ಕೊಪ್ಪಳ : ಉದ್ಯಮಿ ಗೋವಿಂದ ಪೂಜಾರಿಯವರಿಗೆ ಬಹುಕೋಟಿ ರೂ.ಗಳ ವಂಚನೆ ಪ್ರಕರಣದಲ್ಲಿ ವಂಚಿಸಿರುವ ಚೈತ್ರಾ ಕುಂದಾಪುರ ರೀತಿಯಲ್ಲೆ ಕೊಪ್ಪಳ ಜೆಲ್ಲೆಯಲ್ಲೂ ಬಿಜೆಪಿ ಮುಖಂಡರೊಬ್ಬರಿಗೆ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ದೆಹಲಿ ಮೂಲದ ವಿಶಾಲ್ ನಾಗ್ ಮತ್ತು ಬೆಂಗಳೂರಿನ ಜೀತು,ಗೌರವ್ ಎಂಬುವವರು ಎಸ್ಸಿ ಮೀಸಲು ಕ್ಷೇತ್ರವಾಗಿರುವ ಕನಕಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗೆ ವಂಚಿಸಿದ್ದಾರೆ. ಬಿಜೆಪಿ ಮುಖಂಡ ಜಿ. ತಿಮ್ಮಾರೆಡ್ಡಿ ಎಂಬುವವರು ತಮ್ಮ ಪತ್ನಿಗೆ ಟಿಕೆಟ್ ಕೊಡಿಸಲು ಹಲವು ರೀತಿಯ ಕಸರತ್ತುಗಳನ್ನು ಮಾಡಿದರೂ ಸಹ ಟೆಕೆಟ್ ದಕ್ಕುವುದು ಅನುಮಾನವಾಗಿತ್ತು.
ಇದನ್ನೂ ಓದಿ : ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಬಿಜೆಪಿಯಿಂದ ‘ಕಾವೇರಿ ರಕ್ಷಣಾ ಯಾತ್ರೆ’
ಇದನ್ನೆ ಬಂಡವಾಳ ಮಾಡಿಕೊಂಡ ವಂಚಕರು ತಿಮ್ಮಾರೆಡ್ಡಿಯನ್ನು ಸಂಪರ್ಕಿಸಿ ತಮ್ಮ ಪತ್ನಿಗೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಬರೋಬ್ಬರಿ 21 ಲಕ್ಷ ಹಣ ಪಂಗನಾಮ ಹಾಕಿದ್ದಾರೆ. ತಮಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪರಿಚಯವಿದ್ದಾರೆ. ರಾಜ್ಯದಲ್ಲಿ ಸಮೀಕ್ಷೆ ಮಾಡುತ್ತಿದ್ದೇವೆ. ಅದರಲ್ಲಿ ನಿಮ್ಮ ಹೆಸರು ಮುಂಚೂಣಿಗೆ ತರುತ್ತೇವೆ ಎಂದು ಸುಳ್ಳು ಹೇಳಿ ವಂಚಿಸಿದ್ದಾರೆ.
ತಾವು ಕೇಂದ್ರ ಬಿಜೆಪಿ ಚುನಾವಣೆ ಸಮೀಕ್ಷೆ ಸಮಿತಿ ಮುಖ್ಯಸ್ಥನೆಂದು ಪರಿಚಯಿಸಿಕೊಂಡಿದ್ದ ವಿಶಾಲ್ ನಾಗ್‌ನನ್ನು ನಂಬಿ ಆತನ ಬ್ಯಾಂಕ್ ಖಾತೆಗ 2 ಲಕ್ಷ ರೂ. ನಗದು ಹಾಗೂ 19 ಲಕ್ಷ ರೂ. ನೇರವಾಗಿ ಆಕಾಂಕ್ಷಿಯ ಪತಿ ತಲುಪಿಸಿದ್ದರು.
ಕೊನೆಗೆ ಇತ್ತ ಕಡೆ ಟಿಕೆಟ್ ಕೂಡ ಸಿಗದೇ, ಅತ್ತ ಹಣವೂ ವಾಪಸ್ ಬಾರದ ಹಿನ್ನೆಲೆ ಕಂಗಾಲಾಗಿರುವ ಮುಖಂಡ ಮೂವರ ವಿರುದ್ದ ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ರೀತಿಯೇ ಬಹಳ ಜನರಿಗೆ ಇವರ ತಂಡ ಮೋಸ ಮಾಡಿದೆ. ಅವರ ಬಂಧನವಾಗಿ ತಕ್ಕ ಶಿಕ್ಷೆಯಾಗಬೇಕೆಂದು ತಿಮ್ಮಾರೆಡ್ಡಿ ಪೊಲೀಸರನ್ನು ಆಗ್ರಹಿಸಿದ್ದಾರೆ.
ಕನ್ನಡದಲ್ಲಿ ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ನಮ್ಮ ಸೋಶಿಯಲ್ ಮೀಡಿಯಾ ಪುಟಗಳಾದ Twitter, Facebook , Youtube, Instagram ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.