ಬೆಂಗಳೂರು : ಪ್ರಧಾನಿ ಮೋದಿ ಆಗಮಿಸಿದ್ದ ವೇಳೆ ಬಿಜೆಪಿ ರಾಜ್ಯ ನಾಯಕರು ಬ್ಯಾರಿಕೇಡ್ ಹಿಂದೆ ನಿಂತಿದ್ದು ಅವರಿಗೆ ಬಿಟ್ಟ ವಿಚಾರ ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು, ಮೋದಿ ಬಂದಾಗ ಬಿಜೆಪಿ ರಾಜ್ಯ ನಾಯಕರು ಬ್ಯಾರಿಕೇಡ್ ಹಿಂದೆ ನಿಂತಿರುವುದನ್ನು ಚುನಾವಣೆ ಸಂದರ್ಭದಲ್ಲೂ ಗಮನಿಸಿದ್ದೇನೆ. ಆದರೆ, ಅದು ಅವರ ಪಕ್ಷದ ಆಂತರಿಕ ವಿಚಾರ ಎಂದರು.
ಇದನ್ನೂ ಓದಿ : ಜಗದೀಶ್ ಶೆಟ್ಟರ್‌ಗೆ ಅಮಿತ್ ಶಾ ದೂರವಾಣಿ ಕರೆ; ಮತ್ತೆ ಬಿಜೆಪಿ ಸೇರ್ತಾರಾ ಮಾಜಿ ಸಿಎಂ?
ಪ್ರಧಾನಿ ಬಂದಾಗ ರಾಜ್ಯ ಸರ್ಕಾರ ಪ್ರೋಟೋಕಾಲ್ ಪಾಲಿಸಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಅದರ ಬಗ್ಗೆ ನನಗೆ ಮಾಹಿತಿಯಿಲ್ಲ. ಆ ಬಗ್ಗೆ ತೀರ್ಮಾನ ಕೈಗೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇದೆ. ಆ ಇಲಾಖೆ ಮುಖ್ಯಮಂತ್ರಿಗಳ ಅಧೀನದಲ್ಲಿ ಬರುತ್ತೆ. ಕೆಲವೊಮ್ಮೆ ಗಣ್ಯರನ್ನು ಸ್ವೀಕರಿಸಲು ಸಚಿವರನ್ನು ಕಳಿಸಿಕೊಡುವ ಪದ್ಧತಿ ಇದೆ. ನನಗೆ ಹೇಳಿದ್ದರೆ ನಾನು ಹೋಗ್ತಿದೆ ಎಂದು ಹೇಳಿದರು.
ಇಂದು ಬೆಳಿಗ್ಗೆ ನಗರದ ಹೆಚ್‌ಎಲ್ ವಿಮಾನ ನಿಲ್ದಾಣದ ಬಳಿ ಮಾತನಾಡಿದ್ದ ಪ್ರಧಾನಿ ಮೋದಿ, ಇಲ್ಲಿನ ಸರ್ಕಾರದ ಮುಖ್ಯಮಂತ್ರಿಗಳಿಗೆ ಮತ್ತು ಉಪ ಮುಖ್ಯಮಂತ್ರಿಗಳಿಗೆ ನನ್ನ ಸ್ವಾಗತಕ್ಕೆ ಬರಬೇಡಿ ಎಂದು ನಾನೇ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.