Friday, September 29, 2023
spot_img
- Advertisement -spot_img

‘ಹರಿಪ್ರಸಾದ್- ರಾಯರೆಡ್ಡಿ ಇಂಟರ್ನಲ್ ಆಪರೇಷನ್ ಮಾಡ್ತಿದ್ದಾರೆ’

ಬೆಂಗಳೂರು: ‘ಬಿ.ಕೆ. ಹರಿಪ್ರಸಾದ್ ಮತ್ತು ಬಸವರಾಜ ರಾಯರೆಡ್ಡಿ ಇಬ್ಬರೂ ಕಾಂಗ್ರೆಸ್ ಪಕ್ಷದೊಳಗೆ ಇಂಟರ್ನಲ್ ಆಪರೇಷನ್ ಮಾಡ್ತಿದ್ದಾರೆ. ‘ಆಪರೇಷನ್ ಹಸ್ತ’ ಅಲ್ಲೇ ಶುರುವಾಗಿದೆ. ಅವರ ಆಂತರಿಕ ಗೊಂದಲಗಳಿಂದಲೇ ಇದೆಕ್ಕೆಲ್ಲಾ ಇತಿಶ್ರೀ ಆಗಲಿದೆ’ ಎಂದು ಮಾಜಿ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮಾತನಾಡಿದ ಅವರು, ’30 ವರ್ಷದ ರಾಜಕೀಯದಲ್ಲಿ ಹಲವು ಮುಖ್ಯಮಂತ್ರಿಗಳ ಆಡಳಿತ ವೈಖರಿ ನೋಡಿದ್ದೇನೆ. ಇಷ್ಟು ದೊಡ್ಡ ಆಡಳಿತ ವಿರೋಧಿ ಅಲೆ ನೋಡಿಲ್ಲ. ಸಿದ್ದರಾಮಯ್ಯನವರ ಅನುಭವ ಎಲ್ಲಿ ಹೋಗಿದೆಯೋ ಗೊತ್ತಿಲ್ಲ. ಹರಿಪ್ರಸಾದ್, ಡಿಕೆಶಿ, ರಾಯರೆಡ್ಡಿ ಕಾಲು ಕೆರೆದುಕೊಂಡು ನಿಂತಿರೋದು ಸಿದ್ದರಾಮಯ್ಯ ಅವರಿಗೆ ತಲೆನೋವಾಗಿದೆ’ ಎಂದು ಹೇಳಿದರು.

ಇದನ್ನೂ ಓದಿ; ‘ನೀವು ಸಾಯೋದು ಬೇಡ; ನಿಮ್ಮ ಹೆಣ ಬಿಜೆಪಿ ಕಚೇರಿಗೆ ಬರೋದು ಬೇಡ’

‘ನಾನು 30 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಆಡಳಿತಕ್ಕೆ ಬಂದು 3 ತಿಂಗಳಲ್ಲಿ ಇಷ್ಟು ಜನವಿರೋಧಿ ಸರ್ಕಾರವನ್ನು ಕರ್ನಾಟಕ ಮಾತ್ರವಲ್ಲದೆ ದೇಶದ ಯಾವುದೇ ರಾಜ್ಯದಲ್ಲಿ ನಾನು ಕಂಡಿಲ್ಲ. ಅಂತೂ ಇಂತೂ ಕರ್ನಾಟಕದಲ್ಲಿ ಅತಿ ಶೀಘ್ರವಾಗಿ ಅವರ ಆಂತರಿಕ ಗೊಂದಲಗಳಿಂದಲೇ ಆಡಳಿತಕ್ಕೆ ಇತಿಶ್ರೀ ಆಗಲಿದೆ ಎಂಬ ಬಲವಾದ ನಂಬಿಕೆ ನನ್ನದು’ ಎಂದು ಭವಿಷ್ಯ ನುಡಿದರು.

‘ಸಿದ್ದರಾಮಯ್ಯರಿಗೆ ಈ ಪರಿಸ್ಥಿತಿ ಬರಬಾರದಿತ್ತು. ಇದು ರಾಜ್ಯದ ಹಿತಾಸಕ್ತಿಗೆ ಪೂರಕವಲ್ಲ; ಒಳ್ಳೆಯ ಆಡಳಿತ ಕೊಡಲು ಸಾಧ್ಯವಿಲ್ಲ. ಪ್ರಶ್ನೆಗೆ ಉತ್ತರಿಸಿದ ಅವರು, ಉಚಿತ ಭಾಗ್ಯಗಳು ಸರ್ಕಾರದ ಖಜಾನೆ ಲೂಟಿಗೆ ಕಾರಣವಾಗಿವೆ. ಎಸ್‌-ಎಸ್‌ಟಿ ಮೀಸಲು ಹಣದಿಂದ ₹11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಅಹಿಂದ ಎನ್ನುತ್ತಿದ್ದ ಸಿದ್ದರಾಮಯ್ಯರ ಸರ್ಕಾರ ಬೇರೆಡೆಗೆ ವರ್ಗಾಯಿಸಿದೆ ಎಂದರೆ, ಅದು ಅವರ ನೀತಿಗೆ ವಿರುದ್ಧವಾದ ನಡೆ’ ಎಂದು ಟೀಕಿಸಿದರು.

‘ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದಲ್ಲಿ ಕೇಂದ್ರ ನಾಯಕತ್ವವು ನಿರ್ಧಾರ ತೆಗೆದುಕೊಳ್ಳಲಿದೆ. ಇದರ ಕುರಿತು ನಾವೇನೂ ಮಾತನಾಡುವಂಥದ್ದಿಲ್ಲ. ಕರ್ನಾಟಕದ ವಿದ್ಯಮಾನವನ್ನು ಗಮನಿಸಿ ಕೇಂದ್ರದ ನಾಯಕರು ಲೋಕಸಭಾ ಚುನಾವಣೆಗೆ ಬೇಕಾದ ಕಾರ್ಯತಂತ್ರದ ಕುರಿತು ಆಲೋಚಿಸಿದ್ದಾರೆ. ಅದರ ಆಧಾರದಲ್ಲಿ ಅವರು ಮುಂದುವರಿಯುತ್ತಾರೆ. ಅದರ ಕುರಿತು ನಾವಿಲ್ಲಿ ಕುಳಿತು ಕಾಮೆಂಟ್ ಮಾಡುವುದು ಸರಿಯಲ್ಲ’ ಎಂದು ಹೇಳಿದರು.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles