ಬೆಂಗಳೂರು: ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸುವ ಬೆಂಗಳೂರು ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಲೋಗೋ ಸಿಎಂ ಬೊಮ್ಮಾಯಿ ಲಾಂಚ್ ಮಾಡಿದ್ದಾರೆ.
ಪುನೀತ್ ನಾಮಫಲಕದ ಕಾರ್ಯಕ್ರಮದಲ್ಲಿ 14ನೇ ವರ್ಷದ ಅಂತರಾಷ್ಟೀಯ ಚಿತ್ರೋತ್ಸವದ ಲೋಗೋ ಲಾಂಚ್ ಮಾಡಿದ್ದಾರೆ. ಈ ವೇಳೆ ಸಿಎಂ ಬೊಮ್ಮಾಯಿ ಅವರ ಜೊತೆ ಕಂದಾಯ ಸಚಿವ ಆರ್.ಅಶೋಕ್, ನಟ ರಾಘವೇಂದ್ರ ರಾಜ್‌ಕುಮಾರ್, ರಾಕ್‌ಲೈನ್ ವೆಂಕಟೇಶ್, ಭಾ.ಮ ಹರೀಶ್, ನಿರ್ದೇಶಕ ಅಶೋಕ್ ಕಶ್ಯಪ್ ಸೇರಿದಂತೆ ಹಲವರು ಭಾಗಿಯಾಗಿದ್ದರು.
ಪುನೀತ್ ರಾಜ್‌ಕುಮಾರ್ ನಾಮಫಲಕದ ಉದ್ಘಾಟನೆ ಕಾರ್ಯಕ್ರಮದ ವೇಳೆಯೇ ಸಿಎಂ ಬೊಮ್ಮಾಯಿ ಲಾಂಚ್ ಮಾಡಿದ್ದು, ನಾಯಂಡಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ವರೆಗಿನ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹೆಸರಿಡಬೇಕು ಎಂಬ ಬೇಡಿಕೆ ಇದೀಗ ಈಡೇರಿದೆ.
2023 ಮಾರ್ಚ್ 23ರಿಂದ 30ರವರೆಗೆ ಬೆಂಗಳೂರಿನ ಅಂತರಾಷ್ಟ್ರೀಯ ಚಿತ್ರೋತ್ಸವ ನಡೆಯಲಿದೆ. ಮುಖ್ಯ ಅತಿಥಿಯಾಗಿ ಬಾಲಿವುಡ್ ನ ಎವರ್ ಗ್ರೀನ್ ನಟಿ ರೇಖಾ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ಒಂದು ವಾರಗಳ ಕಾಲ ನಡೆಯುವ ಈ ಚಿತ್ರೋತ್ಸವಕ್ಕೆ 4 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.