ಚೆನ್ನೈ : ಧರ್ಮವನ್ನು ನ್ಯೂನತೆಗಳನ್ನು ಮರೆಮಾಚುವ ಆಯುಧವಾಗಿ ಬಿಜೆಪಿ ಬಳಸಿಕೊಳ್ತಿದೆ ಎಂದು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಹೇಳಿದರು.
ಹೊಸದಾಗಿ ಆರಂಭಿಸಿರುವ ಪಾಡ್ ಕಾಸ್ಟ್ ‘ಸ್ಪೀಕಿಂಗ್ ಫಾರ್ ಇಂಡಿಯಾ‘ದ ಮೊದಲ ಎಪಿಸೋಡ್ ನಲ್ಲಿ ಮಾತನಾಡಿದ ಅವರು, ಬಿಜೆಪಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿ ಉರಿಯುವ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಏಕತೆಯನ್ನು ಸರ್ವನಾಶ ಮಾಡಿದೆ ಎಂದು ಕಟುವಾಗಿ ಟೀಕಿಸಿದರು.
ಇದನ್ನೂ ಓದಿ : ವೋಟ್‌ಗಾಗಿ ಸನಾತನ ಧರ್ಮದ ನಿಂದನೆ: ಅಮಿತ್ ಶಾ ಕಿಡಿ
ತನ್ನ 8 ನಿಮಿಷಗಳ ಮಾತಿನಲ್ಲಿ ಸ್ಟಾಲಿನ್ ಹೆಚ್ಚಿನ ಸಮಯವನ್ನು ಬಿಜೆಪಿಯನ್ನು ಟೀಕಿಸುವುದಕ್ಕೆ ಮೀಸಲಿಟ್ಟರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 2014ರಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದರಲ್ಲಿ ವಿಫಲವಾಗಿದೆ. ಉದ್ದೇಶಪೂರ್ವಕವಾಗಿ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದೆ. ಜನರ ತಲೆಯಲ್ಲಿ ದ್ವೇಷದ ಬೀಜ ಬಿತ್ತಿದೆ. ಜಿಎಸ್ ಟಿ ಮೂಲಕ ರಾಜ್ಯಗಳ ಆರ್ಥಿಕ ಹಕ್ಕನ್ನು ಕಸಿದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತದ ಕೋಮುವಾದಿ ರಾಜಕಾರಣಕ್ಕೆ ಮಣಿಪುರ ಮತ್ತು ಹರಿಯಾಣ ಬಲಿಯಾಯಿತು. ಇಂತಹ ಘಟನೆಗಳಿಂದ ರಾಷ್ಟ್ರವನ್ನು ಕಾಪಾಡಲು 2024ರ ಸಾರ್ವತ್ರಿಕ ಚುನಾವಣೆಯಲ್ಲಿ ‘ಇಂಡಿಯಾ’ ಒಕ್ಕೂಟ ಗೆಲುವು ದಾಖಲಿಸಬೇಕು ಎಂದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.