ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರದಿಂದ ಕಣಕ್ಕಿಳಿಯಲು ಮುಂದಾಗಿರುವುದು ಒಂದು ಸಂಗತಿಯೇ ಅಲ್ಲ ಎಂದು ಮೈಸೂರಿನ ಶಾಸಕ ಎಸ್.ಎ ರಾಮದಾಸ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ, ಚುನಾವಣೆಯಲ್ಲಿ ಸ್ಪರ್ಧಿಸುವುದು ಅವರವರ ಇಚ್ಛೆಯಾಗಿರುತ್ತದೆ. ಪಕ್ಷಾತೀತವಾಗಿ ಹೇಳುವುದಾದರೆ ನಮ್ಮ ಜಿಲ್ಲೆಯವರೊಬ್ಬರು ಮುಖ್ಯಮಂತ್ರಿ ಆಗಲಿ ಎಂಬ ಆಸೆ ಎಲ್ಲರಲ್ಲೂ ಇರುತ್ತದೆ. ಆದರೆ ಸಿಎಂ ಕ್ಯಾಂಡಿಡೇಟ್ ಆದವರು ಬೇರೆ ಬೇರೆ ಜಿಲ್ಲೆಗಳಲ್ಲಿ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿದ್ದು, ಈ ವಿಚಾರ ಚರ್ಚೆಗೀಡಾದದ್ದು ಸರಿಯಲ್ಲ ಎಂದರು.
ʻʻಸಿದ್ದರಾಮಯ್ಯ ಹಿರಿಯರು, ಅವರ ಬಗ್ಗೆ ಅಪಾರ ಗೌರವವಿದೆ. ಅವರು ಕೋಲಾರದಿಂದ ಸ್ಪರ್ಧಿಸಿದರೆ ಮೈಸೂರು ಭಾಗದಲ್ಲಿ ಯಾವುದೇ ಪರಿಣಾಮ ಬೀರಲ್ಲ. ಎಲ್ಲಾ ಪಕ್ಷಗಳು ತಮ್ಮದೇ ಆದ ತತ್ವ, ಸಿದ್ಧಾಂತಗಳ ಆಧಾರದಲ್ಲಿ ಚುನಾವಣೆ ಎದುರಿಸುತ್ತವೆʼʼ ಎಂದಿದ್ದಾರೆ ʻಪ್ರತಿಯೊಂದು ಧರ್ಮದ ಸಾರವೂ ಅಹಿಂಸೆಯಾಗಿದೆ. ಇದುವರೆಗೆ ಯಾರೊಬ್ಬರೂ ಕುರಾನ್ ಅನ್ನು ಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡಿಲ್ಲ. ಇಸ್ಲಾಂ ಧರ್ಮದಲ್ಲಿ ಮೂರ್ತಿ ಪೂಜೆಗೆ ಅವಕಾಶವಿಲ್ಲ. ಆದರೂ ತನ್ವೀರ್ ಸೇಠ್ ರಾಜಕೀಯ ಲಾಭಕ್ಕಾಗಿ ಟಿಪ್ಪು ಪ್ರತಿಮೆ ನಿರ್ಮಾಣ ಮಾಡುತ್ತೇನೆಂದು ಹೇಳಿರುವುದು ಸರಿಯಲ್ಲʼʼ ಎಂದು ರಾಮದಾಸ್ ಪ್ರತಿಕ್ರಿಯಿಸಿದರು.