Friday, September 29, 2023
spot_img
- Advertisement -spot_img

ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ ಬ್ರಿಟನ್ ಪ್ರಧಾನಿ

ನವದೆಹಲಿ : ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿರುವ ರಿಷಿ ಸುನಕ್ ಅವರು ತಮ್ಮ ಪತ್ನಿ ಅಕ್ಷತಾ ಮೂರ್ತಿ ಅವರೊಂದಿಗೆ ಇಂದು ಬೆಳಗ್ಗೆ ಅಕ್ಷರಧಾಮ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ : G20 Budget : ಜಿ20 ಶೃಂಗಸಭೆಯ ಖರ್ಚು ಎಷ್ಟು ಸಾವಿರ ಕೋಟಿ ಗೊತ್ತಾ?

ಭಾರತೀಯ ಪರಂಪರೆಯ ಮೊದಲ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರು ಸದ್ಯ ನವದೆಹಲಿಯಲ್ಲಿದ್ದು, ಈ ಮೊದಲು ಬಿಡುವಿನಿ ಅವಧಿಯಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಆಸೆಯನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ : G20 Summit : ದೆಹಲಿ ಘೋಷಣೆಗೆ ಒಮ್ಮತದ ಅಂಗೀಕಾರ: ಇದು ಭಾರತಕ್ಕೆ ಸಿಕ್ಕ ಜಯ!

“ನಾನು ಹೆಮ್ಮೆಯ ಹಿಂದೂ. ನಾನು ಬೆಳೆದದ್ದು ಹೀಗೆಯೇ, ನಾನು ಹಾಗೆಯೇ ಇದ್ದೇನೆ ಕೂಡ. ನಾನು ಮುಂದಿನ ಒಂದೆರಡು ದಿನ ಇಲ್ಲಿರುವಾಗ ಮಂದಿರಕ್ಕೆ ಭೇಟಿ ನೀಡಲಿದ್ದೇನೆ. ನಾನು ಈಗಷ್ಟೇ ರಕ್ಷಾಬಂಧನವನ್ನು ಆಚರಿಸಿಕೊಂಡಿದ್ದೇನೆ. ನನಗೆ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲು ಸಮಯವಿರಲಿಲ್ಲ, ಆದ್ದರಿಂದ ಮಂದಿರಕ್ಕೆ ಭೇಟಿ ನೀಡಿದರೆ ನಾನು ಅದನ್ನು ಸರಿದೂಗಿಸಬಹುದು” ಎಂದು ಸುದ್ದಿ ಮಾಧ್ಯಮಗಳೊಂದಿಗೆ ತಿಳಿಸಿದ್ದಾರೆ.

ಇದನ್ನೂ ಓದಿ : ಮಾಜಿ ರಾಷ್ಟ್ರಪತಿ ಕಲಾಂ ಅವಹೇಳನ : ಅರ್ಚಕನ ವಿರುದ್ಧ ಬಿತ್ತು ಕೇಸ್!

ಯಾರು ಈ ರಿಷಿ ಸುನಕ್…?
ರಿಷಿ ಸುನಾಕ್ 1980ರಲ್ಲಿ ಹ್ಯಾಂಪ್​ಶೈರ್​ನ ಸೌಥಾಂಪ್ಟನ್​ನಲ್ಲಿ ಜನಿಸಿದರು. ಅವರದ್ದು ಪಂಜಾಬ್ ಮೂಲದ ಕುಟುಂಬ. ಆಕ್ಸ್​ಫರ್ಡ್​ನ ಲಿಂಕಾನ್ ಕಾಲೇಜಿನಲ್ಲಿ ರಾಜಕೀಯ, ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ ರಿಷಿ ಸುನಾಕ್ ಕ್ಯಾಲಿಫೋರ್ನಿಯಾದ ಸ್ಟಾನ್​ಫೋರ್ಡ್ ವಿವಿಯಲ್ಲಿ ಎಂಬಿಎ ಮಾಡಿದರು.

ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಕ್, ಮೇ 2015ರಂದು ವರ್ಜಿನಿಯಾದ ರಿಚ್ಮಂಡ್ ಕ್ಷೇತ್ರದಿಂದ ಕನ್ಸರ್ವೆಟಿವ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಈ ಸಂದರ್ಭದಲ್ಲಿ ಒಟ್ಟು ಬಲದ ಅರ್ಧಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಅವರಿಗೆ ಪ್ರಧಾನಿಯಾಗಲು ಬೆಂಬಲ ನೀಡಿದ್ದರು. ಸುಮಾರು 200 ವರ್ಷಗಳಿಗೂ ಹೆಚ್ಚು ಕಾಲ ಭಾರತವನ್ನು ಆಡಳಿತ ಮಾಡಿದ್ದ ಬ್ರಿಟನ್, ಇದೀಗ ಇದೆ ಮೊದಲ ಬಾರಿಗೆ ಈ ದೇಶವನ್ನು ಭಾರತೀಯ ಮೂಲದ ರಿಷಿ ಸುನಕ್ ಆಡಳಿತ ನಡೆಸುತ್ತಿದ್ದಾರೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles