ವಿಜಯಪುರ: ಸಮಾಜ ಒಡೆಯುವುದು, ಅರಾಜಕತೆ ಸೃಷ್ಟಿಸುವುದೇ ಕಾಂಗ್ರೆಸ್ ಇತಿಹಾಸ. ಬಿಜೆಪಿ ವಿಕಾಸದ ಸಂಕೇತವಾದರೆ, ಕಾಂಗ್ರೆಸ್ ವಿನಾಶದ ಸಂಕೇತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ವಿಜಯ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿ, ಪಾರದರ್ಶಕತೆ, ವಿಕಾಸ ಎನ್ನುವುದೇ ಬಿಜೆಪಿಯ ಇನ್ನೊಂದು ಹೆಸರು. ಭ್ರಷ್ಟಾಚಾರ, ಕಮಿಷನ್ ಎಂದರೆ ಕಾಂಗ್ರೆಸ್ಸಿನ ಮತ್ತೊಂದು ಹೆಸರು ಎಂದರು.
ಕಾಂಗ್ರೆಸ್ಸಿನವರಿಗೆ ಕೆಲಸ ಮಾಡುವುದು ಬೇಕಿಲ್ಲ. ಅವರ ಅಜೆಂಡಾ ಕೇವಲ ಕುರ್ಚಿ ಆಗಿದೆ. ಜನಪರ ಕೆಲಸ ಮಾಡುವ ಬಿಜೆಪಿಗೆ ಇನ್ನಷ್ಟುಕೆಲಸ ನೀಡಿ, ಕಾಂಗ್ರೆಸ್ಸನ್ನು ಮನೆಗೆ ಕಳುಹಿಸಿ, ಕಾಂಗ್ರೆಸ್ ದೇಶದಲ್ಲಿ ನಾಯಕತ್ವ ಇಲ್ಲದ ಪಕ್ಷ. ಸಮಾಜ ಒಡೆಯುವ ಪಕ್ಷ. ದೇಶವನ್ನು ಇಬ್ಭಾಗಿಸಿದವರನ್ನು ಅಕ್ಕಪಕ್ಕದಲ್ಲಿ ಇಟ್ಟುಕೊಂಡು ರಾಹುಲ್ ಗಾಂಧಿಯವರು ಭಾರತ ಜೋಡೋ ಯಾತ್ರೆಗೆ ಹೊರಟಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಮೋದಿ ಆಡಳಿತಾವಧಿಯಲ್ಲಿ ದೇಶದಲ್ಲಿ 12 ಕೋಟಿ, ಕರ್ನಾಟಕದಲ್ಲಿ 23 ಲಕ್ಷ ಶೌಚಾಲಯ ನಿರ್ಮಿಸಲಾಗಿದೆ ಎಂದರು. ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನಗೊಳಿಸಿದ್ದಾರೆ. ಕರ್ನಾಟಕ ಸರ್ಕಾರವೂ ವೈದ್ಯಕೀಯ ಚಿಕಿತ್ಸೆಗೆ ಯಶಸ್ವಿನಿ ಯೋಜನೆ ಅನುಷ್ಠಾನಗೊಳಿಸಿದೆ ಎಂದರು.