Thursday, June 8, 2023
spot_img
- Advertisement -spot_img

ಕುಟುಂಬ ರಾಜಕೀಯಕ್ಕೆ ಪ್ರಧಾನಿ ಮೋದಿ ವಿರೋಧ : ನಾಯಕರ ಅಸಮಾಧಾನ

ಬೆಂಗಳೂರು: ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಮಕ್ಕಳಿಗೆ ಪಕ್ಷದ ಟಿಕೆಟ್​ ನಿರೀಕ್ಷಿಸುತ್ತಿದ್ದವರಿಗೆ ಪ್ರಧಾನಿ ನರೇಂದ್ರ ಮೋದಿ ಶಾಕ್ ಕೊಟ್ಟಿದ್ದಾರೆ.

ಕುಟುಂಬ ರಾಜಕಾರಣ ವಿರೋಧಿಸಿ ಹೊಸ ಮುಖಗಳಿಗೆ ಮಣೆ ಹಾಕುವ ಚಿಂತನೆ ನಡೆಸಿದೆ. ಬಿಜೆಪಿ ಕೇಂದ್ರ ಚುನಾವಣೆ ಸಮಿತಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಬಿಜೆಪಿ ಶಾಸಕರ ಪುತ್ರರಿಗೆ ಟಿಕೆಟ್​ ನೀಡುವುದಕ್ಕೆ ವಿರೋಧಿಸಿದ್ದಾರೆ.

ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ ಎಂದು ಅಬ್ಬರಿಸಿದ್ದರು. ಮಾಜಿ ಸಿಎಂ ಬಿಎಸ್ ಯಡಿಯೂಪ್ಪರಂತಹ ನಾಯಕರೇ ತಮ್ಮ ಮಕ್ಕಳಿಗೆ ಈ ಬಾರಿ ಟಿಕೆಟ್​ ಕೊಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದ್ರೆ, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಮತ ವ್ಯಕ್ತಪಡಿಸಿಲ್ಲ. ಮೋದಿ ಅವರ ನಡೆಗೆ ಬಿಎಸ್​ ಯಡಿಯೂರಪ್ಪ ಸೇರಿದಂತೆ ರಾಜ್ಯ ನಾಯಕರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಪಟ್ಟಿ ಬಿಡುಗಡೆಗೆ ವಿಳಂಬವಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿ ಶಾಸಕ ಜಿಹೆಚ್ ತಿಪ್ಪಾರೆಡ್ಡಿ, ಎಂಟಿಬಿನಾಗರಾಜ್, ಆನಂದ್ ಮಾಮನಿ ಜಿ.ಎಂ. ಸಿದ್ದೇಶ್ವರ, ಆನಂದ್ ಸಿಂಗ್ , ಸಚಿವ ವಿ ಸೋಮಣ್ಣ ಸೇರಿ ಹಲವರು ಮಕ್ಕಳಿಗೆ ನೀಡಲು ಕೇಳಿಕೊಂಡಿದ್ದರು.

Related Articles

- Advertisement -spot_img

Latest Articles