಜನರ ಜೊತೆ ಇಸ್ರೋ ವಿಜ್ಞಾನಿಗಳಿಗೆ ಜೈಕಾರ ಹಾಕಿದ್ದಾರೆ. ತ್ರಿವರ್ಣ ಧ್ವಜ ಹಿಡಿದು ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕಾಯುತ್ತಿದ್ದು, ಬಿಜೆಪಿ ಕಾರ್ಯಕರ್ತರು ಹಾಗೂ ಅಪಾರ ಜನಸ್ತೋಮದ ಜೊತೆ ಬೆರೆತಿದ್ದಾರೆ.
ಇದನ್ನೂ ಓದಿ:ʼಇಸ್ರೋʼ ಅಭಿನಂದಿನಲು ಬೆಂಗಳೂರಿಗೆ ಬಂದ ಮೋದಿ
ಸ್ಥಳದಲ್ಲಿ ಜಾನಪದ ಕಲೆಗಳು ಪ್ರಧಾನಿ ಮೋದಿ ಅವರನ್ನು ಅದ್ದೂರಿಯಾಗಿ ಸ್ವಾಗತಿಸಿವೆ. ದಾರಿಯುದ್ದಕ್ಕೂ ಪ್ರಧಾನಿ ಜನರೆಡೆಗೆ ಕೈ ಬೀಸಲಿದ್ದಾರೆ. ಸುಮಾರು 24 ಕಿ.ಮೀ ರಸ್ತೆ ಮಾರ್ಗವಾಗಿ ಕ್ರಮಿಸಲಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.