Wednesday, March 22, 2023
spot_img
- Advertisement -spot_img

ಪ್ರತಿ ಬೂತ್ ಮಟ್ಟದಲ್ಲಿ ಮತದಾರರನ್ನು ನಿಭಾಯಿಸಲು ವಾಟ್ಸಾಪ್ ಗ್ರೂಪ್‍

ಗುಜರಾತ್ : ಬಿಜೆಪಿ ನಾಯಕರು ವಾಟ್ಸಾಪ್ ಉಸ್ತುವಾರಿಗಳ ನೇಮಕ ಮಾಡುವ ಮೂಲಕ ತಮ್ಮ ಮತದಾರರ ಮೇಲೆ ನಿಗಾ ವಹಿಸಲು ಮುಂದಾಗಿದೆ. ಬಿಜೆಪಿಯು ಪ್ರತಿ ಬೂತ್ ಮಟ್ಟದಲ್ಲಿ ಮತದಾರರನ್ನು ನಿಭಾಯಿಸಲು ವಾಟ್ಸಾಪ್ ಗ್ರೂಪ್‍ಗಳನ್ನು ರಚಿಸಿದೆ, ಪ್ರತಿ ಗ್ರೂಪ್‍ಗೆ ಇಬ್ಬರು ಉಸ್ತುವಾರಿಗಳನ್ನು ನೇಮಿಸಿದೆ. ಈ ಉಸ್ತುವಾರಿಗಳು ಬೂತ್‍ನಲ್ಲಿನ ಮತದಾರರನ್ನು ಗ್ರೂಪ್‍ನಲ್ಲಿ ಸೇರಿಸಿ ಪಕ್ಷದ ಪರವಾದ ಮಾಹಿತಿಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಬರೀ ವಾಟ್ಸಾಪ್ ಮಾತ್ರವಲ್ಲದೇ ಫೇಸ್‍ಬುಕ್ , ಇನ್‍ಸ್ಟಾಗ್ರಾಮ್, ಟ್ವಿಟರ್‌ಳನ್ನು ಬಳಸಿಕೊಂಡು ನಿರ್ದಿಷ್ಟ ವರ್ಗಗಳನ್ನು ತಲುಪುವ ಗುರಿ ಹೊಂದಲಾಗಿದೆ. ಇದಕ್ಕಾಗಿ ವಿಶೇಷ ತಂಡವನ್ನೇ ಸ್ಥಾಪಿಸಿದ್ದು ರಾಜ್ಯಾದ್ಯಂತ 30,000 ಮಂದಿ ಸಕ್ರಿಯವಾಗಿ ಬಿಜೆಪಿ ಪರ ಕಾರ್ಯನಿರ್ವಹಿಸುತ್ತಿದ್ದಾರೆ. ಈ 30,000 ಜನರು ಬಿಜೆಪಿಯ ಐಟಿ ಸೆಲ್ ನೊಂದಿಗೆ ನೇರ ಸಂಪರ್ಕ ಹೊಂದಿರಲಿದ್ದು, ಅಲ್ಲಿಂದ ಬರುವ ಕಂಟೆಂಟ್‍ಗಳನ್ನು ಬೂತ್ ಮಟ್ಟದ ಜನರವರೆಗೂ ತಲುಪಿಸುವ ಕಾರ್ಯ ನಡೆಸುತ್ತಿದ್ದಾರೆ.

ಗುಜರಾತ್ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಅಭ್ಯರ್ಥಿಗಳ ಪಟ್ಟಿಯೂ ಪ್ರಕಟಗೊಂಡಿದ್ದು, ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಗೊಂಡಿದೆ. ಈ ಬೆನ್ನೆಲೆ ಪ್ರಚಾರ ಕಾರ್ಯಕ್ಕೆ ಇಳಿದಿರುವ ರಾಜ್ಯ ಬಿಜೆಪಿ ವಿನೂತನ ಪ್ರಚಾರ ಮಾರ್ಗ ಬಳಸಲು ಆರಂಭಿಸಿದೆ. ‘ಡಬಲ್ ಎಂಜಿನ್ ಸರ್ಕಾರ್,’ ‘ಭರೋಸಾ ನಿ ಬಿಜೆಪಿ ಸರ್ಕಾರ್’, ‘ಅಮೇ ಬನವ್ಯು ಗುಜರಾತ್’ ಹೆಸರಿನಲ್ಲಿ ಗುಂಪುಗಳನ್ನು ರಚಿಸಲಾಗುತ್ತಿದೆ.

ಬಿಜೆಪಿ ಐಟಿ ಸೇಲ್ ನೀಡುವ ಕಟೆಂಟ್ ನೊಂದಿಗೆ ಸ್ಥಳೀಯ ಕ್ಷೇತ್ರಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇಲ್ಲಿ ಪೋಸ್ಟ್ ಮಾಡುತ್ತಿದ್ದು, ಇದು ಪ್ರತಿಸ್ಪರ್ಧಿಯ ವಿರುದ್ಧ ಋಣಾತ್ಮಕ ಅಂಶಗಳನ್ನು ಮತದಾರರಿಗೆ ತಲುಪಸಲಾಗುತ್ತಿದೆ. ವಾಟ್ಸಾಪ್ ಸ್ಟೇಟಸ್ ಮತ್ತು ಫೇಸ್‍ಬುಕ್ ಮತ್ತು ಇನ್‍ಸ್ಟಾಗ್ರಾಮ್ ರೀಲ್‍ಗಳಗಳನ್ನು ಸಿದ್ದಪಡಿಸಿದ ಗ್ರೂಪ್‍ನಲ್ಲಿ ಶೇರ್ ಮಾಡುತ್ತಿದ್ದು, ಇವುಗಳನ್ನು ಬಳಸಲು ಪ್ರೇರೆಪಿಸಲಾಗುತ್ತಿದೆ. ಈ ಮೂಲಕ ತಳ ಹಂತದವರೆಗೂ ಮತದಾರರನ್ನು ತಲುಪಲು ಪ್ರಯತ್ನಿಸಲಾಗುತ್ತಿದೆ.

Related Articles

- Advertisement -

Latest Articles