ಬೆಂಗಳೂರು: ನಾನು ಹೇಳಿದ್ದು ಶುದ್ಧ ತಮಾಷೆಗಾಗಿ, ಹಾಗಂತ ಅದನ್ನು ಗಂಭೀರವಾಗಿ ತೆಗೆದುಕೊಂಡು ಟಿಕೆಟ್ ಕೇಳಲು ಬಂದರೆ ಸಂಸದೀಯ ಮಂಡಳಿಗೆ ನಾನು ಏನು ಉತ್ತರ ಕೊಡಲಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಭವಾನಿ ರೇವಣ್ಣ ಅವರಿಗೆ ಹಾಸನ ಕ್ಷೇತ್ರ ಸುರಕ್ಷಿತವಲ್ಲ, ನಾನು ಹೇಳಿದ್ದು ತಮಾಷೆಗೆ, ಆದರೆ ನನ್ನನ್ನು ಮನೆ ಮುರುಕ ಎಂದು ಬಿಂಬಿಸುತ್ತಿದ್ದಾರೆ, ದಯವಿಟ್ಟು ಅದನ್ನು ಯಾರು ಗಂಭೀರವಾಗಿ ಪರಿಗಣಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ. ಭವಾನಿ ರೇವಣ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದರೆ ಹಾಸನದಿಂದ ಟಿಕೆಟ್ ಕೊಡಲು ತಮ್ಮ ಪಕ್ಷ ಸಿದ್ಧವಿದೆ ಎಂದು ಹೇಳಿದ್ದರು.
ರೇವಣ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದರೆ ಟಿಕೆಟ್ ಕೊಡಲು ಸಿದ್ಧ. ಭವಾನಿ ಅಕ್ಕ ನಮ್ಮ ಪಕ್ಷದಿಂದ ಸ್ಪರ್ಧಿಸಬೇಕೆಂದು ಬಯಸಿದರೆ ಹೊಳೆನರಸೀಪುರ ಕ್ಷೇತ್ರದ ಅಭ್ಯರ್ಥಿಯಾಗಲಿ. ಆ ಕ್ಷೇತ್ರಕ್ಕೆ ಭವಾನಿ ಅವರಿಗಿಂತ ಉತ್ತಮ ಅಭ್ಯರ್ಥಿ ಸಿಗಲ್ಲ ಎಂದು ಹೇಳಿದ್ದಾರೆ.
ಆದರೆ ಈ ಸಿಟಿ ರವಿ ಮತ್ತೆ ಮಾತು ಬದಲಾಯಿಸಿದ್ದು, ಆ ಬಗ್ಗೆ ಚರ್ಚೆ ಕೂಡ ನಡೆದಿಲ್ಲ, ನಾನು ಜೆಡಿಎಸ್ ಹೈಕಮಾಂಡ್ ಅಲ್ಲ, ಅವರ ಮನೆಯಲ್ಲಿಯೇ ಹೈಕಮಾಂಡ್ ಇದ್ದಾರೆ, ಅದನ್ನು ಸೀರಿಯಸ್ ಆಗಿ ತೆಗೆದುಕೊಂಡು ಟಿಕೆಟ್ ಕೊಡಿ ಅಂತಾ ಬರಬೇಡಿ, ಕುಮಾರಸ್ವಾಮಿ ಬೇಕಾದರೆ ಇದು ಮನೆ ಜಗಳ ಎಂದು ಹೇಳಬಹುದು ಎಂದಿದ್ದಾರೆ. ಪ್ರೀತಂ ಗೌಡ ವಿರುದ್ಧ ಯಾರೇ ಸ್ಪರ್ಧಿಸಿದರೂ ಪ್ರೀತಂ ಗೆಲುವು ನಿಶ್ಚಿತ ಎಂದು ಹೇಳಿದ್ದಾರೆ.