ಬೆಂಗಳೂರು : ಎಲೆಕ್ಷನ್ ಮುಗಿದಿದ್ದು, ಮಾಧ್ಯಮಗಳಲ್ಲಿ ಬಂದಿರೋ ಮತದಾನೋತ್ತರ ಸಮೀಕ್ಷಾ ವರದಿ ಬೇಕಿಲ್ಲ, ಈ ಹಿಂದಿನ ಎಕ್ಸಿಟ್ ಪೋಲ್ ಸಮೀಕ್ಷೆಗಳೆಲ್ಲ ಉಲ್ಟಾ ಹೊಡೆದಿದ್ದವು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶೀ ಬಿಎಲ್ ಸಂತೋಷ್ ಪ್ರತಿಕ್ರಿಯಿಸಿದ್ದಾರೆ.
2018 ರ ರಾಜ್ಯ ವಿಧಾನ ಸಭೆ ಚುನಾವಣೆಯಲ್ಲೂ ಬಿಜೆಪಿಯು 14 ಕ್ಷೇತ್ರಗಳ 24 ಸಾವಿರ ಬೂತ್ಗಳಲ್ಲಿ ಲೀಡ್ ಪಡೆದಿರಲಿಲ್ಲ ಎಂದಿದ್ದಾರೆ.
ಈ ಎಕ್ಸಿಟ್ ಪೋಲ್ ಸರ್ವೇಗಳ ಕುರಿತು ಟ್ವೀಟ್ ಮಾಡಿದ್ದಾರೆ. ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ನಂಬಕ್ಕಾಗಲ್ಲ, ಈ ಎಲ್ಲ ಸಮೀಕ್ಷೆಗಳು ಉಲ್ಟಾ ಹೊಡೆದಿದ್ದವು, ಈ ಸಲ ಬಿಜೆಪಿಗೆ 31 ಸಾವಿರ ಬೂತ್ ಗಳಲ್ಲಿ ಲೀಡ್ ಬರಲಿದೆ, ಎಷ್ಟು ಸ್ಥಾನಗಳಲ್ಲಿ ಗೆಲ್ತೀವಿ ಅಂತಾ ಸಮೀಕ್ಷೆ ನಡೆಸಿದವರಿಗೆ ಊಹಿಸಲು ಸಾಧ್ಯವಾಗಿರಲಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಸದ್ಯ ನಾಯಕರು ಕೊಂಚ ರಿಲಾಕ್ಸ್ ಮೂಡ್ ಗೆ ಹೋಗಿದ್ದು, ಎಲೆಕ್ಷನ್ ರಿಸಲ್ಟ್ ಗೆ ಕಾಯುತ್ತಿದ್ದಾರೆ. ಇನ್ನೂ ಸಿಎಂ ಬೊಮ್ಮಾಯಿ ಈ ವಿಚಾರವಾಗಿ ಸಮೀಕ್ಷೆಗಳೆಲ್ಲ ಉಲ್ಟಾ ಆಗಲಿದೆ, ಸಮೀಕ್ಷಗಳನ್ನು ಯಾವತ್ತೂ ನಂಬಲು ಸಾಧ್ಯವಿಲ್ಲ ಎಂದು ಹೇಳಿದ್ದರು.