ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ರಿಲ್ಯಾಕ್ಸ್ ಮೂಡ್ನಲ್ಲಿದ್ದು, ತಮ್ಮ ಪತ್ನಿ ಚನ್ನಮ್ಮರ ಜೊತೆಗೆ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದರು.
ಸಿಎಂ ದಂಪತಿ ಮನೆ ದೇವತೆ ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, 2018 ರ ಚುನಾವಣೆಯಲ್ಲಿ ಕಾಂಗ್ರೆಸ್ಗೆ 107, ಬಿಜೆಪಿಗೆ 80 ಎಂದು ನೀವೇ ಎಕ್ಸಿಟ್ ಪೋಲ್ನಲ್ಲಿ ತೋರಿಸಿದ್ದೀರಿ. ಆದರೆ ಏನಾಯ್ತು? ಬಿಜೆಪಿಗೆ 104 ಸ್ಥಾನ ಬಂತು. ಕಾಂಗ್ರೆಸ್ಗೆ ಎಷ್ಟು ಸ್ಥಾನ ಬಂದವು? ಎಂದು ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿದರು. ಎಕ್ಸಿಟ್ ಪೋಲ್ ನಲ್ಲಿ ಬಂದಿರೋದನ್ನು ಫೈನಲ್ ಏನೂ ಅಲ್ಲ, ಅಲ್ಲಿ ಪ್ಲಸ್, ಮೈನಸ್ ಆಗುತ್ತೆ ಎಂದರು.
ಕರ್ನಾಟಕ ವಿಧಾನಸಭೆ ಮತದಾನಕ್ಕೆ ತೆರೆ ಬಿದ್ದಿದ್ದು, ಮತದಾನದ ನಂತರ ಎಲ್ಲ ರಾಜಕಾರಣಿಗಳು ರಿಲ್ಯಾಕ್ಸ್ ಆಗಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಡಿಕೆ ಸುರೇಶ್ ತಾಯಿಯನ್ನು ಭೇಟಿ ಮಾಡಿದ್ದಾರೆ, ಹೆಚ್‌ಡಿಕೆ ವಿದೇಶ ಪ್ರವಾಸದಲ್ಲಿದ್ದು, ಸಿ.ಪಿ.ಯೋಗೇಶ್ವರ್ ಕಾರ್ಯಕರ್ತರ ಜೊತೆಗೆ ಕಾಫಿ ಕುಡಿದು ರಿಲಾಕ್ಸ್ ಮೂಡ್ ನಲ್ಲಿದ್ದಾರೆ.