ಬೆಂಗಳೂರು : ಮುಂದಿನ ವಿಧಾನಸಭೆ ಎಲೆಕ್ಷನ್ ನಲ್ಲಿ 150 ಗುರಿ ಹೊತ್ತು ಸಾಗುತ್ತಿರುವ ರಾಜ್ಯ ಬಿಜೆಪಿ ಬೃಹತ್ ರಥಯಾತ್ರೆ ಮಾರ್ಚ್ 1 ರಿಂದ 20 ರವರೆಗೆ ರಾಜ್ಯದ ಎಲ್ಲ ಅಸೆಂಬ್ಲಿ ಕ್ಷೇತ್ರಗಳಲ್ಲಿ ಸಂಚರಿಸಲಿದೆ. ಫೆಬ್ರವರಿ 28 ಕ್ಕೆ ಬಿಜೆಪಿ ಕಚೇರಿಯಲ್ಲಿ ಪೂಜೆ ಮಾಡಿ, ವಾಹನ ರಥಗಳನ್ನು 4 ಕೇಂದ್ರಗಳಿಗೆ ಕಳುಹಿಸಿಕೊಡಲಾಗುತ್ತಿದ್ದು, ಅಲ್ಲಿಂದ ಯಾತ್ರೆ ಮುಂದುವರಿಯಲಿದೆ.
ಯಾತ್ರೆಗಳಲ್ಲಿ 50 ಕ್ಕೂ ಹೆಚ್ಚು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಬಿಜೆಪಿ ನಾಯಕರು ಪಾಲ್ಗೊಳ್ಳುತ್ತಾರೆ. ರಾಜ್ಯದ ಎಲ್ಲ 31 ಜಿಲ್ಲೆಗಳು 224 ವಿಧಾನ ಸಭಾ ಕ್ಷೇತ್ರಗಳ ಸಂಪರ್ಕ ನಡೆಯಲಿದೆ. ನಾಲ್ಕು ರಥಗಳ ಮೂಲಕ ಒಟ್ಟು 8 ಸಾವಿರ ಕಿ.ಮೀ ಯಾತ್ರೆ ಸಂಚರಿಸಲಿದೆ. 150 ಕ್ಕೂ ಹೆಚ್ಚು ರೋಡ್ ಶೋ ನಡೆಯಲಿದ್ದು, 4 ಕೋಟಿ ಜನರನ್ನು ಸಂಪರ್ಕಿಸಲಾಗುವುದು. ಯಾತ್ರೆಯ ಅವಧಿ 20 ದಿನಗಳಾಗಿದ್ದು, ಗೆಲುವು ಸಾಧಿಸೋದು , ಮೊದಲ ಬಾರಿಗೆ ಸ್ಪಷ್ಟ ಬಹುಮತ ಪಡೆದು ದಾಖಲೆ ಸೃಷ್ಟಿಸೋದು ಇದರ ಗುರಿ ಎಂದು ರಾಜ್ಯದ ಸಚಿವರಾದ ಸಿಸಿ ಪಾಟೀಲ್ , ಎನ್ ರವಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಾರ್ಚ್ 25 ರಂದು ದಾವಣಗೆರೆಯಲ್ಲಿ ಮೋದಿ ನೇತೃತ್ವದಲ್ಲಿ ಮೆಗಾ ರ್ಯಾಲಿ ನಡೆಯಲಿದೆ. ಬಿಜೆಪಿ ಸರ್ಕಾರದ ಸಾಧನೆ, ಕಾಂಗ್ರೆಸ್ ಹುಸಿ ಭರವಸೆ- ದೇಶ ಕೊಳ್ಳೆ ಹೊಡೆದುದನ್ನು ತಿಳಿಸ್ತೇವೆ ಎಂದರು. ಅಂದಹಾಗೆ ಮಾರ್ಚ್ ಮೊದಲ ವಾರ ಆರಂಭ ಆಗಲಿರುವ ಬಿಜೆಪಿ ರಥಯಾತ್ರೆಗೆ ಬಿಜೆಪಿ ರಥಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್ ಷಾ, ರಾಜನಾಥ್ ಸಿಂಗ್ ವಿವಿಧ ಭಾಗಗಳಲ್ಲಿ ಚಾಲನೆ ನೀಡಲಿದ್ದಾರೆ.