ರಾಜಸ್ಥಾನ: ಬಿಜೆಪಿ ಗೌತಮ್ ಅದಾನಿ ಜೇಬಿಗೆ ಹಣ ವರ್ಗಾವಣೆ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನರೇಂದ್ರ ಮೋದಿ ಹೇಳಿದ್ದರು – ಕಪ್ಪುಹಣವನ್ನು ನಿರ್ಮೂಲನೆ ಮಾಡದಿದ್ದರೆ ನನ್ನನ್ನು ಗಲ್ಲಿಗೇರಿಸಿ ಎಂದಿದ್ದರು. ಹಾಗಾಯಿತಾ ಎಂದು ಪ್ರಶ್ನಿಸಿದ್ದಾರೆ.
ಚುರು ನಗರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸಮಯದಲ್ಲಿ ನರೇಂದ್ರ ಮೋದಿ ನಿಮಗೆ ಹೇಳಿದರು, ನಿಮ್ಮ ಮೊಬೈಲ್ ಫೋನ್ ಟಾರ್ಚ್‌ಗಳು, ಪಾತ್ರೆಗಳನ್ನು ಬಡಿಯಿರಿ ಎಂದರು. ದೇಶದಲ್ಲಿ ಆಮ್ಲಜನಕವಿಲ್ಲದೆ ಜನ ಸಾಯುತ್ತಿದ್ದರು. ಈಗ ನಿಮ್ಮ ಪಾತ್ರೆಗಳ ಬಡಿಯಿರಿ ಎನ್ನುತ್ತಿದ್ರು ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಸ್ಟಾಲಿನ್, ಡಿಎಂಕೆ ಸಚಿವರ ಕುರಿತು ಅವಹೇಳನಕಾರಿ ಪೋಸ್ಟ್: ಬಿಜೆಪಿ ನಾಯಕನ ಬಂಧನ
ಆದ್ರೆ ರಾಜಸ್ಥಾನದಲ್ಲಿ ನಾವು ಆಹಾರ, ಔಷಧಿ ನೀಡಿದೆವು. ರೋಗಿಗಳನ್ನು ಉಳಿಸಲಾಯಿತು. ಏಕೆಂದರೆ ನಾವು ಬಡವರ ಪರ, ರೈತರ ಪರ, ಕಾರ್ಮಿಕರ ಪರ ಸರ್ಕಾರವನ್ನು ನಡೆಸುತ್ತಿದ್ದೆವು ಎಂದಿದ್ದಾರೆ. ಬಡವರ ಜೇಬಿಗೆ ಹಣ ವರ್ಗಾವಣೆ ಮಾಡುವುದು ಕಾಂಗ್ರೆಸ್ ಪಕ್ಷದ ಕೆಲಸ. ಅವರು ಅದಾನಿ ಜೇಬಿಗೆ ಹಣವನ್ನು ವರ್ಗಾಯಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Telangana Election 2023-ಕಣದಲ್ಲಿ 2,290 ಅಭ್ಯರ್ಥಿಗಳು, 608 ನಾಮಪತ್ರ ವಾಪಸ್!
“ನೀವು ಎಲ್ಲಿ ನೋಡಿದರೂ, ವಿಮಾನ ನಿಲ್ದಾಣಗಳು, ಬಂದರುಗಳು, ಸಿಮೆಂಟ್ ಸ್ಥಾವರಗಳು, ರಸ್ತೆಗಳು ಎಲ್ಲವೂ ಅದಾನಿಯದ್ದು, ಶ್ರೀಮಂತರಿಗಾಗಿ ಪ್ರಧಾನಿ ಕೆಲಸ ಮಾಡುತ್ತಾರೆ. ಅವರು ಅದಾನಿಗೆ ಸಹಾಯ ಮಾಡುತ್ತಾರೆ, ಅದಾನಿ ಹಣ ಸಂಪಾದಿಸುತ್ತಾರೆ ಮತ್ತು ಆ ಹಣವನ್ನು ವಿದೇಶದಲ್ಲಿ ಬಳಸಲಾಗುತ್ತದೆ. ವಿದೇಶಿ ಕಂಪನಿಗಳನ್ನು ಈ ಹಣದಿಂದ ಖರೀದಿಸಲಾಗಿದೆ ಎಂದು ಆರೋಪಿಸಿದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.