Wednesday, March 22, 2023
spot_img
- Advertisement -spot_img

ಪ್ರಯಾಣದ ಶುಲ್ಕ ಇಳಿಕೆ ಮಾಡಿದರೆ ಅನುಕೂಲವಾಗುತ್ತದೆ : ಸಿಎಂ ಬೊಮ್ಮಾಯಿ

ಚಿಕ್ಕಬಳ್ಳಾಪುರ: ಎಕ್ಸ್‌ಪ್ರೆಸ್ ಗೋಲ್ಡನ್ ಚಾರಿಯಟ್‌ ರೈಲಿನ ಶುಲ್ಕವನ್ನು ಇಳಿಕೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದಾರೆ. ಪ್ರಯಾಣದ ಶುಲ್ಕವನ್ನು ಇಳಿಕೆ ಮಾಡಿದರೆ, ರೈಲಿನಲ್ಲಿ ಹೆಚ್ಚೆಚ್ಚು ಪ್ರವಾಸಿಗರು ಪ್ರಯಾಣ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ಹಿಂದಿನ ನಿಯಮ ಹಾಗೂ ಷರತ್ತುಗಳನ್ನೇ ಅನುಸರಿಸುವಂತೆಯೂ ಮನವಿ ಮಾಡಿಕೊಂಡಿದ್ದಾರೆ.

ಐಷಾರಾಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಕನಿಷ್ಠ 14 ಕೋಚ್‌ಗಳನ್ನು ಇರಬೇಕಿದೆ. ಪ್ರಸ್ತುತದ ಗೋಲ್ಡನ್‌ ಚಾರಿಯೆಟ್‌ ರೈಲಿನಲ್ಲಿ ಒಟ್ಟು 18 ಕೋಚ್‌ಗಳಿದ್ದು, ಅದರಲ್ಲಿ 11 ಅತಿಥಿಗಳಿಗಾಗಿಯೇ ಇದೆ. ಇದರ ಜೊತೆಗೆ ಎರಡು ರೆಸ್ಟೋರೆಂಟ್‌ಗಳು, ಒಂದು ಬಾರ್, ಎರಡು ಪವರ್ ಕಾರ್‌ಗಳು ಮತ್ತು ಒಂದು ಆರೋಗ್ಯ ಕೋಚ್ ಇದೆ ಎಂದು ತಿಳಿದುಬಂದಿದೆ. ಗೋಲ್ಡನ್ ಚಾರಿಯಟ್ ರೈಲನ್ನು ನವೀಕರಿಸಲಾಗಿದ್ದು, ಈ ರೈಲು 2023ರ ಜನವರಿ ಅಂತ್ಯದಲ್ಲಿ ಮೊದಲ ಪ್ರಯಾಣವನ್ನು ಆರಂಭಿಸಲಿದೆ ಎಂದು ತಿಳಿದು ಬಂದಿದೆ.

ಮದುವೆಗಳು, ಆರತಕ್ಷತೆಗಳು ಮತ್ತು ಕಚೇರಿ ಪ್ರವಾಸಗಳಿಗೆ ರೈಲು ನೀಡುವ ಹಳೆಯ ಯೋಜನೆಯನ್ನು ಮರಳಿ ತರಲು ಇಲಾಖೆ ಚಿಂತನೆ ನಡೆಸಿದ್ದು, ಬೇಡಿಕೆಗೆ ಅನುಗುಣವಾಗಿ ಕಸ್ಟಮೈಸ್ ಟ್ರಿಪ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Related Articles

- Advertisement -

Latest Articles