ಕಲಬುರಗಿ:ಯಾವುದೇ ಶಕ್ತಿಗೂ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರವುದನ್ನು ತಡೆಯಲು ಆಗುವುದಿಲ್ಲ. ಅನೇಕರು ತಾವೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಹೇಳಿಕೊಂಡು ತಿರುಕನ ಕನಸು ಕಾಣುತ್ತಾ ಓಡಾಟ ನಡೆಸಿದ್ದಾರೆ. ಆದರೆ, ಅದ್ಯಾವುದು ಕಾರ್ಯರೂಪಕ್ಕೆ ಬರುವುದಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಾದ್ಯಂತ ಬಿಜೆಪಿಯ ಬಗ್ಗೆ ಒಲವಿದ್ದು, ಬಿಜೆಪಿ ಪರ ವಾತಾವರಣ ನಿರ್ಮಾಣವಾಗಿದೆ, ಮುಂಬರುವ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿಯಲ್ಲಿ ನಾಯಕತ್ವ ಕೊರತೆಯಿದೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷದ ನಾಯಕರು ಏನನ್ನೂ ಸಹ ಮಾಡಿಲ್ಲ. ಏನ್ ಮಾಡಿದ್ದಾರೆ ಅನ್ನೋದು ಒಂದೆರಡು ಮೂರು ಮಾತು ಹೇಳಲಿ ನೋಡಣ ಎಂದರು.
ನಿಶ್ಚಿತವಾಗಿ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಮೋದಿಯಂತಹ ಒಬ್ಬ ಪ್ರಧಾನಿ ದೇಶಕ್ಕೆ ಲಭಿಸಿದ್ದು, ನಮ್ಮ ಸೌಭಾಗ್ಯವಾಗಿದೆ. ಕೇಂದ್ರ- ರಾಜ್ಯಗಳಲ್ಲಿ ಸರಕಾರದಿಂದ ನಡೆಯುತ್ತಿರುವ ಜನಪರ ಕಾರ್ಯ ನೋಡಿದ್ರೆ ಮುಂದಿನ ಬಾರಿ ನಾವೇ ಗೆಲ್ಲುತ್ತೇವೆ ಎಂದು ಅಭಿಪ್ರಾಯಪಟ್ಟರು.