ನವದೆಹಲಿ: ಕೇಂದ್ರ ಸರ್ಕಾರವು ಎಲ್‌ಪಿಜಿ ಸಿಲಿಂಡರ್‌ಗೆ 200 ರೂಪಾಯಿ ಕಡಿತ ಮಾಡುವುದಾಗಿ ಘೋಷಿಸಿದ್ದು, ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಮೇಲೆ 200 ರೂ. ಸಬ್ಸಿಡಿ ನೀಡುವುದಾಗಿ ತಿಳಿಸಿದೆ. ಈ ಘೋಷಣೆಯ ಬೆನ್ನಲ್ಲೇ ಬಿಜೆಪಿ ನಾಯಕರು ಪ್ರಧಾನಿ ಮೋದಿ ಕುರಿತು ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಪ್ರತಿ ಗ್ಯಾಸ್ ಸಿಲಿಂಡರ್‌ಗೆ 200 ರೂಪಾಯಿ ಸಬ್ಸಿಡಿ ನೀಡಲು ಮತ್ತು 75 ಲಕ್ಷ ಹೆಚ್ಚುವರಿ ಉಜ್ವಲ ಸಂಪರ್ಕಗಳಿಗೆ ಅನುಮೋದನೆ ನೀಡುವುದು ಪ್ರಧಾನಿಯವರ ಐತಿಹಾಸಿಕ ನಿರ್ಧಾರವಾಗಿದೆ. ಇದು ಉತ್ತರದಲ್ಲಿ 1.75 ಕೋಟಿಗೂ ಹೆಚ್ಚು ಫಲಾನುಭವಿಗಳು ಸೇರಿದಂತೆ 10.35 ಕೋಟಿ ಫಲಾನುಭವಿಗಳಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.
ಇದನ್ನೂ ಓದಿ: ಜಮ್ಮು-ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲು ಕಾಲಮಿತಿ ರೂಪಿಸಿ; ಸುಪ್ರೀಂ ಸೂಚನೆ
ಈ ಕುರಿತು ಸ್ಮೃತಿ ಇರಾನಿ ಪ್ರತಿಕ್ರಿಯಿಸಿದ್ದು, ರಾಖಿ ಹಬ್ಬದ ಸಮಯದಲ್ಲಿ ಸಹೋದರಿಯರಿಗೆ ಪ್ರಧಾನಿ ಉಡುಗೊರೆ ನೀಡಿದ್ದಾರೆ. ಪ್ರಧಾನಿ ಮೋದಿಯವರಿಗೆ ನನ್ನ ಕೃತಜ್ಞತೆಯನ್ನು ಹೇಳುತ್ತೇನೆ. ಹಬ್ಬದ ಸಂದರ್ಭ ಉಡುಗೊರೆ ನಿರೀಕ್ಷೆಯಲ್ಲಿದ್ದ ಸಹೋದರಿಯರಿಗೆ ಇದೇನು ಸಾಧಾರಣ ಉಡುಗೊರೆಯಲ್ಲ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಚಿವ ಸಿ.ಟಿ ರವಿ, ‘ಗೃಹ ಬಳಕೆ ಎಲ್‌ಪಿಜಿ ಬೆಲೆ ಪ್ರತಿ ಸಿಲಿಂಡರ್ ಮೇಲೆ ₹ 200 ಇಳಿಕೆ – ಪ್ರಧಾನಿ ಮೋದಿಯವರಿಂದ ರಕ್ಷಾ ಬಂಧನದ ಉಡುಗೊರೆ. ರಕ್ಷಾಬಂಧನ ಹಾಗೂ ಓಣಂ ಹಬ್ಬದ ಉಡುಗೊರೆಯಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರಕಾರವು ಗೃಹ ಬಳಕೆ ಎಲ್ ಪಿ ಜಿ ಸಿಲಿಂಡರ್ ನ ಬೆಲೆಯನ್ನು ಪ್ರತಿ ಸಿಲಿಂಡರ್ ಗೆ ₹ 200 ಕಡಿಮೆ ಮಾಡುವ ನಿರ್ಧಾರ ತೆಗೆದುಕೊಂಡಿದೆ’ ಎಂದರು.
ಇದನ್ನೂ ಓದಿ: ಭಾರತದ ಅರುಣಾಚಲ ಪ್ರದೇಶ, ಅಕ್ಸಾಯ್ ಚಿನ್ ಭೂಭಾಗ ನನ್ನದು ಎಂದ ಚೀನಾ!
‘ಸಾಮಾನ್ಯ ಗ್ರಾಹಕರೊಂದಿಗೆ ಇದರಿಂದ ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೂ ಹೆಚ್ಚಿನ ಅನುಕೂಲವಾಗಲಿದೆ. ಈ ಮುಂಚೆ ಇದ್ದ ₹200 ಸಹಾಯ ಧನದೊಂದಿಗೆ ಈ ₹200 ಸೇರಿ, ಒಟ್ಟು ಪ್ರತಿ ಸಿಲಿಂಡರ್ ಗೆ ₹ 400 ಯ ಸಹಾಯ ಧನ ಅವರಿಗೆ ದೊರೆಯಲಿದೆ’.
‘ಉಜ್ವಲಾ ಯೋಜನೆಯ ಅಡಿಯಲ್ಲಿ ಇನ್ನೂ ಹೆಚ್ಚಿನ ಜನರಿಗೆ ಅನುಕೂಲ ಕಲ್ಪಿಸಲು, 75 ಲಕ್ಷ ನೂತನ ಉಚಿತ ಸಂಪರ್ಕಗಳನ್ನು ನೀಡಲು ಕ್ಯಾಬಿನೆಟ್ ನಿರ್ಧರಿಸಿದೆ. ಪ್ರಸಕ್ತ 9 ಕೋಟಿ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ’ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.