ಬೆಂಗಳೂರು: ರಾಜ್ಯ ಬಿಜೆಪಿಯ ಪ್ರಮುಖ ನಾಯಕ, ಬೆಂಗಳೂರಿನ ಶಾಸಕರಲ್ಲೇ ಅಂತ್ಯಂತ ಪ್ರಭಾವಿ ಎನಿಸಿರುವ ಆರ್.ಅಶೋಕ್ ಹಲವು ವರ್ಷಗಳಿಂದ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಂತೆ ಗೆಲ್ಲುತ್ತಿದ್ದಾರೆ. ಇದೀಗ, ಹಿರಿಯ ಶಾಸಕನಿಗೆ ಶಾಕ್ ಕೊಟ್ಟಿರುವ ಡಿ.ಕೆ. ಸಹೋದರರು, ಅಶೋಕ್ ಆಪ್ತರನ್ನೇ ಕಾಂಗ್ರೆಸ್ ಪಕ್ಷಕ್ಕೆ ಸೆಳೆದಕೊಂಡಿದ್ದಾರೆ.
ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರದಲ್ಲಿ ಆಪರೇಷನ್ ಹಸ್ತಕ್ಕೆ ಚಾಲನೆ ಕೊಟ್ಟಿರುವ ಡಿ.ಕೆ. ಸಹೋದರರು, ‘ಸಾಮ್ರಾಟ್ ಅಶೋಕ್’ಗೆ ಟ್ರಬಲ್ ತಂದಿಟ್ಟಿದ್ದಾರೆ. ಅಶೋಕ್ ಅವರ ಶಿಷ್ಯರು ಹಾಗೂ ಆಪ್ತರನ್ನೇ ಡಿಕೆಶಿ ಹೈಜಾಕ್ ಮಾಡಿದ್ದಾರೆ.
ಪದ್ಮನಾಭನಗರದ ಆರ್ ಅಶೋಕ್ ಕೋಟೆ ಛಿದ್ರ ಮಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅವರ ಗೆಲುವಿನ ರೂವಾರಿಗಳಾಗಿದ್ದವರನ್ನೇ ಆಪರೇಷನ್ ಮಾಡಿ ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ; ಮಂತ್ರಿಗಳ ಆಕ್ರೋಶಕ್ಕೆ ಕಾರಣವಾಯ್ತು ಹರಿಪ್ರಸಾದ್ ಹೇಳಿಕೆ
ರಾಜಕೀಯ ಚದುರಂಗದಲ್ಲಿ ಚೆಕ್ ಮೇಟ್ ಇಟ್ಟಿರುವ ಡಿ.ಕೆ. ಶಿವಕುಮಾರ್, ಕಳೆದ ಚುನಾವಣೆಯಲ್ಲಿ ತನಗೆ ಕನಕಪುರದಲ್ಲಿ ಎದುರಾಳಿಯಾಗಿದ್ದ ಆರ್ ಅಶೋಕ್ ಅವರಿಗೆ ಬಿಗ್ ಶಾಕ್ ನೀಡಿದ್ದಾರೆ. ಅಶೋಕ್ ಅತ್ಯಾಪ್ತರನ್ನೇ ಕಾಂಗ್ರೆಸ್‌ಗೆ ಸೆಳೆದಿರುವ ಡಿಕೆಶಿ, ಮುಂದಿನ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಸೋಲಿನ ರುಚಿ ತೋರಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.
ಇದೇ ಶುಕ್ರವಾರ ಅಶೋಕ್ ಬೆಂಬಲಿಗರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಲಿದ್ದಾರೆ. ಮಾಜಿ ಉಪಮೇಯರ್, ಮಾಜಿ ಕಾರ್ಪೊರೇಟರ್‌ಗಳು ಸೇರಿದಂತೆ 8 ಜನ ಪ್ರಮುಖ ಮುಖಂಡರು ಕಮಲ ಬಿಟ್ಟು ‘ಕೈ’ ಹಿಡಿಯಲಿದ್ದಾರೆ. ಈಗಾಗಲೇ ಈ ಮುಖಂಡರು ಅಶೋಕ ಜೊತೆಗೆ ಸಂಬಂಧ ಕಳೆದುಕೊಂಡಿದ್ದಾರೆ ಎನ್ನಲಾಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಅರ್. ಅಶೋಕ ನಡುವಳಿಕೆಯಿಂದ ಬೆಸತ್ತು ಕಾಂಗ್ರೆಸ್ ಸೇರ್ಪಡೆಗೆ ಬಿಜೆಪಿ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಸೇರುವ ಬಿಜೆಪಿ ಮುಖಂಡರು ಯಾರು?
ಎಲ್. ಶ್ರೀನಿವಾಸ್, ಮಾಜಿ ಉಪ ಮಹಾಪೌರರು ಮತ್ತು ಮಾಜಿ ಪಾಲಿಕೆ ಸದಸ್ಯರು, ಆಂಜಿನಪ್ಪ, ಮಾಜಿ ನಗರಸಭೆ ಸದಸ್ಯರು, ಬೊಮ್ಮನಹಳ್ಳಿ, ಶೋಭಾ ಆಂಜಿನಪ್ಪ, ಮಾಜಿ ಬಿಬಿಎಂಪಿ ಸದಸ್ಯರು ಪದ್ಮನಾಭನಗರ ವಾರ್ಡ್, ಗೋವಿಂದ ರಾಜ್, ಗಣೇಶ ಮಂದಿರ ವಾರ್ಡ್ ಮಾಜಿ ಪಾಲಿಕೆ ಸದಸ್ಯರು. ಹೆಚ್. ನಾರಾಯಣ್, ಮಾಜಿ ಬಿಬಿಎಂಪಿ ಸದಸ್ಯರು, ಹೊಸಕೆರೆಹಳ್ಳಿ ವಾರ್ಡ್ ಮತ್ತು ಮಾಜಿ ಅಧ್ಯಕ್ಷರು ಆರೋಗ್ಯ ಸ್ಥಾಯಿ ಸಮಿತಿ ಬಿಬಿಎಂಪಿ, ವೆಂಕಟಸ್ವಾಮಿ ನಾಯ್ಡು, ಮಾಜಿ ಪಾಲಿಕೆ ಸದಸ್ಯರು, ಚಿಕ್ಕಲ್ಲಸಂದ್ರ ವಾರ್ಡ್, ಹೆಚ್. ಸುರೇಶ್ ಮಾಜಿ ಪಾಲಿಕೆ ಸದಸ್ಯರು, ಕುಮಾರಸ್ವಾಮಿ ಬಡಾವಣೆ ವಾರ್ಡ್, ಸುಪ್ರಿಯ ಶೇಖರ್, ಬಿಬಿಎಂಪಿ ಮಾಜಿ ಸದಸ್ಯರು, ಚಿಕ್ಕಕಲ್ಲಸಂದ್ರ ವಾರ್ಡ್, ಲಕ್ಷ್ಮಿ ಸುರೇಶ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು, ಸೋಮನಹಳ್ಳಿ ಜಿಲ್ಲಾ ಪಂಚಾಯತ್. ರಂಗದಾಮೇಗೌಡ್ರು , ಮಾಜಿ ಅಧ್ಯಕ್ಷರು, ಪದ್ಮನಾಭನಗರ ಮಂಡಲ ಬಿಜೆಪಿ ಘಟಕ. ಪ್ರಸಾದ್ ಬಾಬು, ಜಿಡಿಎಸ್ ಮುಖಂಡ, ಮಾಜಿ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ. ಪವನ್, ಬಿಜೆಪಿ ಮುಖಂಡ, ಪದ್ಮನಾಭ ನಗರ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.