ಹುಬ್ಬಳ್ಳಿ: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ಗಟ್ಟಿಯಾಗಿದೆ. ಅದಕ್ಕೆ ಅಮಿತ್ ಶಾ ಇನ್ನಷ್ಟು ಶಕ್ತಿ ಹುರುಪು ಕೊಟ್ಟಿದ್ದಾರೆ. ಶಾ ರಾಜ್ಯ ನಾಯಕರಿಗೆ ಏನೂ ಸೂಚನೆ ಕೊಟ್ಟಿಲ್ಲ. ಆದರೆ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸೂಚನೆ ಕೊಟ್ಟಿದ್ದಾರೆ ಎಂದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದವರು ಹತಾಶರಾಗಿದ್ದಾರೆ ಎನ್ನುವುದು, ಅವರು ಬಳಸುವ ಭಾಷೆಯಲ್ಲಿ ವ್ಯಕ್ತವಾಗುತ್ತಿದೆ ಎಂದು ಹೇಳಿದರು. ಯಾರು ಏನೇ ಹೇಳಲಿ ರಿಯಾಲಿಟಿ ಬೇರೆಯಿದೆ. ಕಾಂಗ್ರೆಸ್‌ನವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಅಂದುಕೊಂಡಿದ್ದಾರೆ. ಅಮಿತ್ ಶಾ ಒಂದು ದಿನಕ್ಕೆ ಸಂಚಲನ ಉಂಟು ಮಾಡಿದ್ದಾರೆ , ಅಷ್ಟೇ ಅಲ್ಲದೇ ನಮ್ಮನ್ನು ಬಯ್ಯಲು ಈ ಹಿಂದೆ ಎಂದೂ ಬಳಸದ ಕೀಳುಮಟ್ಟದ ಭಾಷೆ ಬಳಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಬಾರಿ ನಮ್ಮ ಗೆಲುವು ಖಂಡಿತ ಬೆಳಗಾವಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ತಿಳಿಸಿದರು. ಬಿಜೆಪಿ ಇಡೀ ಕರ್ನಾಟಕದಲ್ಲಿ ಅತ್ಯಂತ ಆಳವಾಗಿ ಬೇರೂರಿರುವ ಪಕ್ಷ. ಕಾಂಗ್ರೆಸ್‌ನವರಿಗೆ ಸೋಲಿನ ಭೀತಿ ಶುರುವಾಗಿದೆ. ಹೀಗಾಗಿ ಅವರು ಬಳಸುವ ಭಾಷೆ ಕೀಳುಮಟ್ಟದ್ದಾಗಿದೆ. ಇಂತಹವರನ್ನು ಜನರು ಯಾವತ್ತೂ ಉನ್ನತ ಸ್ಥಾನದಲ್ಲಿ ಕೂಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್‌ನವರಿಗೆ ಇಂದು ಪ್ರಜಾಧ್ವನಿ ನೆನಪಾಗಿದೆ. ಐದು ವರ್ಷ ಅಧಿಕಾರ ಕೊಟ್ಟಾಗ ಏನು ಮಾಡಿದ್ರಿ? ಹಲವಾರು ಭಾಗ್ಯಗಳ ಮೂಲಕ ಜನರಿಗೆ ದೌರ್ಭಾಗ್ಯ ನೀಡುವ ಕೆಲಸ ಮಾಡಿದ್ದೀರಿ. ಸಾಮಾಜಿಕ ನ್ಯಾಯದ ಹೆಸರಲ್ಲಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೋಸ ಮಾಡುತ್ತಾ ಬಂದಿದ್ದೀರಿ ಎಂದು ಆರೋಪಿಸಿದ್ದಾರೆ