ಬೆಂಗಳೂರು : ಸಂಪುಟ ವಿಸ್ತರಣೆ ಯಾವಾಗ ಎಂದು ಚಿಂತೆಯಲ್ಲಿದ್ದವರಿಗೆ ಈಗ ಸರ್ಕಾರ ಶುಭ ಸುದ್ದಿ ನೀಡಲು ಮುಂದಾಗಿದೆ. ಸಂಕ್ರಾಂತಿ ಹೊತ್ತಲ್ಲಿ ಅವಕಾಶ ಸಿಗೋ ಭಾಗ್ಯ ಇದೆ ಎಂಬ ಸುದ್ದಿ ಕೇಳಿ ಬರ್ತಿದೆ.
ಸಿಎಂ ಬಸವರಾಜ ಬೊಮ್ಮಾಯಿ ಹೈಕಮಾಂಡ್ ಗೆ ಈ ವಿಚಾರವಾಗಿ ಒತ್ತಡ ಹೇರಿದ್ರೂ ಸರಿಯಾದ ಉತ್ತರ ಮಾತ್ರ ಸಿಕ್ಕಿರಲಿಲ್ಲ ಸಚಿವ ಕೆ ಎಸ್ ಈಶ್ವರಪ್ಪ, ಜಾರಕಿಹೊಳಿ ಸಂಪುಟ ಸೇರ್ಪಡೆ ಮಾಡಿಕೊಳ್ಳಿ ಎಂದು ಸಿಎಂ ಬೊಮ್ಮಾಯಿ ಭೇಟಿ ಮಾಡಿ ಒತ್ತಡ ಹೇರಿದ್ದರು. ಅಂದ ಹಾಗೇ ಸದ್ಯದ ಬಲ್ಲ ಮೂಲಗಳ ಪ್ರಕಾರ ಸಂಕ್ರಾಂತಿ ಬಳಿಕ 6 ಮಂದಿಗೆ ಸಚಿವರಾಗುವ ಅವಕಾಶ ಸಿಗಲಿದೆ ಎನ್ನಲಾಗುತ್ತಿದ್ದು, ಈಶ್ವರಪ್ಪನವರು ಸಚಿವರಾಗೋದು ಖಚಿತ ಎಂದು ತಿಳಿದು ಬಂದಿದೆ.
ಅಷ್ಟೇ ಅಲ್ಲದೇ ಜಾರಕಿಹೊಳಿ ವಿಚಾರ ಸದ್ಯ ಪರಿಶೀಲನೆ ನಡೆಸಲಾಗುತ್ತಿದೆ. ಜೊತೆಗೆ ಹೊಸ ಮುಖಗಳಿಗೆ ಮಣೆ ಹಾಕಲಾಗ್ತಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ವಿಧಾನ ಸಭೆ ಚುನಾವಣೆ ಹಿನ್ನೆಲೆ ಸಂಪುಟ ವಿಸ್ತರಣೆ ಮಾಡಲು ಮುಂದಾಗಿರೋದು ಅಚ್ಚರಿ ಉಂಟುಮಾಡಿದ್ದಲ್ಲದೇ , ಹೈಕಮಾಂಡ್ ಸಂಪುಟ ಸೇರ್ಪಡೆ ವಿಚಾರವಾಗಿ ಹೇಗೆ ನಿರ್ಧಾರ ಕೈಗೊಳ್ಳುತ್ತೆ ಅನ್ನೋದು ಕುತೂಹಲಕಾರಿಯಾಗಿದೆ.
ಮೂಲಗಳ ಪ್ರಕಾರ ಜನವರಿ ತಿಂಗಳ ಮೊದಲ ವಾರ ಇಲ್ಲವೇ 2ನೇ ವಾರದಲ್ಲಿ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.