ಉತ್ತರ ಪ್ರದೇಶ: ಖಾಸಗಿ ಆಸ್ಪತ್ರೆ ವೈದ್ಯರು ಮೇಯರ್‌ಗೆ ಶೂ ತೆಗೆದು ಒಳಬರಲು ಹೇಳಿದ್ದಕ್ಕೆ ಆಸ್ಪತ್ರೆ ಎದುರು ಬುಲ್ಡೋಜರ್‌ಗಳು ಪ್ರತ್ಯಕ್ಷವಾದ ಘಟನೆ ಉತ್ತರ ಪ್ರದೇಶದ ಲಕ್ನೋದ ಆಸ್ಪತ್ರೆಯಲ್ಲಿ ನಡೆದಿದೆ.
ನಗರದ ಮೇಯರ್ ಸುಷ್ಮಾ ಖರಕ್ವಾಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವಾಗ ಈ ಘಟನೆ ನಡೆದಿದೆ. ಮೇಯರ್ ಐಸಿಯು ವಾರ್ಡ್‌ಗೆ ಪ್ರವೇಶಿಸಲು ಮುಂದಾದಾಗ ಅಲ್ಲಿದ್ದ ವೈದ್ಯರು ಮೇಯರ್ ಹಾಗೂ ಅವರ ಸಿಬ್ಬಂದಿಗೆ ಶೂ ಬಿಚ್ಚಿ ಒಳ ಹೋಗಲು ಸೂಚಿಸಿದ್ದಾರೆ. ಆದರೆ ಈ ವೇಳೆ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ. ಐಸಿಯು ವಾರ್ಡ್‌ನಲ್ಲಿ ಮುನ್ಸಿಪಲ್ ಕಾರ್ಪೊರೇಶನ್‌ನ ಸೇನಾ ಬ್ರಿಗೇಡ್‌ನ ನಿವೃತ್ತ ಯೋಧ ಸುರೇನ್ ಕುಮಾರ್ ಚಿಕಿತ್ಸೆ ಪಡೆಯುತ್ತಿದ್ದರು.
ಇದನ್ನೂ ಓದಿ: ಚಂದ್ರನ ಮೇಲೆ ನಡೆದಾಡಿದ ಭಾರತ: ಇಸ್ರೋ
ಐಸಿಯುನಲ್ಲಿ ರೋಗಿಯಿದ್ದ ಕಾರಣ ಅವರಿಗೆ ಶೂ ಬಿಚ್ಚಿ ಒಳಹೋಗಲು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ವೇಳೆ ಅಧಿಕಾರಿಗಳು ಹಾಗೂ ವೈದ್ಯರ ನಡುವೆ ವಾಗ್ವಾದ ನಡೆದಿದೆ ಅಂತಲೂ ತಿಳಿದುಬಂದಿದೆ. ಇದಾದ ಬಳಿಕ ಮೇಯರ್ ಹೊರಟು ಹೋಗಿದ್ದು, ಕೆಲ ಹೊತ್ತಿನಲ್ಲಿ ಆಸ್ಪತ್ರೆ ಮುಂಭಾಗ ಬ್ಯಾನರ್ ಹಾಗೂ ಬುಲ್ಡೋಜರ್ ಕಾಣಿಸಿಕೊಂಡಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎನ್ನಲಾಗಿದೆ.
ಆದರೆ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಪತ್ರೆ ವೈದ್ಯರು, ಮೇಯರ್ ಹಾಗೂ ನಮ್ಮ ನಡುವೆ ಯಾವುದೇ ವಾಗ್ವಾದ ನಡೆದಿಲ್ಲ. ಆಸ್ಪತ್ರೆ ಹೊರಗೆ ಕಾಣಿಸಿಕೊಂಡ ಬ್ಯಾನರ್ ಹಾಗೂ ಬುಲ್ಡೋಜರ್‌ಗೂ ನಮಗೂ ಯಾವ ಸಂಬಂಧವೂ ಇಲ್ಲ. ಇದೆಲ್ಲ ಸುಳ್ಳು, ತಪ್ಪು ಮಾಹಿತಿ ಎಂದಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.