ಕಲಬುರಗಿ : ರಾಜ್ಯದ ಪೊಲೀಸರು ಠುಸ್ಸಾಗಿದ್ದಾರೆ, ಶಾಸಕರ ಹಾಗೂ ಸಚಿವರ ಕೈಗೊಂಬೆಯಾಗಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಾರ್ವಜನಿಕರು ಕಾಣುತ್ತಿಲ್ಲ, ಕೇವಲ ಮಂತ್ರಿಗಳು ಮತ್ತು ಶಾಸಕರಷ್ಟೇ ಕಾಣುತ್ತಾರೆ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಾಠೋಡ್, ನಾವು ದೂರು ದಾಖಲಿಸಿದರೆ ರಿಸೀವ್ಡ್ ನೀಡುತ್ತಾರೆ. ಮಂತ್ರಿಗಳು ಕಂಪ್ಲೇಂಟ್ ಕೊಟ್ಟರೆ ಎಫ್ ಐ ಆರ್ ದಾಖಲಿಸುತ್ತಾರೆ. ಪೊಲೀಸರು ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಮುಂದಿನ ತಿಂಗಳಿನಿಂದ ತರಕಾರಿ ಬೆಲೆಗಳಲ್ಲಿ ಇಳಿಕೆ : ಶಕ್ತಿಕಾಂತ್ ದಾಸ್
ಮಂತ್ರಿ ಅವರು ಗಣಿಗಾರಿಕೆ ಮಾಡಲು ಯಾರಿಗೆ ಅವಕಾಶ ನೀಡುತ್ತಾರೋ ಅವರಿಗಷ್ಟೇ ಪೊಲೀಸರು ಅನುಮತಿ ಕೊಡುತ್ತಾರೆ. ಯಾರಿಗೆ ಅವಕಾಶ ನೀಡುವುದಿಲ್ಲ ಅವರಿಗೆ ಅನುಮತಿ ನಿರಾಕರಿಸುತ್ತಾರೆ ಎಂದು ದೂರಿದ್ದಾರೆ.
ಮರಳು ಸಾಗಾಣಿಕೆಯು ಮಂತ್ರಿಯ ಅಣತಿಯಂತೆ ನಡೆಯುತ್ತಿದೆ. ಕಾನೂನು ಸುವ್ಯವಸ್ಥೆಯು ಕೂಡ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಈಗ ಹೆಚ್ಚಿನ ಅಂತರದಲ್ಲಿ ನೀವು ಗೆದ್ದಿರಬಹುದು ಆದರೆ ಮುಂದಿನ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸುತ್ತೀರಿ ಎಂದು ಪರೋಕ್ಷವಾಗಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕಿಡಿ ಕಾರಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಒಂದು ಕೇಸ್ ದಾಖಲಿಸಬೇಕಾದರೆ ಸಚಿವರ ಗಮನಕ್ಕೆ ತಂದು ಎಫ್ ಐ ಆರ್ ಮಾಡುತ್ತಾರೆ. ಪೊಲೀಸರನ್ನು ಉಪಯೋಗಿಸಿ ತಮಗೆ ಬೇಕಾದ ಹಾಗೆ ಪ್ರಕರಣಗಳನ್ನು ದಾಖಲಿಸುತ್ತಾರೆ ಎಂದು ಸಚಿವರ ವಿರುದ್ಧ ಮಣಿಕಂಠ ಗಂಭೀರವಾಗಿ ಆರೋಪಿಸಿದ್ದಾರೆ.
ಪೊಲೀಸರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂಬ ಆರೋಪದ ಮೇಲೆ ನಿನ್ನೆಯಷ್ಟೇ ರಾಠೋಡ್‌ನನ್ನು ಬಂಧಿಸಲಾಗಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.