Sunday, September 24, 2023
spot_img
- Advertisement -spot_img

ಮಹಿಳಾ ಮೀಸಲಾತಿ ಮಸೂದೆ ಹೆಚ್‌.ಡಿ. ದೇವೇಗೌಡರ ಕನಸಿನ ಕೂಸು: ಸಂಸದೆ ಕವಿತಾ

ಹೈದರಾಬಾದ್‌: ಸಂಸತ್‌ ವಿಶೇಷ ಅಧಿವೇಶದಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ಚರ್ಚೆ ನಡೆಯಲಿದೆ. ಈ ಬಗ್ಗೆ ಮಾತನಾಡಿರುವ ಬಿಆರ್‌ಎಸ್ ಪಕ್ಷದ ಸಂಸದೆ ಕೆ.ಕವಿತಾ, ಇದು ಹೆಚ್‌.ಡಿ.ದೇವೇಗೌಡರ ಕನಸಿನ ಕೂಸು ಎಂದಿದ್ದಾರೆ.

ಹೆಚ್‌.ಡಿ.ದೇವೇಗೌಡ ಅವರು ಮಹಿಳಾ ಮೀಸಲಾತಿ ಮಸೂದೆ ಪರಿಚಯಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆಗ ಕಾಂಗ್ರೆಸ್ ಪಕ್ಷವು ತಮ್ಮ ಅದೃಷ್ಟವನ್ನು ಪರೀಕ್ಷಿಸುವುದಾಗಿ ಹೇಳಿತು. ಬಳಿಕ ರಾಜ್ಯಸಭೆಯಲ್ಲಿ ಅಂಗೀಕರಿಸಿದರು. ಆ ಕ್ರೆಡಿಟ್ ಅನ್ನು ಯಾವಾಗಲೂ ಸೋನಿಯಾ ಗಾಂಧಿಯವರಿಗೆ ನೀಡುತ್ತೇವೆ.

ಆದರೆ, ಕಳೆದ 16 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಈ ವಿಚಾರದ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. 2019ರ ತಮ್ಮ ಇತ್ತೀಚಿನ ಪ್ರಣಾಳಿಕೆಯಲ್ಲೂ ಮಹಿಳಾ ಮೀಸಲಾತಿ ಮಸೂದೆಯನ್ನು ಉಲ್ಲೇಖಿಸಲು ಅವರು ಮರೆತಿದ್ದಾರೆ. ನಿನ್ನೆ, ಹೈದರಾಬಾದ್‌ನಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲೂ ಬಲವಂತವಾಗಿ ನಿರ್ಣಯವನ್ನು ಮಾಡಬೇಕಾಯಿತು. ಏಕೆಂದರೆ ನಮ್ಮ ಸಿಎಂ ಕೆಸಿಆರ್ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಎಂದು ಕವಿತಾ ಹೇಳಿದರು.

ಇದನ್ನೂ ಓದಿ: ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಅಂಗೀಕರಿಸಲು ಕಾಂಗ್ರೆಸ್ ಆಗ್ರಹ

ಇಂದಿನಿಂದ ಪ್ರಾರಂಭವಾಗುವ ಐದು ದಿನಗಳ ಸಂಸತ್ ವಿಶೇಷ ಅಧಿವೇಶನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿ ಅಂಗೀಕರಿಸುವಂತೆ ವಿವಿಧ ಪಕ್ಷಗಳು ಆಗ್ರಹಿಸಿದ್ದವು. ಬಹುಕಾಲದಿಂದ ಬಾಕಿ ಉಳಿದಿರುವ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಬೇಕು ಎಂದು ಕೇಂದ್ರ ಸರ್ಕಾರ ನಿನ್ನೆ ಕರೆದಿದ್ದ ಸರ್ವಪಕ್ಷಗಳ ಸಭೆಯಲ್ಲಿ ಹಲವು ನಾಯಕರು ಹೇಳಿದ್ದರು.

ಏನಿದು ಮಹಿಳಾ ಮೀಸಲಾತಿ ಮಸೂದೆ?: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲು ಮಹಿಳಾ ಮೀಸಲಾತಿ ಮಸೂದೆ ಪ್ರಯತ್ನಿಸುತ್ತಿದೆ. ಇದು ಹಲವು ವರ್ಷಗಳಿಂದ ಬಾಕಿ ಉಳಿದಿದ್ದು, ಇಂದಿನಿಂದ ನಡೆಯುತ್ತಿರುವ ಸಂಸತ್‌ ವಿಶೇಷ ಅಧಿವೇಶನದಲ್ಲಿ ಅಂಗೀಕಾರವಾಗುವ ಸಾಧ್ಯತೆ ಇದೆ.

ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ TwitterFacebook YoutubeInstagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Related Articles

- Advertisement -spot_img

Latest Articles