ನವದೆಹಲಿ: ಸನಾತನ ಧರ್ಮ ಕುರಿತು ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯ್‌ನಿಧಿ ಸ್ಟಾಲಿನ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗ್ತಿದೆ. ಇದೀಗ ಅವರ ವಿರುದ್ಧ ದೂರು ದಾಖಲಾಗಿದ್ದು, ಎಫ್‌ಐಆರ್ ದಾಖಲಿಸುವಂತೆ ವಕೀಲರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ವಕೀಲ ವಿನೀತ್ ಜಿಂದಾಲ್, ‘ ಇದು ಪ್ರಚೋದನಕಾರಿ ಹೇಳಿಕೆ ಮತ್ತು ಸನಾತನ ಧರ್ಮದ ವಿರುದ್ಧವಾಗಿದೆ. ಹೀಗಾಗಿ ದ್ವೇಷಪೂರಿತ ಭಾಷಣ ಎಂದು ಪರಿಗಣಿಸಿ ದೂರು ನೀಡಿದ್ದೇವೆ, ಎಫ್‌ಐಆರ್ ದಾಖಲಿಸುವಂತೆ ನಾವು ಮನವಿ ಮಾಡುತ್ತೇವೆ. ದೆಹಲಿ ಪೊಲೀಸ್ ಕಮಿಷನರ್, ವಾಯುವ್ಯ ಡಿಸಿಪಿ ಮತ್ತು ದೆಹಲಿ ಪೊಲೀಸರ ಸೈಬರ್ ಸೆಲ್ ಮತ್ತು ಆತನ ವಿರುದ್ಧ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ನಾವು ಮನವಿ ಮಾಡುತ್ತೇನೆ. ಈ ರೀತಿಯ ವ್ಯಕ್ತಿಗೆ ಸೂಕ್ತವಾದ ಸ್ಥಳವೆಂದರೆ ಜೈಲು. ಆದಷ್ಟು ಬೇಗ ಅವರು ಕಂಬಿ ಹಿಂದೆ ಇರುತ್ತಾರೆ’ ಎಂದಿದ್ದಾರೆ.
ಇದನ್ನೂ ಓದಿ: ಬಡವರ ಸರ್ಕಾರ ಬರಲಿದೆ, ಅದಾನಿಯದ್ದಲ್ಲ : ರಾಹುಲ್ ಗಾಂಧಿ
ಆದರೆ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿರುವ ಉದಯ್‌ನಿಧಿ ಸ್ಟಾಲಿನ್, ‘ನಾನು ನನ್ನ ಮಾತಿಗೆ ಬದ್ಧನಾಗಿದ್ದೇನೆ ಮತ್ತು ಯಾವುದೇ ಕಾನೂನು ಸವಾಲನ್ನು ಎದುರಿಸಲು ಸಿದ್ಧ’ ಎಂದಿದ್ದಾರೆ.ಇದಕ್ಕೂ ಮೊದಲು ತಮಿಳುನಾಡು ಪ್ರಗತಿಪರ ಲೇಖಕರ ಕಲಾವಿದರ ಸಂಘ ಚೆನ್ನೈನಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದ ಅವರು, ‘ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ’ ಎಂದಿದ್ದರು.
ಇದನ್ನೂ ಓದಿ: ‘ಸನಾತನ ಧರ್ಮ ನಿರ್ಮೂಲನೆ’ ಹೇಳಿಕೆ; ಕ್ರಿಶ್ಚಿಯನ್ ಮಿಷನರಿಗಳು ಬೆಳೆಸುವ ಕಲ್ಪನೆ ಎಂದ ಅಣ್ಣಾಮಲೈ
ಜೊತೆಗೆ ನೀವು ಸಮ್ಮೇಳನದ ಹೆಸರನ್ನು ‘ಸನಾತನ ವಿರೋಧಿ ಸಮಾವೇಶ’ ಎನ್ನುವುದಕ್ಕಿಂತ ‘ಸನಾತನ ನಿರ್ಮೂಲನಾ ಸಮಾವೇಶ’ ಎಂದು ಇರಿಸಿದ್ದೀರಿ, ಅದನ್ನು ನಾನು ಪ್ರಶಂಸಿಸುತ್ತೇನೆ. ‘ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಆದರೆ, ಅದನ್ನು ರದ್ದುಗೊಳಿಸಲೇಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕರೋನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇದನ್ನು ನಿರ್ಮೂಲನೆ ಮಾಡಬೇಕು. ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು’ ಎಂದಿದ್ದರು.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.