Sunday, March 26, 2023
spot_img
- Advertisement -spot_img

ಮೋದಿಯವರ ನೇತೃತ್ವದ ಬಿಜೆಪಿ ಸರ್ವರಂಗಗಳಲ್ಲೂ ವಿಫಲ : ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ನಮೋ’ ಎಂದರೆ ಜನರನ್ನು ” ನಂಬಿಸಿ ಮೋಸ ಮಾಡುವವರು” ಎಂದಾಗಿದೆ. ನಂಬಿಸಿ ಮೋಸ ಮಾಡಿದ್ದೆ ಮೋದಿಯವರು ಈ ದೇಶದ ಜನರಿಗೆ ಕೊಟ್ಟ ಮಹಾನ್ ಕೊಡುಗೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

ಹಣದುಬ್ಬರವನ್ನು ಲೆಕ್ಕ ಹಾಕಿದರೆ ಇದು ನಕಾರಾತ್ಮಕ ಬೆಳವಣಿಗೆಯಾಗುತ್ತದೆ. ಬಹುಪಾಲು ಜನರಿಗೆ ನಿಧಾನಕ್ಕೆ ಅರ್ಥವಾಗುತ್ತಿರುವ ಸಂಗತಿ ಏನೆಂದರೆ ‘ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಸರ್ವರಂಗಗಳಲ್ಲೂ ವಿಫಲವಾಗಿದೆ. ದೇಶವು ಭಾರಿ ಗಂಡಾಂತರವನ್ನು ಎದುರಿಸುತ್ತಿದೆ. ಸುಳ್ಳು ಭಾಷಣಗಳನ್ನು ಬಿಟ್ಟರೆ ಯಾವ ಸಾಧನೆಯೂ ಇಲ್ಲ ಎಂದರು. ಮೋದಿಯವರು ಭಾರತವನ್ನು ಯಾವ ದುರ್ಗತಿಗೆ ಇಳಿಸಿದ್ದಾರೆಂದರೆ 2014 ರಲ್ಲಿ ಭಾರತದ ತಲಾವಾರು ಜಿಡಿಪಿ 1573 ಡಾಲರುಗಳಷ್ಟಿತ್ತು.

2022 ರಲ್ಲಿ 1850 ಡಾಲರುಗಳಷ್ಟಿರಲಿದೆ ಎಂದು ಅಂದಾಜು ಮಾಡಲಾಗಿದೆ.ಈ ಸಂಬಂಧ ಹೇಳಿಕೆ ನೀಡಿರುವ ಸಿದ್ದರಾಮಯ್ಯ, ಭಾರತವನ್ನು ಹಿಂದೆ ತಳ್ಳಿ ನಮ್ಮ ಅಕ್ಕ ಪಕ್ಕದ ದೇಶಗಳು ಮುಂದು ಮುಂದಕ್ಕೆ ಹೋಗುತ್ತಿವೆ. ಈ ವಿಚಾರವನ್ನು ಮರೆಮಾಚುವುದಕ್ಕೋಸ್ಕರವೆ ಧರ್ಮ, ಜಾತಿ, ಕೋಮು ದ್ವೇಷಗಳನ್ನು ಮುಂದೆ ಮಾಡಿಕೊಂಡು ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ದೇಶ ಒಂದೇ ಸಮನೆ ಅಧಃಪತನದ ಹಾದಿ ಹಿಡಿದಿದ್ದರೂ ಅದನ್ನು ಉದ್ಧಾರವಾಗುತ್ತಿದೆಯೆಂದು ಬಿಂಬಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Related Articles

- Advertisement -

Latest Articles