Sunday, September 24, 2023
spot_img
- Advertisement -spot_img

ಸಂಸತ್ ಭವನದಲ್ಲಿ ಫೋಟೋ ಸೆಷನ್ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಬಿಜೆಪಿ ಸಂಸದ!

ನವದೆಹಲಿ : ಹಳೆಯ ಸಂಸತ್ ಭವನದ ಮುಂದೆ ಫೋಟೋ ಶೂಟ್ ವೇಳೆ ಗುಜರಾತ್‌ನ ಬಿಜೆಪಿ ರಾಜ್ಯಸಭಾ ಸದಸ್ಯ ನರಹರಿ ಅಮೀನ್ ಪ್ರಜ್ಞೆ ತಪ್ಪಿ ಬಿದ್ದ ಘಟನೆ ನಡೆಯಿತು.

ಆದರೆ, ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡ ಅವರು, ಸಂಸತ್ ನ ಉಭಯ ಸದನಗಳ ಸದಸ್ಯರ ಜೊತೆ ಫೋಟೋ ಶೂಟ್ ನಲ್ಲಿ ಪಾಲ್ಗೊಂಡರು. ಸಾಮಾಜಿಕ ಜಾಲತಾಣದ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ವಿಡಿಯೋವೊಂದರಲ್ಲಿ, ನೆಲದ ಮೇಲೆ ಮಲಗಿದ್ದ ಅಮೀನ್‌ ಅವರನ್ನು ಸಂಸತ್ ಸದಸ್ಯರು ಸುತ್ತುವರೆದು ಉಪಚರಿಸಿದ್ದನ್ನು ಕಾಣಬಹುದು.

ಇದನ್ನೂ ಓದಿ : ಹಳೆಯ ಸಂಸತ್‌ಗೆ ಅಧಿಕೃತ ವಿದಾಯ : ಐತಿಹಾಸಿಕ ‘ಸೆಂಟ್ರಲ್ ಹಾಲ್‌’ನಲ್ಲಿ ವಿಶೇಷ ಕಾರ್ಯಕ್ರಮ

ನರಹರಿ ಅಮೀನ್ ಜುಲೈ 2020ರಲ್ಲಿ ರಾಜ್ಯಸಭಾ ಸದಸ್ಯರಾದರು. ಅವರು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 1994 ಮತ್ತು 1995 ರ ನಡುವೆ ಗುಜರಾತ್‌ನ ಮಾಜಿ ಉಪಮುಖ್ಯಮಂತ್ರಿಯೂ ಆಗಿದ್ದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles