ತುಮಕೂರು: ಜಮೀನು ಖಾತೆ ಮಾಡಿಸಿಕೊಡುವ ಸಂಬಂಧ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಉಪವಿಭಾಗಾಧಿಕಾರಿ ತಬಸುಮ್ ಜಹೇರಾ ಹಾಗೂ ನೌಕರ ಶಬ್ಬೀರ್ ಅಹಮ್ಮದ್‌ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ತಲಾ ನಾಲ್ಕು ವರ್ಷ ಜೈಲು 20 ಸಾವಿರ ದಂಡ ವಿಧಿಸಿ ಶಿಕ್ಷೆ ವಿಧಿಸಿದೆ.
ತಬಸುಮ್ ಜಹೇರಾ ಕೆಐಎಡಿಬಿಯಲ್ಲಿ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಹಾಗೂ ಶಬ್ಬೀರ್ ಅಹಮ್ಮದ್ ತುಮಕೂರು ತಾಲ್ಲೂಕು ಬೆಳ್ಳಾವಿ ನಾಡಕಚೇರಿಯಲ್ಲಿ ಉಪತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ: ಸುಧಾಕರ್ ನಿಮ್ಮ ಸ್ಥಾನಕ್ಕೆ ತಕ್ಕಂತೆ ಜವಾಬ್ದಾರಿಯಿಂದ ವರ್ತಿಸಿ : ಬಿ.ವೈ ವಿಜಯೇಂದ್ರ
ತಮ್ಮ ತಂದೆಗೆ ಸೇರಿದ್ದ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದು, ಮತ್ತೆ ತಮ್ಮ ತಂದೆ ಹೆಸರಿಗೆ ದಾಖಲೆಗಳನ್ನು ವರ್ಗಾವಣೆ ಮಾಡಿಕೊಡುವಂತೆ ಕೋರಿ
ಕುಣಿಗಲ್ ತಾಲ್ಲೂಕು ಯಡಿಯೂರು ಹೋಬಳಿ ಅವರಗೆರೆ ಗ್ರಾಮದ ವಿ.ಟಿ.ಜಯರಾಮ್ ಎಂಬುವರು ತಂದೆ ಹಸರಿಗೆ ಖಾತೆ ಬದಲಾವಣೆ ಕೋರಿ ಮನವಿ ಮಾಡಿದ್ದರು. ಈ ಬಗ್ಗೆ ಕಚೇರಿ ನೌಕರ ಶಬ್ಬೀರ್ ಅಹಮ್ಮದ್ ಜತೆ ಮಾತುಕತೆ ನಡೆಸುವಂತೆ ತಬಸುಮ್ ಜಹೇರಾ ಸೂಚಿಸಿದ್ದರು. ಆದರೆ ಶಬ್ಬೀರ್ ದಾಖಲೆ ಹೆಸರು ಬದಲಾವನೆಗೆ 35 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅದರಲ್ಲಿ 15 ಸಾವಿರವನ್ನು ಶಬ್ಬೀರ್ ಇಟ್ಟುಕೊಂಡು, 20 ಸಾವಿರ ಹಣವನ್ನು ತಬಸುಮ್‌ಗೆ ಜಯರಾಮ್ ಮೂಲಕವೇ ಕೊಡಿಸಿದ್ದರು.
ಇದನ್ನೂ ಓದಿ: HSRP ನಂಬರ್ ಪ್ಲೇಟ್ ಟೆಂಡರ್‌ನಲ್ಲಿ ಗೋಲ್ಮಾಲ್?
ಆದರೆ ಲಂಚ ಪಡೆದರೂ ಕೆಲಸ ಮಾಡಿಕೊಟ್ಟಿರಲಿಲ್ಲ. ಆದರೆ ಮತ್ತೆ ಶಬ್ಬೀರ್ 25 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಇದಾದ ಬಳಿಕ ಜಯರಾಮ್ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ 2017 ಮೇ 23ರಂದು ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.