ನವದೆಹಲಿ: ತ್ರಿಪುರದ ಬಾಗ್‌ಬಸಾ ಕ್ಷೇತದ ಶಾಸಕ ಜಾದಾಬ್‌ಲಾಲ್‌ನಾಥ್ ತ್ರಿಪುರದಲ್ಲಿ ವಿಧಾನಸಭೆ ಅಧಿವೇಶನ ನಡೆಯುವಾಗ ಬ್ಲೂಫಿಲಂ ನೋಡಿ ಸಿಕ್ಕಿಬಿದ್ದಿದ್ದಾರೆ.
ತಮ್ಮ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವುದನ್ನು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ರಾಜ್ಯ ವಿಧಾನಸಭೆಯಲ್ಲಿ ರಾಜ್ಯ ಬಜೆಟ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಯುತ್ತಿರುವ ಸಮಯದಲ್ಲಿ ಜಾದಬ್ ಲಾಲ್ ಈ ಅಶ್ಲೀಲ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ, ಅಂದಹಾಗೆ ಶಾಸಕರ ಹಿಂದೆ ಕುಳಿತಿರುವ ಯಾರೋ ಒಬ್ಬರು ಈ ವಿಡಿಯೋವನ್ನು ಸೆರೆಹಿಡಿದ್ದಾರೆ.
ಸ್ಪೀಕರ್ ಹಾಗೂ ಇತರ ಶಾಸಕರು ಮಾತನಾಡುತ್ತಿರುವಾಗ ಜಾದಾಬ್ ಲಾಲ್ ನಾಥ್ ತಮ್ಮ ಫೋನ್‌ನಲ್ಲಿ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡುತ್ತಿದ್ದರು ಅನ್ನೋದು ತಿಳಿದು ಬಂದಿದೆ. ಈ ಘಟನೆ ಕುರಿತಂತೆ ರಾಜ್ಯ ಬಿಜೆಪಿ ಕಚೇರಿಗೆ ಆಗಮಿಸುವಂತೆ ತಿಳಿಸಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಅನ್ನೋದು ಹೇಳಲಾಗಿದೆ. ತ್ರಿಪುರದ ಬಾಗ್‌ಬಸಾ ಕ್ಷೇತದ ಶಾಸಕ ಜಾದಾಬ್‌ಲಾಲ್‌ನಾಥ್ ಯಾರಿಗೂ ಕ್ಯಾರೆ ಅನ್ನದೇ ವಿಡಿಯೋ ವೀಕ್ಷಿಸುತ್ತಿದ್ದು, ಒಬ್ಬ ಶಾಸಕ ಅನ್ನೋದನ್ನು ಮರೆತಿದ್ದಾರೆ ಎಂದು ಕೆಲವರು ಕಿಡಿಕಾರಿದ್ದಾರೆ.