ಬೆಂಗಳೂರು : ಜೆಡಿಎಸ್ ಪಕ್ಷದ ಪಂಚರತ್ನ ಪ್ರಮೋಶನ್ ಯಾತ್ರೆ ಯಾಗಿದ್ದು, ಜನಪರ ಅಭಿವೃದ್ಧಿಯ ಯಾತ್ರೆಯಲ್ಲ ಎಂದು
ಬಿಜೆಪಿ ಲೇವಡಿ ಮಾಡಿದೆ. ಪಂಚರತ್ನ ಕುಟುಂಬದ 5 ಪಂಚ ಜನರನ್ನು ಪ್ರಮೋಶನ್ ಮಾಡುವ ಯಾತ್ರೆ. ಈ ಪಂಚರತ್ನ ಯಾತ್ರೆ, ಪಂಚರ್ ಆಗಿದೆ ಎಂದು ಹೇಳಿದೆ.
ಪಂಚರ್ ರತ್ನ ಪ್ರಮೋಶನ್ ಯಾತ್ರೆ ಎಂಬುದು ಹಳೆ ಮೈಸೂರಿನ ಅಭಿವೃದ್ಧಿಗೆ ಹಮ್ಮಿಕೊಂಡ ಯಾತ್ರೆ ಅಲ್ಲಾ ಹೆಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಹೀಗೆ ಜೆಡಿಎಸ್‌ನ 5 ಜನರನ್ನು ಪ್ರಮೋಶನ್ ಮಾಡಲು ಆಯೋಜಿಸಿದ ಯಾತ್ರೆ ಎಂದು ಟ್ವೀಟ್ ಮಾಡಿದೆ.
ಜನರ ಒಳ್ಳೆಯತನವನ್ನು ದುರುಪಯೋಗ ಪಡಿಸಿಕೊಳ್ಳುವುದರಲ್ಲಿ ಹೆಚ್ ಡಿ ಕುಮಾರಸ್ವಾಮಿ ಎತ್ತಿದ ಕೈ. ರಾಜಕೀಯವನ್ನು ಫ್ಯಾಮಿಲಿ ಬಿಸ್ನೆಸ್ ಮಾಡಿಕೊಂಡಿರುವ ಜೆಡಿಎಸ್ ಲಾಭಕ್ಕಾಗಿ ಏನು ಬೇಕಾದರೂ ಮಾಡುತ್ತದೆ ಎಂಬುದು ಈಗಾಗಲೇ ಸಾಬೀತುಪಡಿಸಿದೆ ಎಂದು ಟ್ವೀಟ್ ಮಾಡಿದೆ.ಬಿಜೆಪಿಗೆ ಜನ ಮತ್ತು ಕ್ಷೇತ್ರದ ಅಭಿವೃದ್ಧಿಯೇ ಮುಖ್ಯ.
ಹಳೇ ಮೈಸೂರು ಭಾಗದಲ್ಲಿ ಕೆಲವೇ ಕ್ಷೇತ್ರಗಳಲ್ಲಿ ಗೆದ್ದರೂ ಜೆಡಿಎಸ್ಗಿಂತ ಗಮನಾರ್ಹ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದೆ. ಗ್ರಾಮೀಣ ಭಾಗದಲ್ಲಿ ಬಿಜೆಪಿ ಶಾಸಕರು ಮಾಡಿರುವ ಅಭಿವೃದ್ಧಿಗೆ ಜನ ಮೆಚ್ಚಿದ್ದಾರೆ ಎಂದು ಬಿಜೆಪಿ ಹೇಳಿದೆ.