ಬೆಂಗಳೂರು: ರಾಜ್ಯ ಸರ್ಕಾರದ ವೈಫಲ್ಯಗಳ ಜನತೆ ಮುಂದಿಡಲು ಬಿಜೆಪಿ ಇಂದು ರಾಜ್ಯದಾದ್ಯಂತ ಬೃಹತ್ ಪ್ರತಿಭಟನೆ ನಡೆಸುತ್ತಿದೆ. ಈ ಹಿನ್ನೆಲೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಸರ್ಕಾರದ ವಿರುದ್ಧ ಕಿಡಿಕಾರಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ‘ಗೃಹಜ್ಯೋತಿ ಯೋಜನೆ ಘೋಷಿಸಿ ಕತ್ತಲಭಾಗ್ಯ ನೀಡಿದ್ದಾರೆ. ರಾಜ್ಯವನ್ನು ಕತ್ತಲೆಗೆ ದೂಡುತ್ತಿದ್ದಾರೆ. ಮಳೆಯ ಜೊತೆ ವಿದ್ಯುತ್ ಬರ ಕೂಡ ಕರ್ನಾಟಕಕ್ಕೆ ಬರಲಿದೆ’ ಎಂದಿದ್ದಾರೆ.
ಇದನ್ನೂ ಓದಿ: ತೆನೆ-ಕಮಲ ಮೈತ್ರಿ ಫಿಕ್ಸ್, ಜೆಡಿಎಸ್ ಗೆ ನಾಲ್ಕು ಸೀಟ್ : ಬಿಎಸ್ ವೈ ಘೋಷಣೆ
‘ಗೃಹಲಕ್ಷ್ಮಿ ಯೋಜನೆಯಲ್ಲಿ ಎಷ್ಟೊ ಜನರಿಗೆ ಹಣ ಬಂದಿಲ್ಲ. ಈ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳ ಹರಾಜು ನಡೆಯುತ್ತಿದೆ. ಹುದ್ದೆಗಳನ್ನು ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ. ಕುಮಾರಕೃಪಾದಲ್ಲಿ ಸರ್ಕಾರ ದಂಧೆ ನಡೆಸುತ್ತಿದ್ದು, ಹಾಡಹಾಗಲೇ ಸರ್ಕಾರ ಭ್ರಷ್ಟಾಚಾರ ನಡೆಸುತ್ತಿದೆ’ ಎಂದು ಆರೋಪಿಸಿದ್ದಾರೆ.
‘ಸರ್ಕಾರ ಸರಿಹೋಗಬಹುದು ಎಂದು ನೀರಿಕ್ಷೆ ಇಟ್ಟುಕೊಂಡಿದ್ವಿ, ಆದ್ರೆ ಸರ್ಕಾರ ಸರಿಪಡಿಸಿಕೊಂಡಿಲ್ಲ, ಹೀಗಾಗಿ ನಾವು ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ’ ಎಂದಿದ್ದಾರೆ.
ಪಾಪರ್ ಸರ್ಕಾರ; ಆರ್ ಅಶೋಕ್ ಕಿಡಿ
‘ಈ ಸರ್ಕಾರದಲ್ಲಿ ಭ್ರಷ್ಟಾಚಾರ, ವರ್ಗಾವಣೆ ಎಲ್ಲೆಂದರಲ್ಲಿ ದುಡ್ಡು ದುಡ್ಡು, ವಿಧಾನಸೌಧಕ್ಕೆ ಹೋದ್ರೆ ಬರೀ ದುಡ್ಡು ದುಡ್ಡು. ಕಾಂಗ್ರೆಸ್ ಸರ್ಕಾರ ಬಂದಮೇಲೆ ಒಂದಿಂಚು ರಸ್ತೆಯಾಗಿಲ್ಲ. ಬೆಂಗಳೂರು ಅಭಿವೃದ್ಧಿಗೆ ಬಿಎಸ್‌ವೈ, ಬೊಮ್ಮಾಯಿ ಅನುದಾನ ನೀಡಿದ್ರು, ಈ ಸರ್ಕಾರ ಬಂದಾಗಿನಿಂದ ಬರೀ ಚೊಂಬು ಕೊಟ್ಡಿದ್ದಾರೆ. ಅಭಿವೃದ್ಧಿಗೆ ಹಣ ಕೊಡೋಕೆ ಆಗದೆ ಇರುವ ಪಾಪರ್ ಸರ್ಕಾರ ಇದು’ ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಮೆಡಿಕಲ್ ಕಾಲೇಜು ಸ್ಥಳಾಂತರ : ರಾಮನಗರ ಬಂದ್, ಡಿಸಿಎಂ-ಸಿಎಂ ವಿರುದ್ದ ಆಕ್ರೋಶ
ಮೈತ್ರಿ ಬಹಿರಂಗಪಡಿಸಿದ ಬಿಎಸ್‌ವೈ
ಲೋಕಸಭೆ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಾತ್ಯತೀತ ಜನತಾ ದಳ (ಜೆಡಿಎಸ್) ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
‘ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಂತೋಷ ತಂದಿದೆ. ಜೆಡಿಎಸ್ ಗೆ ನಾಲ್ಕು ಸೀಟ್ ಕೊಡಲು ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಮೈತ್ರಿಯಿಂದ ನಮ್ಮಗೆ ಶಕ್ತಿ ಬಂದಿದೆ. ಇದರಿಂದ 25ಕ್ಕೂ ಹೆಚ್ಚು ಸೀಟ್ ಗೆಲ್ಲಲು ನಮಗೆ ಸಹಾಯವಾಗಲಿದೆ’ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.