Saturday, June 10, 2023
spot_img
- Advertisement -spot_img

ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ : ಸಚಿವ ಸುನೀಲ್ ಕುಮಾರ್

ಬೆಂಗಳೂರು: ಪೂರ್ಣ ಬಹುಮತದೊಂದಿಗೆ ಮತ್ತೊಮ್ಮೆ ಸರ್ಕಾರವನ್ನು ಬಿಜೆಪಿ ರಚನೆ ಮಾಡುತ್ತದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಅಳುಕು ಇಲ್ಲದೆ ಚುನಾವಣೆಗೆ ಹೋಗುತ್ತಿದ್ದೇವೆ. ರೈತ ವಿದ್ಯಾ ನಿಧಿಯಿಂದ ಹಿಡಿದು ಹಕ್ಕು ಪತ್ರ ಕೊಡುವ ತನಕ ಹತ್ತಾರು ಯೋಜನೆಗಳು ಜನಮಾನಸದಲ್ಲಿವೆ. ಜನರಿಗೆ ಇದ್ದಂತ ನೀರಿಕ್ಷೆಗಳನ್ನು ನಮ್ಮ ಸರ್ಕಾರ ಪೂರ್ತಿ ಮಾಡಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಮತ್ತೆ ಕೇಂದ್ರದಲ್ಲಿ ಎರಡು ಕಡೆಯಲ್ಲಿಯೂ ಸರ್ಕಾರ ಬಂದ ನಂತರ ಬಹಳ ದೊಡ್ಡ ಪ್ರಮಾಣದಲ್ಲಿ ಜನರಿಗೆ ತಲುಪುವ ಹತ್ತಾರು ಯೋಜನೆಗಳನ್ನು ನಮ್ಮ ಸರ್ಕಾರ ಕೊಟ್ಟಿದೆ ಎಂದು ತಿಳಿಸಿದರು. ನಾನು ರಾಜ್ಯದ ಜನರ ನಾಡಿಮಿಡಿತವನ್ನು ಗ್ರಹಿಸಿದ್ದೇನೆ. ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನೂ ನೋಡಿದ್ದೇನೆ ಕರ್ನಾಟಕದಲ್ಲಿ ಬಿಜೆಪಿಗೆ ಈ ಬಾರಿ ಸಂಪೂರ್ಣ ಜನಾದೇಶ ಸಿಗಲಿದೆ ಎಂದು ಅಮಿತ್ ಷಾ ಹೇಳಿದ್ದರು.

ನೂರರಷ್ಟು ಕೆಲಸವನ್ನು ಮಾಡಿದ್ದೇವೆ ಎಂದು ಹೇಳುತ್ತಿಲ್ಲ, ಶೇ.80ರಷ್ಟು ತಲುಪಿದ್ದೇವೆ. ಕಾಂಗ್ರೆಸ್‌ ಅಥವಾ ಜೆಡಿಸ್‌ ಹೋಲಿಕೆ ಮಾಡಿದ್ರೆ ಅತ್ಯಂತ ವೇಗವಾಗಿ ಯೋಜನೆ ತಲುಪಿಸುವಂತ ಕಾರ್ಯ ಬಿಜೆಪಿಯಿಂದ ಆಗಿದೆ ಎಂದು ಹೇಳಿದ್ದಾರೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

Related Articles

- Advertisement -spot_img

Latest Articles