ಮುಂಬೈ: ಬಿಜೆಪಿ ನಾಯಕರು ಸಂಸತ್‌ನಲ್ಲಿ ನಗುವುದಿಲ್ಲ ಯಾಕಂದ್ರೆ ಮೋದಿ ಎಲ್ಲಿ ಹೊಡೆಯುತ್ತಾರೋ ಅನ್ನೋ ಭಯ ಅವರಿಗೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವ್ಯಂಗ್ಯವಾಡಿದ್ದಾರೆ. ನಮ್ಮ ಪಕ್ಷದ ನಾಯಕರನ್ನು ಸಂಸತ್‌ನಲ್ಲಿ ತೋರಿಸುವುದೇ ಇಲ್ಲ. ಒಂದು ವೇಳೆ ತೋರಿಸಿದ್ರೆ, ನೀವು ನೋಡಿ ನಮ್ಮ ಪಕ್ಷದ ನಾಯಕರು ಯಾವಾಗಲೂ ನಗುತ್ತಾರೆ, ತಮಾಷೆ ಮಾಡುತ್ತಾರೆ ಎಂದಿದ್ದಾರೆ.
ಸಾರ್ವಜನಿಕ ಸಮಾವೇಶದಲ್ಲಿ ಭಾಷಣ ಮಾಡಿರುವ ಅವರು, ಬಿಜೆಪಿ ವಿರುದ್ಧ ಕಿಡಿಕಾರಿದರು. ನಮ್ಮ ನಾಯಕರು ಸಂಸತ್‌ನಲ್ಲಿ ನಗುತ್ತಾರೆ, ತಮಾಷೆ ಮಾಡುತ್ತಾರೆ. ಆದ್ರೆ ನೀವು ಬಿಜೆಪಿ, ಆರ್‌ಎಸ್‌ಎಸ್ ಅವರನ್ನು ನೋಡಿ ಪ್ರಧಾನಿ ಮೋದಿ ಅವರ ಹಿಂದೆ ಸಾಲಿನಲ್ಲಿ ಕುಳಿತಿರುತ್ತಾರೆ. ತಪ್ಪಾಗಿ ಏನಾದ್ರು ನಗುವ ಸದ್ದು ಕೇಳಿದರೆ ಮೋದಿ ಅವರು ಹೊಡೆಯಬಹುದು, ಆರ್‌ಎಸ್‌ಎಸ್‌ನವ್ರು ಚಡ್ಡಿ ಹಾಕೊಂಡು ಲಾಠಿ ಹಿಡಿದುಕೊಳ್ಳಬಹುದು ಅಂತ ಸುಮ್ಮನೆ ಕುಳಿತಿರುತ್ತಾರೆ, ಒಂದು ವೇಳೆ ನಗುವ ಸದ್ದು ಕೇಳಿದ್ರೆ ಮೋದಿ ಅವರು ಹೊಡೆಯಬಹುದೆಂಬ ಭಯ. ನಮ್ಮ ಹೃದಯದಲ್ಲಿ ಬೇರೆಯವರ ಮೇಲೆ ಪ್ರೀತಿಯಿದೆ, ಗೌರವವಿದೆ ಆದ್ರೆ ಅವರಲ್ಲಿ ದ್ವೇಷ ತುಂಬಿದೆ ಎಂದಿದ್ದಾರೆ.
ಇದನ್ನೂ ಓದಿ: ಸಂಸತ್ತಿನ ವಿಶೇಷ ಅಧಿವೇಶನ : ಕೈ ನಾಯಕರ ಸಭೆ ಕರೆದ ಸೋನಿಯಾ ಗಾಂಧಿ
ನಮ್ಮ ಕೆಲಸ ದ್ವೇಷ ತುಂಬಿಕೊಂಡಿರುವವರಿಗೂ ಪ್ರೀತಿ ಹಂಚುವುದಾಗಿದೆ. ನಾವು ಪ್ರೀತಿಯ ಸೂಪರ್ ಮಾರ್ಕೆಟ್ ತೆರೆದಿದ್ದೇವೆ. ನಾವು ಅವರ ಮನೆ, ಬಜಾರ್‌ಗೆ ನುಗ್ಗಿ ಪ್ರೀತಿಯ ಅಂಗಡಿ ತೆರೆಯಬೇಕು ಇದು ನಿಮ್ಮೆಲ್ಲರ ಕೆಲಸ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.