ರಾಯಚೂರು: ಬೆಳಗ್ಗೆಯೇ ಧ್ರುವನಾರಾಯಣ್ ಕುಟುಂಬಕ್ಕೆ ಶೋಕ ಸಂದೇಶ ಕಳಿಸಿದ್ದೇನೆ, ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿ , ಆರ್ ಧ್ರುವನಾರಾಯಣ ಅಜಾತಶತ್ರುವಾಗಿದ್ದರೆನ್ನುವುದು ನಿರ್ವಿವಾದಿತ. ತನ್ನ ಉತ್ತಮ ಸ್ನೇಹಿತರಾಗಿದ್ದ ಧ್ರುವನಾರಾಯಣ ಒಬ್ಬ ಪ್ರಾಮಾಣಿಕ ಮತ್ತು ಪ್ರಭಾವಿ ನಾಯಕರಾಗಿದ್ದರು, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದರು.
ಕಾಂಗ್ರೆಸ್ ಹಿರಿಯ ನಾಯಕ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್.ಧ್ರುವ ನಾರಾಯಣ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧೃವ ನಾರಾಯಣ್ ಮೈಸೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇನ್ನೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ ಸಾವಿಗೆ ಸಿದ್ದರಾಮಯ್ಯ ಮಧ್ಯಾಹ್ನದ ಹೊತ್ತಿಗೆ ಮೈಸೂರಲ್ಲಿರುವ ಮೃತರ ಮನೆಗೆ ತಲುಪಿ ಅಂತಿಮ ದರ್ಶನ ಪಡೆದರು. ನಂತರ ಸಿದ್ದರಾಮಯ್ಯ ಕುಟುಂಬದ ಸದಸ್ಯರ ಜೊತೆ ಕೂತು ಮಾತಾಡುತ್ತಾ ಅವರಿಗೆ ಸಾಂತ್ವನ ಹೇಳಿದರು. ಈ ವೇಳೆ ವಿರೋಧ ಪಕ್ಷದ ನಾಯಕನೊಂದಿಗೆ ಸಲೀಂ ಅಹ್ಮದ್ , ಪುತ್ರ ಶಾಸಕ ಯತೀಂದ್ರ ಸಿದ್ದರಾಮಯ್ಯ ಇದ್ದರು.