ಬೆಂಗಳೂರು : ಚುನಾವಣೆ ಕೆಲಸಕ್ಕೆ KSRTC ಬಸ್‌ಗಳ ಬಳಸಲಾಗುತ್ತಿದ್ದು, ಮೆಜೆಸ್ಟಿಕ್ನಲ್ಲಿ ತಮ್ಮ ಊರುಗಳಿಗೆ ಪ್ರಯಾಣಿಸಲು ಬಸ್ ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್‌ಗಳಿಲ್ಲದೆ ಜನ ಪರದಾಡುತ್ತಿದ್ದು, ನಿಲ್ದಾಣಕ್ಕೆ ಬರುವ ಮುನ್ನವೇ ಬಸ್‌ಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ತುಮಕೂರು, ಚಿತ್ರದುರ್ಗ, ರಾಯಚೂರು ಸೇರಿದಂತೆ ಇತರ ಜಿಲ್ಲೆಗಳತ್ತ ತೆರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಸ್‌ಗಳ ಸಂಖ್ಯೆ ಕಡಿಮೆಯಾಗಿದೆ. ಮತದಾನ ಮಾಡಲು ಊರುಗಳಿಗೆ ತೆರಳಲು ಮುಂದಾಗಿರುವ ಜನ ಬಸ್ ಸಿಗದೇ ಪರದಾಡುತ್ತಿದ್ದು, ಬಸ್‌ಗಳಿಗಾಗಿ ಕಾದು ನಿಂತು ಸುಸ್ತಾಗಿದ್ದಾರೆ.
ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಊರಿಗೆ ಹೊರಡಲು ಮೆಜೆಸ್ಟಿಕ್ಗೆ ಸಾವಿರಾರು ಜನರು ಆಗಮಿಸಿದ್ದಾರೆ. ಆದರೆ ಈ ಪ್ರಯಾಣಿಕರಿಗೆ ಬಸ್ ಸಿಗದೇ ಪರದಾಟ ಪಡುವಂತಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ನಗರದಲ್ಲಿ ನೆಲೆಸಿರುವ ಅನೇಕರು ನಾಳೆ ಮತದಾನಕ್ಕೆ ತವರೂರಿಗೆ ಹೋಗುತ್ತಿರುವ ಹಿನ್ನೆಲೆ ಹೆಚ್ಚುವರಿ ಸಾರಿಗೆ ಬಸ್ಗಳನ್ನು ಕಲ್ಪಿಸಲಾಗಿದೆ.
ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಬಳ್ಳಾರಿ, ಹಿರಿಯೂರು, ಚಳ್ಳಕೆರೆ ಕಡೆ ಹೆಚ್ಚುವರಿ ಬಸ್‌ಗಳ ಓಡಾಟ ಆರಂಭವಾಗಿದೆ. ಸರ್ಕಾರಿ ಸಾರಿಗೆ ಬಸ್ ಜೊತೆ ಖಾಸಗಿ ಬಸ್ ಸಹ ಬಹುತೇಕ ಫುಲ್ ಆಗಿವೆ.
ಸೋಮವಾರ ರಾತ್ರಿ, ಇಂದು(ಮಂಗಳವಾರ) ಬೆಳಗ್ಗೆಯಿಂದ ಬಸ್‌ಗಳು ರಶ್ ಆಗುತ್ತಿವೆ. ಇನ್ನು ಸರ್ಕಾರಿ ಬಸ್ಸುಗಳನ್ನ ಪೋಲಿಸ್ ಇಲಾಖೆ, ಬಿಬಿಎಂಪಿ, ಆರ್ಟಿಒ , ಸಾರಿಗೆ ಇಲಾಖೆಗಳ ಸಿಬ್ಬಂದಿಗೆ ಡ್ರಾಪ್- ಪಿಕಪ್ ಹಾಗೂ ಹಲವು ಚುನಾವಣಾ ಕೆಲಸಗಳ ನಿಮಿತ್ತ ಬಳಕೆ ಮಾಡಿಕೊಳ್ಳಲಾಗುತ್ತಿದೆ.